ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ವಿಶ್ವಗುರು: ಡಾ.ವೀರಣ್ಣ ಚರಂತಿಮಠ

| Published : May 01 2025, 12:45 AM IST

ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ವಿಶ್ವಗುರು: ಡಾ.ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆಸತ್ಯ ಶುದ್ಧ ಕಾಯಕ ನಿಷ್ಠೆಯಿಂದ ಮಾತ್ರ ಸಮಾಜ ಪರಿಶುದ್ಧತೆ ಸಾಧ್ಯವೆಂಬ ಶರಣ ಚಿಂತನೆಯನ್ನು ಜಗತ್ತಿಗೆ ಸ್ವತಃ ಪ್ರಯೋಗದ ಮೂಲಕ ಸಾರಿ ಯಶಸ್ವಿಯಾದವರು ಕಾಯಕಯೋಗಿ ಬಸವಣ್ಣನವರು ಎಂದು ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸತ್ಯ ಶುದ್ಧ ಕಾಯಕ ನಿಷ್ಠೆಯಿಂದ ಮಾತ್ರ ಸಮಾಜ ಪರಿಶುದ್ಧತೆ ಸಾಧ್ಯವೆಂಬ ಶರಣ ಚಿಂತನೆಯನ್ನು ಜಗತ್ತಿಗೆ ಸ್ವತಃ ಪ್ರಯೋಗದ ಮೂಲಕ ಸಾರಿ ಯಶಸ್ವಿಯಾದವರು ಕಾಯಕಯೋಗಿ ಬಸವಣ್ಣನವರು ಎಂದು ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಬಾಗಲಕೋಟೆ, ಅಖಿಲ ಭಾರತ ವೀರಶೈವ ಮಹಾಸಭಾ ಬಾಗಲಕೋಟೆ, ಶರಣ ಸಾಹಿತ್ಯ ಪರಿಷತ್ತು, ಶಿವಾನುಭವ ಸಮಿತಿ, ಕಣವಿ ಟ್ರಸ್ಟ್ , ಬಿವಿವಿ ಅಕ್ಕನ ಬಳಗ, ಕದಳಿ ವೇದಿಕೆಗಳ ಸಹಯೋಗದಲ್ಲಿ ಜರುಗಿದ ಭಕ್ತಿ ಭಂಡಾರಿ ಬಸವ ಜಯಂತಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ಜಾಗತಿಕವಾಗಿ ಪ್ರತಿಯೊಂದು ದೇಶ ವಿಚಿತ್ರ ರೀತಿಯ ಸಮಸ್ಯೆ ಎದುರಿಸುತ್ತಿವೆ, ಅವು ಪರಿಹಾರಗಳಿಗಾಗಿ ತಾಕಲಾಡುತ್ತಿವೆ, ಆದರೆ ಭಾರತ ದೇಶ ಮಾತ್ರ ಅಂತಹ ಎಲ್ಲ ಬಗೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ವೇದೋಪನಿಷತ್ತ್ ಮೊದಲ್ಗೊಂಡು ಕಾಲಕ್ಕಗಣುಗವಾಗಿ ಬಸವಣ್ಣವರಂತಹ ಮಹಾಶಿವಶರಣರು ಜನಿಸಿ ಜಗತ್ತಿಗೆ ಭಾರತವೇ ವಿಶ್ವಗುರು ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಗುಳೇದಗುಡ್ಡ ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು, ಸಂಘದ ಗೌರವ ಕಾರ್ಯಧರ್ಶಿ ಮಹೇಶ ಅಥಣಿ, ಎಸ್.ಎಸ್. ಪಾವಟೆ, ರಾಜು ತಪಶೆಟ್ಟಿ, ಬಸವರಾಜ ಮುಕುಪಿ, ವಿಜಯಕುಮಾರ ಅಂಗಡಿ, ಅಶೋಕ ಸಜ್ಜನ (ಬೇವೂರ) ಗುರುಬಸವ ಸೂಳಿಬಾವಿ, ಮಹಾಂತೇಶ ಶೆಟ್ಟರ, ಶಿವಲಿಂಗಪ್ಪ ಮೊರಬದ, ಪಂಡಿತ ಅರೆಬ್ಬಿ, ರುದ್ರು ಅಕ್ಕಿಮರಡಿ, ಮಹೇಶ ಅಂಗಡಿ, ವೀರಣ್ಣ ಹಲಕುರ್ಕಿ, ಗಂಗಾಧರ ನೆರೆಗಲ್, ಕುಮಾರ ಜಿಗಜಿನ್ನಿ, ಮಲ್ಲಿಕಾರ್ಜುನ ಸಾಸನೂರ, ಪ್ರಕಾಶ ರೇವಡಿಗಾರ, ಶರಣಪ್ಪ ಗುಳೇದ, ಅಶೋಕ ರೇವಣಕೋಪ್ಪ, ರಾಜು ಪಲ್ಲೆದ, ಸಿದ್ದರಾಮ ಮನಹಳ್ಳಿ, ಕುಮಾರಸ್ವಾಮಿ ಹಿರೇಮಠ, ಸಂಘದ ಆಡಳಿತಾಧಿಕಾರಿಗಳಾದ ವಿ.ಆರ್. ಶಿರೋಳ, ಡಾ.ವಿಜಯಕುಮಾರ ಕಟಗಿಹಳ್ಳಿಮಠ ಸೇರಿದಂತೆ ಸಂಘದ ಸದಸ್ಯರು, ಹಿತೈಸಿಗಳು, ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು, ವಿದ್ಯಾಥರ್ಥಿಗಳು ಸಿಬ್ಬಂದಿ ಪಾಲ್ಗೊಂಡಿದ್ದರು.---ಬಾಕ್ಸ್

ವಚನ ಸಂಪುಟಗಳ ಮೆರವಣಿಗೆ: ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕೇಂದ್ರ ಕಚೇರಿಯಲ್ಲಿ ಬಸವಣ್ಣನವರ ವಚನ ಸಂಪುಟಗಳನ್ನು ಪಲ್ಲಕ್ಕಿಯಲ್ಲಿ ಇಟ್ಟು ಪೂಜೆ ಸಲ್ಲಿಸಿ, ಬೀಳೂರ ಗುರುಬಸವ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭಗೊಂಡು, ಕಾಲೇಜು ರಸ್ತೆ, ಬಸವೇಶ್ವರ ವೃತ್ತ, ಸ್ಟೇಷನ್ ರಸ್ತೆ ಮೂಲಕ ವಲ್ಲಭಭಾಯಿ ಚೌಕ, ಅಡತಬಜಾರ್‌, ಟೀಕಿನ ಚರಂತಿಮಠದ ಬೀಳೂರ ಅಜ್ಜನ ದೇವಸ್ಥಾನಕ್ಕೆ ಆಗಮಿಸಿ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ 25ಕ್ಕೂ ಅಧಿಕ ಎತ್ತುಗಳ ಜೋಡಿ, ಬಸವಣ್ಣವರ ಭಾವಚಿತ್ರ, ಕುದರೆ ಮೇಲೆ ಏರಿದ ಬಸವಣ್ಣ ವೇಷಧಾರಿ ಗಮನ ಸೆಳೆಯಿತು. ನಗರದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.