ಪುತ್ತೂರು ಬಂಟರ ಸಂಘದಿಂದ ಆಟಿಡೊಂಜಿ ದಿನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

| Published : Aug 12 2024, 01:02 AM IST

ಪುತ್ತೂರು ಬಂಟರ ಸಂಘದಿಂದ ಆಟಿಡೊಂಜಿ ದಿನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಆಟಿಡೊಂಜಿ ಬಂಟೆರೆ ಸೇರಿಗೆ, ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಪ್ರಯತ್ನ ಪ್ರಾಮಾಣಿಕವಾಗಿದ್ದರೆ, ಗುರಿ ಸ್ಪಷ್ಟವಿದ್ದರೆ, ಸಂಕಲ್ಪ ಗಟ್ಟಿಯಿದ್ದರೆ ಕಂಡಿತಾ ಸಿದ್ದಿ ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುತ್ತಾರೆ. ಹಾಗಾಗಿ ಸಂಸದನಾಗಿ ನನ್ನ ಗುರಿ ಸ್ಪಷ್ಟವಿದೆ. ಪ್ರಾಮಾಣಿಕ ಪ್ರಯತ್ನವಿದೆ ಎಂದು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಅವರು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಮಹಿಳಾ, ಯುವ, ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಕೊಂಬೆಟ್ಟು ಎಂ.ಸುಂದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಶನಿವಾರ ಸಂಜೆ ನಡೆದ ಆಟಿಡೊಂಜಿ ಬಂಟೆರೆ ಸೇರಿಗೆ, ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬಂಟ ಸಮಾಜದ ಯುವಕರು ಇವತ್ತು ಪ್ರಕಾಶ್ ಶೆಟ್ಟಿ ಅವರ ಜೀವನ ಅರ್ಥ ಮಾಡಿಕೊಂಡು ಮುಂದೆ ಸಾಗಬೇಕು. ಅವರ ಸಾಧನೆ ಯುವಕರಿಗೆ ಪ್ರೇರಣೆಯಾಗಿದೆ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಬಂಟ ಸಮಾಜದಲ್ಲಿ ಒಂದಷ್ಟು ಕೆಲಸ ಆಗಬೇಕಾಗಿದೆ. ಬಂಟ ಸಮಾಜದ ವತಿಯಿಂದ ಇಲ್ಲಿ ಶಿಕ್ಷಣ ಸಂಸ್ಥೆ ನಡೆಯುತ್ತಿದೆ. ಆದರೆ ಇಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಎಲ್‌ಕೆಜಿ ಯುಕೆಜಿ ನಂತರ ಪಿಯುಸಿ ಹಂತದ ತನಕ ಶಿಕ್ಷಣ ಸಿಗುವಂತಾಗಬೇಕು. ನಮ್ಮಲ್ಲಿ ಅನೇಕ ಮಹಿಳೆಯರು ಶಾಲೆ ನಡೆಸುವ ಶಕ್ತಿವುಳ್ಳವರಿದ್ದಾರೆ. ಅವರಿಗೊಂದು ಶಾಲೆ ಮಾಡಿಕೊಡುವ ಪರಿಕಲ್ಪಣೆ ನಮ್ಮ ಮುಂದಿದೆ. ಈಗಾಗಲೇ ಪುತ್ತೂರಿನಲ್ಲಿ ಬಂಟ ಸಮಾಜಕ್ಕಾಗಿ ಐದೂವರೆ ಎಕರೆ ಜಾಗವನ್ನು ಬಂಟ ಸಮಾಜಕ್ಕಾಗಿ ಗುರುತಿಸಲಾಗಿದೆ. ದೇವರ ಅನುಗ್ರಹ ಇದ್ದರೆ ಬಂಟ ಸಮಾಜ ಕೂಡಾ ಉತ್ತಮ ರೀತಿಯ ವಿದ್ಯೆಯನ್ನು ಕೊಡುವ ಅವಕಾಶವಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು. ಇಂತಹ ಒಳ್ಳೆಯ ವಿಚಾರ ಮುಂದಿಟ್ಟು ದಾನಿಗಳು ಸಹಕಾರ ನೀಡುತ್ತಾರೆ. ಇವತ್ತು ಉದ್ಯಮಿಗಳು ಹಲವು ಮಂದಿ ಇದ್ದಾರೆ. ಬಂಟ ಸಮಾಜದಲ್ಲಿ ಹೆಚ್ಚು ದಾನಿಗಳು ಇದ್ದಾರೆ. ಈ ಭಾಗದಲ್ಲಿ ಯಾವುದಾದರೂ ದೇವಸ್ಥಾನ, ಭಜನಾ ಮಂದಿರವಿದ್ದರೆ ಅಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರು ಬಂಟ ಸಮಾಜದರಾಗಿದ್ದಾರೆ ಎಂದರು.

ಸನ್ಮಾನ: ಈ ಸಂದರ್ಭದಲ್ಲಿ ಎಂ.ಆರ್.ಜಿ. ಗ್ರೂಪ್‌ನ ಅಧ್ಯಕ್ಷ ಉದ್ಯಮಿ ಡಾ. ಕೆ.ಪ್ರಕಾಶ್ ಶೆಟ್ಟಿ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಅಬುದಾಬಿಯ ಇಂಡಿಯನ್ ಸೋಶಿಯಲ್ ಆಂಡ್ ಕಲ್ಬರಲ್ ಸೆಂಟರ್ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೧೪ ಮಂದಿ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅರಿಯಡ್ಕ ಕೃಷ್ಣ ರೈ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಶಕುಂತಳಾ ಟಿ ಶೆಟ್ಟಿ, ಮಲ್ಲಿಕಾ ಪ್ರಸಾದ್, ಸುನಿಲ್ ಕುಮಾರ್ ಶೆಟ್ಟಿ. ಎನ್ ಜಗನ್ನಾಥ ರೈ ಮಾದೋಡಿ, ಡಾ. ಎ.ಕೆ. ರೈ, ಕುದ್ಕಾಡಿ ಶೀನಪ್ಪ ರೈ, ಸಂತೋಷ್ ಕುಮಾರ್ ರೈ ನಳೀಲು, ವಸಂತ ಕುಮಾರ್ ರೈ ಬಿ, ಸತೀಶ್ ರೈ, ಡಾ.ಆಶಾ ಶಂಕರ ಭಂಡಾರಿ ಡಿಂಬ್ರಿ, ವಿದ್ಯಾರ್ಥಿಗಳಾದ ಧನುಜ ಮತ್ತು ಸ್ವಸ್ತಿ ಶೆಟ್ಟಿ ಅವರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನಿಸಲಾಯಿತು. ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ದಿವ್ಯಶ್ರೀ ರೈ, ಭಾಗ್ಯಲಕ್ಷ್ಮೀ, ರಿತೇಶ್ ರೈ, ವೀನ್ಯಾ ರೈ, ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ ತೇಜಸ್ವಿನಿ ವಿ. ಶೆಟ್ಟಿ ಬನ್ನೂರು, ರಾಷ್ಟ್ರೀಯ ಕಬ್ಬಡಿಯಲ್ಲಿ ಭಾಗವಹಿಸಿದ ಪೂರ್ವಿಕಾ ಬಿ., ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ೩೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಲಲಿತಾ ಪಿ. ಶೆಟ್ಟಿ ನೆಲ್ಯಾಡಿ, ರೂಪಾ ಶೆಟ್ಟಿ ಬನ್ನೂರು, ಸ್ಪಂದನಾ ಮಾಡಾವು ಅವರಿಗೆ ಆರ್ಥಿಕ ನೆರವು ನೀಡಲಾಯಿತು.ವೇದಿಕೆಯಲ್ಲಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಮುಂಬಯಿ ಹೇರಂಭ ಗ್ರೂಫ್ ಆಫ್ ಕಂಪನಿಯ ಮಾಲಕ ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಇಂಡಿಯನ್ ಸೋಶಿಯಲ್ ಆಂಡ್ ಕಲ್ಬರಲ್ ಸೆಂಟರ್ ಅಬುದಾಬಿ ಇದರ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಪುತ್ತೂರು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ, ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತಿತರರು ಉಪಸ್ಥಿತರಿದ್ದರು.ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು. ಮಮತಾ ಶೆಟ್ಟಿ ಮತ್ತು ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.