ಬೆಲೆ ಏರಿಕೆ ವಿರೋಧಿಸಿ ಆಮ್ ಅದ್ಮಿ ಪಕ್ಷ ಪ್ರತಿಭಟನೆ

| Published : Apr 07 2025, 12:36 AM IST

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಪ್ರತಿಭಟಿಸಿ ಆಮ್ ಅದ್ಮಿ ಪಕ್ಷದ ವತಿಯಿಂದ ಶನಿವಾರ ತಹಸೀಲ್ದಾರ್ ಗುರು ಬಸವರಾಜ್‍ರಿಗೆ ಮನವಿ ಸಲ್ಲಿಸಿದರು.

ತಹಸೀಲ್ದಾರ್ ಗುರು ಬಸವರಾಜ್‍ಗೆ ಮನವಿ

ಹರಿಹರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಪ್ರತಿಭಟಿಸಿ ಆಮ್ ಅದ್ಮಿ ಪಕ್ಷದ ವತಿಯಿಂದ ಶನಿವಾರ ತಹಸೀಲ್ದಾರ್ ಗುರು ಬಸವರಾಜ್‍ರಿಗೆ ಮನವಿ ಸಲ್ಲಿಸಿದರು.

ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಬೆಳಿಗ್ಗೆ ಜಮಾವಣೆಯಾದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಜಿ.ಎಚ್.ಬಸವರಾಜ್, ಕೇಂದ್ರ ಸರ್ಕಾರ ಜಿಎಸ್‍ಟಿ ನೀತಿ, ಪೆಟ್ರೋಲ್ ಮತ್ತು ಡೀಸೆಲ್, ಟೋಲ್, ರೈಲು ದರ ಸೇರಿದಂತೆ ವಿವಿಧ ಅನೇಕ ಸಾಮಾಗ್ರಿಗಳ ಬೆಲೆ ಏರಿಕೆಯನ್ನು ಮಾಡಿ, ಜನ ಜೀವನವನ್ನು ದುಸ್ತರವಾಗಿಸಿದೆ. ಅದನ್ನು ನಮ್ಮ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.

ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಯೋಜನೆಗಳನ್ನು ಸಾಕಾರಗೊಳಿಸಲು ಹಾಲು, ವಿದ್ಯುತ್, ಬಸ್, ಮೆಟ್ರೋ, ಮುದ್ರಾಂಕ ಶುಲ್ಕ ದುಪ್ಪಟ್ಟು ಮಾಡಿದೆ. ಮಹಿಳೆಯರಿಗೆ 2000 ರು. ನೀಡಿ, ಕುಟುಂಬದಿಂದ 10,000 ರು. ಕೀಳುವ ಮೂಲಕ ಮತದಾರರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯದರ್ಶಿ ಎಸ್.ಕೆ. ಆದಿಲ್ ಖಾನ್, ತಾಲೂಕು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಯೂಸೂಫ್, ನಗರ ಘಟಕ್ ಅಧ್ಯಕ್ಷ ಬಿ. ಮಲ್ಲೇಶ್, ಮಹಿಳಾ ವಿಭಾಗದ ಅಧ್ಯಕ್ಷೆ ರೇಖಾ ಬಿ.ಆಡೂರು, ಮುಖಂಡರಾದ ಎಸ್.ಪಿ.ರೋಹಿತ್, ಭಾಷಾ, ಕೆ. ರವಿಂದ್ರ, ಮುಸ್ತಾಫಾ, ವೀರಭದ್ರಪ್ಪ ನಾಗೇನಹಳ್ಳಿ. ಗಂಗಮ್ಮ, ಮುಸ್ತಫ, ಇತರರು ಇದ್ದರು.