ಹಿಂದುಳಿದ ವರ್ಗದ ಕೋಟಾದಡಿ ಮುಸ್ಲಿಮರಿಗೆ ಮೀಸಲಾತಿ ಕೈಬಿಡಿ

| Published : Apr 28 2024, 01:17 AM IST / Updated: Apr 28 2024, 01:18 AM IST

ಹಿಂದುಳಿದ ವರ್ಗದ ಕೋಟಾದಡಿ ಮುಸ್ಲಿಮರಿಗೆ ಮೀಸಲಾತಿ ಕೈಬಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಒಬಿಸಿಗಳಿಗೆ ನೀಡಲಾದ ಶೇ.32ರಷ್ಟು ಮೀಸಲಾತಿಯಲ್ಲಿ ಶೇ. 23ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ.

ಹುಬ್ಬಳ್ಳಿ:

ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಇಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದ ಕೋಟಾದ ಅಡಿ ಮುಸ್ಲಿಮರಿಗೆ‌ ಮೀಸಲಾತಿ ನೀಡಿದ್ದು, ಇದನ್ನು ಕೈ ಬಿಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬಿಸಿಗಳಿಗೆ ನೀಡಲಾದ ಶೇ.32ರಷ್ಟು ಮೀಸಲಾತಿಯಲ್ಲಿ ಶೇ. 23ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ. ಒಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವ ಕುರಿತು ರಾಜ್ಯದಲ್ಲಿ ನಾವೇ ಧ್ವನಿ ಎತ್ತಿದ್ದೇವು. ಇದೀಗ ಈ ವಿಷಯ ದೇಶದಾದ್ಯಂತ ಚರ್ಚೆ ಆಗುತ್ತಿದೆ. ಮುಸ್ಲಿಮರನ್ನು ಸೆಂಟ್ರಲ್ ಒಬಿಸಿ ಲಿಸ್ಟ್‌ಗೆ ಸೇರಿಸುವ ರಾಜ್ಯ ಸರ್ಕಾರದ ಶಿಫಾರಸನ್ನು ರಾಷ್ಟ್ರೀಯ ಹಿಂದುಳಿವ ವರ್ಗಗಳ ಆಯೋಗ ತಿರಸ್ಕಾರ ಮಾಡಿದೆ ಎಂದರು.

ಮುಸ್ಲಿಮರಲ್ಲಿ ಮೇಲು-ಕೀಳು ಇಲ್ಲ. ಹೀಗಾಗಿ ಅವರಿಗೆ ಧರ್ಮ ಆಧಾರಿತ ಮೀಸಲಾತಿ ನೀಡಬಾರದು ಎಂದು ಸಂವಿಧಾನದಲ್ಲಿಯೇ ಹೇಳಿದೆ. ಆದ್ದರಿಂದ ಮುಸ್ಲಿಮರಿಗೆ ಒಬಿಸಿಯಲ್ಲಿ ಮೀಸಲಾತಿ ನೀಡಬಾರದು. ಒಂದು ವೇಳೆ ಈ ಸರ್ಕಾರ ಇದನ್ನು ಸರಿಪಡಿಸದೇ ಇದ್ದರೆ ಮುಂದೆ ನಮ್ಮ ಸರ್ಕಾರ ಬಂದಾಗ ಇದನ್ನು ಸರಿಪಡಿಸುತ್ತೇವೆ ಎಂದು ಹೇಳಿದರು.