ಸಾರಾಂಶ
ಡೆಂಘೀಗೆ ಯುವತಿಯೊಬ್ಬಳು ಬಲಿಯಾದ ಘಟನೆ ತುಮಕೂರಿನ ಶಾಂತಿನಗರದ ಕುಂಟಯ್ಯನ ಲೇಔಟ್‌ನಲ್ಲಿ ನಡೆದಿದೆ
ತುಮಕೂರು: ಡೆಂಘೀಗೆ ಯುವತಿಯೊಬ್ಬಳು ಬಲಿಯಾದ ಘಟನೆ ತುಮಕೂರಿನ ಶಾಂತಿನಗರದ ಕುಂಟಯ್ಯನ ಲೇಔಟ್‌ನಲ್ಲಿ ನಡೆದಿದೆ. ಕುಂಟಯ್ಯನ ಲೇಔಟ್ ನಿವಾಸಿ ಗುಣಶ್ರೀ (18) ಸಾವನ್ನಪ್ಪಿದ ಯುವತಿ. ಜೂನ್. 11 ರಂದು ಈಕೆಗೆ ಜ್ವರ ಕಾಣಿಸಿಕೊಂಡಿತು. ಐದು ದಿವಸವಾದರೂ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಜೂನ್. 17 ಕ್ಕೆ ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಕೆ ಆರೋಗ್ಯ ಗಂಭೀರ ಸ್ಥಿತಿ ತಲುಪಿದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ.