ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವು

| Published : Sep 09 2024, 01:40 AM IST

ಸಾರಾಂಶ

ದೇವರಹಿಪ್ಪರಗಿ: ತಾಲೂಕಿನ ಬಿ.ಬಿ.ಇಂಗಳಗಿ ಗ್ರಾಮದಲ್ಲಿ ಘನ ಗುರುಸಿದ್ದೇಶ್ವರ ಜಾತ್ರೆಯ ವೇಳೆ ರಥೋತ್ಸವದ ಚಕ್ರಕ್ಕೆ ಸಿಲುಕಿ ಯುವಕನೋರ್ವ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಗ್ರಾಮದ ದೇವೇಂದ್ರ ಮನೋಹರ ಬಡಿಗೇರ (24) ಮೃತದುರ್ದೈವಿ. ಶನಿವಾರ ಗ್ರಾಮದಲ್ಲಿ ಘನ ಗುರುಸಿದ್ದೇಶ್ವರ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ಜಾತ್ರೆಯ ರಥೋತ್ಸವದ ವೇಳೆ ಈ ದುರ್ಘಟನೆ ಸಂಭವಿಸಿದೆ.

ದೇವರಹಿಪ್ಪರಗಿ: ತಾಲೂಕಿನ ಬಿ.ಬಿ.ಇಂಗಳಗಿ ಗ್ರಾಮದಲ್ಲಿ ಘನ ಗುರುಸಿದ್ದೇಶ್ವರ ಜಾತ್ರೆಯ ವೇಳೆ ರಥೋತ್ಸವದ ಚಕ್ರಕ್ಕೆ ಸಿಲುಕಿ ಯುವಕನೋರ್ವ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಗ್ರಾಮದ ದೇವೇಂದ್ರ ಮನೋಹರ ಬಡಿಗೇರ (24) ಮೃತದುರ್ದೈವಿ. ಶನಿವಾರ ಗ್ರಾಮದಲ್ಲಿ ಘನ ಗುರುಸಿದ್ದೇಶ್ವರ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ಜಾತ್ರೆಯ ರಥೋತ್ಸವದ ವೇಳೆ ಈ ದುರ್ಘಟನೆ ಸಂಭವಿಸಿದೆ. ತೇರು ಎಳೆಯುವ ವೇಳೆ ಮೈ ಮೇಲೆ ರಥದ ಗಾಲಿ ಹರಿದು ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ, ಸ್ಥಳೀಯರು ಆತನನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದರು. ಆದ್ರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿಯೇ ದೇವೇಂದ್ರ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.