ಸಾರಾಂಶ
ಕಂದಾಯ ಗ್ರಾಮಗಳಿಗೆ ಹಕ್ಕು ಪತ್ರ ನೀಡುವ ಬಾಕಿ ಇರುವ ಪ್ರಕರಣಗಳು, ರಸ್ತೆ ಉತ್ತುವರಿ, ೧ ಮತ್ತು ೫ ತಿದ್ದುಪಡಿ, ಪಡಿತರ ಚೀಟಿ ಕುರಿತು ದೂರು ಬರುತ್ತಿದ್ದು, ಪರಿಶೀಲನೆ ನಡೆಸಿದರು. ಮಂಡ್ಯ ತಾಲೂಕಿನಲ್ಲಿ ೪೧೦ ಹಕ್ಕುಪತ್ರಗಳಿಗೆ ಡೇಟಾ ಎಂಟ್ರಿ ನಡೆಯುತ್ತಿದೆ. ಅವುಗಳನ್ನು ಸಹ ಜಿಲ್ಲಾಧಿಕಾರಿ ಡಾ.ಕುಮಾರ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರದ ಆದೇಶದಂತೆ ಖಾತೆದಾರ ರೈತರ ಆಧಾರ್ ಸೀಡಿಂಗ್ ಯೋಜನೆಯಡಿ ಜಿಲ್ಲೆಯ ೨೧ ಲಕ್ಷ ಖಾತೆದಾರ ರೈತರ ಪೈಕಿ ಈಗಾಗಲೇ ೧.೧೦ ಲಕ್ಷ ರೈತರ ಆಧಾರ್ ಲಿಂಕ್ ಮುಗಿಸಲಾಗಿದ್ದು, ಜೂನ್ ಅಂತ್ಯದೊಳಗೆ ಆಧಾರ್ ಸೀಡಿಂಗ್ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ತಾಲೂಕು ಪಂಚಾಯ್ತಿ, ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ತಾಲೂಕು ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಕುಂದುಕೊರತೆಗಳ ಬಗ್ಗೆ ಚರ್ಚಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಕಳೆದ ಒಂದು ವಾರದಿಂದ ರೈತರಿಗೆ ಸಂಬಂಧಪಟ್ಟಂತೆ ಆಧಾರ್ ಸೀಡಿಂಗ್ ನಡೆಯುತ್ತಿದೆ ಕೆಲಸ ಪರಿಶೀಲಿಸಿದರು. ಪ್ರಸ್ತುತ ಮಳೆ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತಿರುವ ಕಾರಣ ಯಾವುದಾದರು ಮನೆ ಅಥವಾ ಬೆಳೆಗಳ ಹಾನಿಯ ಬಗ್ಗೆ ವರದಿ ಸಿದ್ಧಪಡಿಸುವಂತೆ ಸೂಚಿಸಿದರು.ಮಳೆ ಹೆಚ್ಚಿನ ಪ್ರಮಾಣದಲ್ಲಿ ಬಂದಿರುವ ಹಿನ್ನೆಲೆಯಲ್ಲಿ ಯಾವುದಾದರೂ ಮನೆ ಹಾನಿ ಅಥವಾ ಬೆಳೆಗಳು ಹಾನಿಯ ಬಗ್ಗೆ ವರದಿ ಸಿದ್ಧ ಪಡಿಸುತ್ತಿರುವ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಚರ್ಚಿಸಿದರು.
ಕಂದಾಯ ಗ್ರಾಮಗಳಿಗೆ ಹಕ್ಕು ಪತ್ರ ನೀಡುವ ಬಾಕಿ ಇರುವ ಪ್ರಕರಣಗಳು, ರಸ್ತೆ ಉತ್ತುವರಿ, ೧ ಮತ್ತು ೫ ತಿದ್ದುಪಡಿ, ಪಡಿತರ ಚೀಟಿ ಕುರಿತು ದೂರು ಬರುತ್ತಿದ್ದು, ಪರಿಶೀಲನೆ ನಡೆಸಿದರು. ಮಂಡ್ಯ ತಾಲೂಕಿನಲ್ಲಿ ೪೧೦ ಹಕ್ಕುಪತ್ರಗಳಿಗೆ ಡೇಟಾ ಎಂಟ್ರಿ ನಡೆಯುತ್ತಿದೆ. ಅವುಗಳನ್ನು ಸಹ ಪರಿಶೀಲಿಸಿದರು.ರೈತರು ತಮ್ಮ ಪಹಣಿಗಳಿಗೆ ದಾಖಲೆಗಳಿಗೆ ಕಡ್ಡಾಯವಾಗಿ ಆಧಾರ್ ಸೀಡಿಂಗ್ ಆಗಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಮಂಡ್ಯ ಜಿಲ್ಲೆಯಲ್ಲಿ ಕೂಡ ಈಗಾಗಲೇ ೨೧ ಲಕ್ಷ ರೈತರ ಪೈಕಿ ಸುಮಾರು ೧ ಲಕ್ಷದ ೧೦ ಸಾವಿರ ಆಧಾರ್ ಸೀಡಿಂಗ್‌ನ್ನು ಕಳೆದ ಒಂದು ವಾರದಿಂದ ಮಾಡಲಾಗಿದೆ ಎಂದರು.
ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ಎಡಿಎಲ್‌ಆರ್ ಮಮತಾ, ಭೂಮಿ ಶಾಖೆ ಸಲಹೆಗಾರ ಲೋಹಿತ್, ಗ್ರಾಮ ಲೆಕ್ಕಾಧಿಕಾರಿ ತೇಜಸ್‌ಗೌಡ ಇತರರಿದ್ದರು.