ಸಾರಾಂಶ
ವೈದ್ಯಕೀಯ ಚಿಕಿತ್ಸೆಗಾಗಿ ಮೂರು ಮಂದಿಗೆ ಧನಸಹಾಯ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ ಬಂಟ ಸಮಾಜದವರು ಎಲ್ಲ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಇನ್ನಷ್ಟು ಹೆಚ್ಚು ಸಾಧನೆ ಮಾಡಬೇಕು ಎಂದು ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಹೇಳಿದರು.
ಬಜಪೆ ಸಂಜೀವ ಶೆಟ್ಟಿ ಸಭಾಗೃಹದಲ್ಲಿ ಬಂಟರ ಸಂಘ ಬಜಪೆ ವಲಯದ ವತಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ರಾಮಚಂದ್ರ ಕಾವ ಸಾಂತ್ರಬೈಲು, ಕ್ರೀಡಾ ಕ್ಷೇತ್ರದ ಸಾಧಕರಾದ ಅಶ್ವಿನ್ ನಾಯ್ಕ, ಪೂರ್ವಿ ಕಿರಣ್ ಶೆಟ್ಟಿ ಬಜಪೆ, ಮೌಲ್ಯ ರತನ್ ಶೆಟ್ಟಿ , ಭೂಮಿಕಾ ಹೆಗ್ಡೆ ಅವರನ್ನು ಸಾಧಕರ ನೆಲೆಯಲ್ಲಿ ಸನ್ಮಾನಿಸಲಾಯಿತು. ವೈದ್ಯಕೀಯ ಚಿಕಿತ್ಸೆಗಾಗಿ ಮೂರು ಮಂದಿಗೆ ಧನಸಹಾಯ ನೀಡಲಾಯಿತು.
ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಪಡುಪೆರಾರ ಅಧ್ಯಕ್ಷತೆ ವಹಿಸಿದ್ದರು. ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ, ಬ್ಯಾಂಕ್ ಅಫ್ ಬರೋಡದ ಪ್ರಬಂಧಕ ವಿಶ್ವನಾಥ ರೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಒಡಿಯೂರು ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ಬಂಟರ ಸಂಘ ಗುರುಪುರದ ಸಂಚಾಲಕ ಚಂದ್ರಹಾಸ ಶೆಟ್ಟಿ ನಾರ್ಲ, ಮಹಿಳಾ ವಿಬಾಗದ ಗೌರಾವಾಧ್ಯಕ್ಷೆ ಮಲ್ಲಿಕಾ ವರಪ್ರಸಾದ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಸುಧೀರ್ ಶೆಟ್ಟಿ, ಬಲವಂಡಿ ಪಿಲಿಚಾಮುಂಡಿ ಕ್ಷೇತ್ರ ಮಾಹಂತೂರು ಬಂಟ್ವಾಳ ಇಲ್ಲಿನ ಗಡಿಕಾರರಾದ ದುರ್ಗಾಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಅಕ್ಷಯ ಆರ್ ಶೆಟ್ಟಿ ಸ್ವಾಗತಿಸಿದರು, ಪ್ರೀತಿ ಶೆಟ್ಟಿ ವಂದಿಸಿದರು. ದಿವ್ಯ ಶೆಟ್ಟಿ, ರೋಶನಿ ಶೆಟ್ಟಿ, ಅಜಿತ್ ಶೆಟ್ಟಿ ನಿರೂಪಿಸಿದರು. ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆ ಮಕ್ಕಳಿಗೆ ವಿವಿಧ ಕ್ರೀಡೋತ್ಸವವನ್ನು ಆಯೋಜಿಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.