ಇಂಡಿಯಾ ಬುಕ್‌ ಆಫ್‌ ರಿಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿದ ಅಭಿನಂದನ್‌ ಜೋಶಿ

| Published : Nov 14 2024, 12:49 AM IST

ಇಂಡಿಯಾ ಬುಕ್‌ ಆಫ್‌ ರಿಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿದ ಅಭಿನಂದನ್‌ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

Abhinandan Joshi entered the India Book of Records

ಬೀದರ್‌ : ತನ್ನ ಅಗಾಧ ಕಲಿಕಾ ಸಾಮರ್ಥ್ಯ, ಸಾಮಾಜಿಕ ಚಿಂತನೆಗಳಿಂದ ಅತೀ ಚಿಕ್ಕ ವಯಸ್ಸಿನಲ್ಲಿಯೇ ದಾಖಲೆಗಳನ್ನು ಬರೆದಿರುವ ಬೀದರ್‌ ಮೂಲದ ಎಲ್‌ಕೆಜಿ ಓದುತ್ತಿರುವ ಅಭಿನಂದನ್‌ ಜೋಶಿ, ಇಲ್ಲಿನ ದೀಪಕ ಹಾಗೂ ಅಂಜಲಿ ಜೋಶಿ ಅವರ ಹೆಮ್ಮೆಯ ಪುತ್ರ.

ಒಂದು ವರ್ಷ 9 ತಿಂಗಳು ವಯಸ್ಸಿನಲ್ಲಿದ್ದಾಗಲೇ ವಿವಿಧ ಬಗೆಯ ಹಣ್ಣು, ತರಕಾರಿ, ಹೂವು, ಪ್ರಾಣಿ, ಮಾನವ ಶರೀರದ ವಿವಿಧ ಅಂಗಾಂಗಳ ಚಿತ್ರಗಳನ್ನು ಗುರುತಿಸಿ ಅವುಗಳ ಹೆಸರುಗಳನ್ನು ಹೇಳುವ ಮೂಲಕ ಇಂಡಿಯಾ ಬುಕ್‌ ಆಫ್‌ ರಿಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿದ್ದ.

ಶೀಘ್ರ ಕಲಿಕೆ ಸಾಮರ್ಥ್ಯಕ್ಕಾಗಿ ಕರ್ನಾಟಕ ಅಚೀವರ್ಸ್‌ ಬುಕ್‌ ಆಫ್‌ ರಿಕಾರ್ಡ್‌, ಅಕ್ಟೋಬರ್‌ ಇಂಟರ್‌ನ್ಯಾಶನಲ್‌ ಬುಕ್‌ ಆಫ್‌ ರಿಕಾರ್ಡ್‌ ನಲ್ಲಿಯೂ ಹೆಸರು ದಾಖಲಿಸಿದ್ದಾನೆ. ಅಭಿನಂದನ್‌ಗೆ ಇದೀಗ 5 ವರ್ಷ 1 ತಿಂಗಳು ವಯಸ್ಸು. (ಜನ್ಮ ದಿನಾಂಕ 25-10- 2019)

ಪಲ್ಸ್‌ ಪೋಲಿಯೋ ಅಭಿಯಾನದಲ್ಲಿ ಭಿತ್ತಿ ಪತ್ರದ ಮೂಲಕ ಜಾಗೃತಿ ಮೂಡಿಸುವದಲ್ಲದೆ ರಾಜ್ಯ ಸರ್ಕಾರದ ಲಕ್ಷ ವೃಕ್ಷ ಅಭಿಯಾನಕ್ಕೆ ಸಾಥ್‌ ಕೊಡುವಲ್ಲಿ 5 ವರ್ಷದ ಈ ಪೋರ, ಮನೆಮನೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮರ ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿ ಘೋಷ ವಾಕ್ಯಗಳ ಫಲಕ ಹಿಡಿದು ಪ್ರದರ್ಶಿಸಿ 5ಸಾವಿರ ಸಸಿಗಳನ್ನು ನೆಡೆಸುವ ಮೂಲಕ ಗಮನ ಸೆಳೆದಿದ್ದಲ್ಲದೆ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನನಾಗಿದ್ದ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸೇವಾ ರತ್ನ ಸೇರಿದಂತೆ ಮತ್ತಿತರ ಪ್ರಶಸ್ತಿ, ಸನ್ಮಾನಗಳನ್ನು ತನ್ನದಾಗಿಸಿಕೊಂಡಿದ್ದಾನೆ ಅಭಿನಂದನ್‌.

----

ಫೈಲ್‌ 13ಬಿಡಿ2