ಸಾರಾಂಶ
ನಕಲಿ ಜಿಎಸ್‌ಟಿ ನೋಂದಣಿ ತಡೆಗಟ್ಟಲು ರಾಜ್ಯದ ವಿವಿಧೆಡೆ ಆಧಾರ್ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡುವ 120 ‘ಜಿಎಸ್‌ಟಿ ಸೇವಾಕೇಂದ್ರ’ಗಳನ್ನು ವಾಣಿಜ್ಯ ತೆರಿಗೆಗಳ ಇಲಾಖೆ ಆರಂಭಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಕಲಿ ಜಿಎಸ್‌ಟಿ ನೋಂದಣಿ ತಡೆಗಟ್ಟಲು ರಾಜ್ಯದ ವಿವಿಧೆಡೆ ಆಧಾರ್ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡುವ 120 ‘ಜಿಎಸ್‌ಟಿ ಸೇವಾಕೇಂದ್ರ’ಗಳನ್ನು ವಾಣಿಜ್ಯ ತೆರಿಗೆಗಳ ಇಲಾಖೆ ಆರಂಭಿಸಿದೆ.ನಗರದ ಗಾಂಧಿನಗರದಲ್ಲಿರುವ ಕೇಂದ್ರ ಕಚೇರಿ ಸೇರಿ ರಾಜ್ಯದ 120 ಕಡೆ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಅರ್ಜಿದಾರರು ಮುಂಗಡವಾಗಿ ಸಮಯ ನಿಗದಿಪಡಿಸಿಕೊಂಡು ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು. ಬಯೋಮೆಟ್ರಿಕ್ ದೃಢೀಕರಣ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಇದರಿಂದಾಗಿ ಅಮಾಯಕ ವ್ಯಕ್ತಿಗಳ ದಾಖಲೆಗಳನ್ನು ಬಳಸಿಕೊಂಡು ನಕಲಿ ಜಿಎಸ್‌ಟಿ ನೋಂದಣಿ ತಡೆಯಲು ಸಾಧ್ಯವಾಗುತ್ತದೆ. ಜತೆಗೆ ರಾಜ್ಯದಲ್ಲಿ ಉತ್ತಮ ವ್ಯವಹಾರ ವಾತಾವರಣಕ್ಕೆ ಉತ್ತೇಜನ ಸಿಗುತ್ತದೆ ಎಂದು ವಾಣಿಜ್ಯ ತೆರಿಗೆಗಳ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.