ಮಹಾಬೋಧಿ ಶಾಲೆಗೆ ಅಬ್ದುಲ್ ಸಲಾಂ ಅಂಡರ್-17 ಟ್ರೋಪಿ

| Published : Aug 27 2024, 01:41 AM IST

ಸಾರಾಂಶ

ಈ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಅತಿಥೇಯ ಮೈಸೂರು ಪಬ್ಲಿಕ್ ಶಾಲೆಯನ್ನು ಮಣಿಸುವ ಮೂಲಕ ಮಹಾಬೋಧಿ ಶಾಲೆ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.

ಮೈಸೂರು: ಮೈಸೂರು ಪಬ್ಲಿಕ್ ಸ್ಕೂಲ್ ಏರ್ಪಡಿಸಿದ್ದ 17 ವರ್ಷದೊಳಗಿನ ಮಕ್ಕಳ ಸರ್ ಅಬ್ದುಲ್ ಸಲಾಂ ಟ್ರೋಪಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಹಾಬೋದಿ ಶಾಲೆ ಜಯ ಸಾಧಿಸಿದೆ. ಈ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಅತಿಥೇಯ ಮೈಸೂರು ಪಬ್ಲಿಕ್ ಶಾಲೆಯನ್ನು ಮಣಿಸುವ ಮೂಲಕ ಮಹಾಬೋಧಿ ಶಾಲೆ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು. ಜಿದ್ದಾಜಿದ್ದಿನ ಡ್ರಾ ಪಂದ್ಯದಲ್ಲಿ ಮಹಾಬೋಧಿ ಶಾಲೆ ಪೆನಾಲ್ಟಿ ಶೂಟೌಟ್ ನಲ್ಲಿ ಜಯ ಸಾಧಿಸಿತು. ಪಂದ್ಯಾವಳಿಯಲ್ಲಿ ಮಹಾಬೋಧಿ ಶಾಲೆಯ ಥಾಮಸ್ ಮುಂಡಾ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿ ಪಡೆದರು. ಲುಟಾನ್ ತಾಶಿ ಅಟ್ಟೊ ಮತ್ತು ವಿವೇಕ್ ಬೋಧ್ ಅವರು ತಂಡದ ಕೋಚ್ ಗಳಾಗಿದ್ದರು. ತಂಡವನ್ನು ಮಹಾಬೋಧಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಕ್ಮೆಟ್ ವಾಂಗ್ಡಸ್ ಜ್ಯೋತಿ ಅಭಿನಂದಿಸಿದ್ದಾರೆ.