ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಕಾಶ್ಮೀರದಲ್ಲಿ ನಡೆದ ಪ್ರವಾಸಿಗರ ಹತ್ಯೆಗೆ ಪ್ರತೀಕಾರಾಗಿ ಭಾರತದ ಸೈನ್ಯ ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಡೆಸಿ, ಪಾಕಿಸ್ತಾನದ ಉಗ್ರರನ್ನು ಮತ್ತು ಉಗ್ರರ ನೆಲೆಗಳನ್ನುನಾಶಪಡಿಸಿ ಮತ್ತು ಪಾಕಿಸ್ತಾನದ ಸೈನಿಕರನ್ನು ಸಹ ಹಿಮ್ಮೆಟ್ಟಿಸಿ ಭಾರತದ ಸಾರ್ವಭೌಮತೆಯನ್ನು ಯಾವ ವಿದೇಶಿ ಶಕ್ತಿಗಳು ಊಹಿಸಿಲಾಗದಂತೆ ಉತ್ತರವನ್ನು ಸಮರ್ಪಕ ಹೋರಾಟದ ಮೂಲಕ ತೋರಿಸಿಕೊಟ್ಟಿದ್ದಾರೆ. ಇದಕ್ಕಾಗಿ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸುವುದಾಗಿ ಆಮ್‌ಆದ್ಮಿ ಪಾರ್ಟಿಯ ತುಮಕೂರು ಜಿಲ್ಲಾಧ್ಯಕ್ಷ ಜಯರಾಮಯ್ಯ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತೀಯ ಸೇನೆ ಉಗ್ರರ ನೆಲೆಗಳನ್ನು ದ್ವಂಸಗೊಳಿಸುವ ಮೂಲಕ ಪ್ರತ್ಯುತ್ತರ ನೀಡಿ ಉಗ್ರರ ದಾಳಿಯಲ್ಲಿ ಮಡಿದ ಜನರ ಆತ್ಮಕ್ಕೆ ಶಾಂತಿ ದೊರಕಿಸಿದೆ.ಅಲ್ಲದೆ ಈ ಘಟನೆ ಉಗ್ರವಾದವನ್ನು ಬೆಂಬಲಿಸುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದರು.ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನವು ಸದಾ ಕುತಂತ್ರ ಬುದ್ಧಿಯನ್ನುಅನುಸರಿಸುತ್ತಾ ಬಂದಿದೆ. ಭಾರತದ ಮೃದುತ್ವನ್ನು ಬಂಡವಾಳವನ್ನಾಗಿಸಿಕೊಳ್ಳಲು ಹೊರಟ ಪಾಕಿಸ್ತಾನ ಮತ್ತು ಪಾಕಿಸ್ತಾನದ ಉಗ್ರರಿಗೆ ಭಾರತದ ಮತ್ತು ಭಾರತದ ಸೈನಿಕರು ಭಾರತದ ಮೃದುತ್ವದ ಉಗ್ರ ರೂಪವನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು. ನಮ್ಮದೇಶದ ಮೂರು ಪ್ರಮುಖ ಶಕ್ತಿಗಳಾದ ರೈತರು, ಸೈನಿಕರು ಮತ್ತು ಶ್ರಮಿಕ ವರ್ಗ ಸೇರಿದಂತೆ ಎಲ್ಲಾ ಕಾರ್ಮಿಕರು ದೇಶದ ಬೆನ್ನೆಲುಬುಗಳು. ಈ ಮೂರು ವರ್ಗಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ರಾಜ್ಯ ಮ ತ್ತು ಕೇಂದ್ರ ಸರಕಾರಗಳು ನೀಡಬೇಕೆಂದು ಆಮ್‌ಆದ್ಮಿ ಪಾರ್ಟಿಯ ಒತ್ತಾಯವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎನ್‌ರಾಮಾಂಜನಪ್ಪ, ರೈತ ಘಟಕದ ಬಿ.ಆರ್ ಯೋಗೇಶ್ ಕರಿಗೌಡ, ಮಾಧ್ಯಮ ಉಸ್ತುವಾರಿಗಳಾದ ಪ್ರಭುಸ್ವಾಮಿ, ಮುಂಖಂಡರುಗಳಾದ ಪ್ರಕಾಶ್, ತಿಮ್ಮಪ್ಪ,ಹೆಚ್.ಬಿ.ಶಿವಲಿಂಗಯ್ಯ, ನಾಗಭೂಷಣ್, ಕೆಂಪನಹಳ್ಳಿ ಕುಮಾರ್, ಬಸವರಾಜು, ಚರಣ್ ಮತ್ತಿತರರು ಉಪಸ್ಥಿತರಿದ್ದರು.