ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸಮಾಜದಲ್ಲಿನ ಸವಾಲುಗಳನ್ನು ಮೆಟ್ಟಿನಿಂತು ಉತ್ತಮ ಜೀವನ ಕಂಡುಕೊಳ್ಳಲು ಹೆಣ್ಣುಮಕ್ಕಳು ಶೈಕ್ಷಣಿಕ ಸಾಧನೆಯ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಇ.ಗಂಗಾಧರರಾವ್ ಹೇಳಿದರು.ಕಾಲೇಜಿನ ನಿರ್ವಹಣಾ ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಪ್ರಥಮ ವರ್ಷದ ಬಿಬಿಎ ಪದವಿ ವಿದ್ಯಾರ್ಥಿನಿಯರಿಗೆ ರಾಜ್ಯಶಿಕ್ಷಣ ಕ್ರಮದ ಪಠ್ಯಪುಸ್ತಕಗಳನ್ನು ದಾನಿಗಳಾದ ನಗರದ ನೂತನ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಕವಿತಾ ನೆರವಿನಿಂದ ಉಚಿತವಾಗಿ ವಿತರಿಸಿ ಮಾತನಾಡಿದರು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ
ಪದವಿ ಮುಗಿಸಿ ಮದುವೆ ಮಾಡಿಕೊಂಡು ಹೊಸ ಜೀವನ ನಡೆಸುವುದು ಒಂದು ಹಾದಿಯಾದರೂ, ಅದರ ಜತೆಗೆ ನೀವು ಓದಿದ ಶಿಕ್ಷಣ ನಿಮ್ಮ ಸ್ವಾವಲಂಬಿ ಬದುಕಿಗೂ ಕಾರಣವಾಗಬೇಕು. ಮಹಿಳೆಯರಿಗೆ ಸರ್ಕಾರ ಇಂದು ಎಲ್ಲಾ ರೀತಿಯ ನೆರವುನೀಡುತ್ತಿದೆ, ಸ್ವಾವಲಂಬಿ ಬದುಕಿಗೂ ನೆರವಾಗುತ್ತಿದೆ, ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಸಾಧಕರಾಗಿ ಹೊರಹೊಮ್ಮಬೇಕು ಎಂಬುದು ಎಲ್ಲರ ಅಭಿಲಾಷೆ ಎಂದರು.ಶಿಕ್ಷಣಕ್ಕೆ ನೆರವಾಗುವ ಉದ್ದೇಶ
ಪುಸ್ತಕಗಳ ದಾನಿ ಹಾಗೂ ಉಪನ್ಯಾಸಕಿ ಕವಿತಾ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿನಿಯರಿಗೆ ನೆರವಾಗುವ ಇಚ್ಚೆಯಿಂದ ಈ ನೆರವು ನೀಡಿದ್ದೇನೆ, ಹೆಣ್ಣು ಮಕ್ಕಳ ಶೈಕ್ಷಣಿಕ ಬದುಕಿಗೆ ನೆರವಾಗುವ ಪ್ರಯತ್ನ ಮಾಡಿದ್ದೇನೆ, ಈ ಪುಸ್ತಕಗಳು ನಿಮ್ಮ ಸಾಧನೆಗೆ ನೆರವಾದರೆ ಸಾರ್ಥಕ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ನಿರ್ವಹಣಾ ವಿಭಾಗದ ಮುಖ್ಯಸ್ಥ ಜಿ.ಎಂ.ಪ್ರಕಾಶ್, ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ.ಕೆ.ರಾಮಕೃಷ್ಣ, ಕೆ.ಆರ್.ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಕೆ.ಆರ್.ಮಂಜುಳಾ, ಮಹಿಳಾ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ.ಸೌಮ್ಯ, ಡಾ.ಸುಮಂಗಳ, ಡಾ.ಮುನಿರಾಜು, ವೇಣು, ರಜನಿ, ಮಂಜುಳಾ, ಡಾ.ವಿ.ರಮೇಶ್ ಮತ್ತಿತರರು ಇದ್ದರು.