ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಸಾಮರ್ಥ್ಯ ಬರಹಗಾರನಿಗೆ ಇರಬೇಕು: ಚಿತ್ರ ಸಾಹಿತಿ ಕವಿರಾಜ್

| Published : May 06 2025, 12:16 AM IST

ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಸಾಮರ್ಥ್ಯ ಬರಹಗಾರನಿಗೆ ಇರಬೇಕು: ಚಿತ್ರ ಸಾಹಿತಿ ಕವಿರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಸಿನಿಮಾಗಳಲ್ಲಿ ಪಾತ್ರಗಳು ಪ್ರೇಕ್ಷಕನ ಕಣ್ಣ ಮುಂದೆ ಇರುವುದರಿಂದ ಅಲ್ಲಿನ ವಿಚಾರಗಳು ಸರಳವಾಗಿ ತಲುಪುತ್ತದೆ. ಆದರೆ, ಪುಸ್ತಕದಲ್ಲಿ ಈ ಅವಕಾಶ ಇಲ್ಲ. ಓದುಗನಿಗೆ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವಂತಹ ಸಾಮರ್ಥ್ಯವನ್ನು ಬರಹಗಾರ ಹೊಂದಿರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಸಾಹಿತ್ಯದಲ್ಲಿ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಸಾಮರ್ಥ್ಯ ಬರಹಗಾರನಿಗೆ ಇರಬೇಕು ಎಂದು ಚಿತ್ರ ಸಾಹಿತಿ ಕವಿರಾಜ್‌ ತಿಳಿಸಿದರು.

ನಗರದ ದಟ್ಟಗಳ್ಳಿಯ ರೋಟರಿ ಮೈಸೂರು ಶಾಲೆಯ ಸಭಾಂಗಣದಲ್ಲಿ ಯೂನಿವರ್ಸಲ್‌ ಸ್ಟೋರಿಸ್‌ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್‌.ಜಿ. ಮನು ಅವರ ‘ಕಾಲಘಟ್ಟ’ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಸಿನಿಮಾಗಳಲ್ಲಿ ಪಾತ್ರಗಳು ಪ್ರೇಕ್ಷಕನ ಕಣ್ಣ ಮುಂದೆ ಇರುವುದರಿಂದ ಅಲ್ಲಿನ ವಿಚಾರಗಳು ಸರಳವಾಗಿ ತಲುಪುತ್ತದೆ. ಆದರೆ, ಪುಸ್ತಕದಲ್ಲಿ ಈ ಅವಕಾಶ ಇಲ್ಲ. ಓದುಗನಿಗೆ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವಂತಹ ಸಾಮರ್ಥ್ಯವನ್ನು ಬರಹಗಾರ ಹೊಂದಿರಬೇಕು ಎಂದರು.

ಯುವ ಬರಹಗಾರರು ಬರೆಯುವ ಕೃತಿಗಳು ಸಾಮಾನ್ಯವಾಗಿ ಪ್ರೀತಿ, ಸಂಬಂಧಗಳ ಸುತ್ತ ಸುತ್ತುತ್ತಿರುತ್ತದೆ. ಅದರ ಹೊರತಾದ ವಿಚಾರಗಳ ಕುರಿತು ಬರೆಯುವವರ ಸಂಖ್ಯೆ ವಿರಳವಾಗಿದ್ದು, ಮನು ಅವರು ವಿಜ್ಞಾನವನ್ನು ತಮ್ಮ ಕೃತಿಯ ವಿಷಯವಾಗಿ ತೆಗೆದುಕೊಂಡು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇದು ಮುಂದೆ ಬರುವ ಕಿರಿಯರಿಗೆ ಹೊಸ ಹಾದಿಯನ್ನು ಹಾಕಿಕೊಡುತ್ತದೆ ಎಂದು ಅವರು ಹೇಳಿದರು. ಶಿಕ್ಷ ಪಿಯು ಕಾಲೇಜು ಪ್ರಾಂಶುಪಾಲ ದೇವರಾಜು ಪಿ. ಚಿಕ್ಕಹಳ್ಳಿ, ಕನ್ನಡ ಸಹ ಪ್ರಾಧ್ಯಾಪಕ ಕೃ.ಪ. ಗಣೇಶ್‌, ಲೇಖಕ ದೀಕ್ಷಿತ್‌ ನಾಯರ್‌, ಸಂಶೋಧಕ ಆರ್. ಛಲಪತಿ, ರಾಜೇಂದ್ರ ಪ್ರಿಂಟರ್ಸ್‌ ಮಾಲೀಕ ಡಿ.ಎನ್‌. ಲೋಕಪ್ಪ, ಕೃತಿಯ ಕರ್ತೃ ಎಚ್‌.ಜಿ. ಮನು ಮೊದಲಾದವರು ಇದ್ದರು.