ಊಟ ಬಡಿಸಿ, ಸರಳತೆಯಿಂದ ಜನಮನ ಗೆದ್ದ ಸಮರ್ಥ!

| Published : Sep 23 2024, 01:22 AM IST / Updated: Sep 23 2024, 01:23 AM IST

ಸಾರಾಂಶ

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಮ್ಮ 57ನೇ ಜನ್ಮದಿನವನ್ನು ಪತ್ನಿ, ಸಂಸದೆ ಡಾ.ಪ್ರಭಾ, ತಂದೆ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರ ಜೊತೆ ವೇದಿಕೆಯಲ್ಲಿ ಆಚರಿಸಿಕೊಳ್ಳುತ್ತಿದ್ದರೆ, ಇತ್ತ ಊಟದ ಸಭಾಂಗಣದಲ್ಲಿ ಎಸ್ಸೆಸ್ಸೆಂ ಹಿರಿಯ ಪುತ್ರ ಸಮರ್ಥ ಎಂ. ಶಾಮನೂರು ಸಮಾರಂಭಕ್ಕೆ ಆಗಮಿಸಿದ್ದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳಿಗೆ ಸಿಹಿ ತಿನಿಸು ವಿತರಣೆ, ಊಟ ಬಡಿಸುವಲ್ಲಿ ಬ್ಯುಸಿಯಾಗಿ, ಸರಳತೆ, ಆತ್ಮೀಯತೆ ಮೆರೆದರು.

ದಾವಣಗೆರೆ: ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಮ್ಮ 57ನೇ ಜನ್ಮದಿನವನ್ನು ಪತ್ನಿ, ಸಂಸದೆ ಡಾ.ಪ್ರಭಾ, ತಂದೆ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರ ಜೊತೆ ವೇದಿಕೆಯಲ್ಲಿ ಆಚರಿಸಿಕೊಳ್ಳುತ್ತಿದ್ದರೆ, ಇತ್ತ ಊಟದ ಸಭಾಂಗಣದಲ್ಲಿ ಎಸ್ಸೆಸ್ಸೆಂ ಹಿರಿಯ ಪುತ್ರ ಸಮರ್ಥ ಎಂ. ಶಾಮನೂರು ಸಮಾರಂಭಕ್ಕೆ ಆಗಮಿಸಿದ್ದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳಿಗೆ ಸಿಹಿ ತಿನಿಸು ವಿತರಣೆ, ಊಟ ಬಡಿಸುವಲ್ಲಿ ಬ್ಯುಸಿಯಾಗಿ, ಸರಳತೆ, ಆತ್ಮೀಯತೆ ಮೆರೆದರು.

ಅಗರ್ಭ ಶ್ರೀಮಂತ ಅಜ್ಜ, ತಂದೆ, ಸಂಸದೆ ತಾಯಿ ಇಷ್ಟೆಲ್ಲಾ ಇದ್ದರೂ ತಂದೆ ಗೆಲುವಿಗಾಗಿ ಹರಕೆ ಹೊತ್ತು ತಿಂಗಳುಗಳ ಕಾಲ ಬರಿಗಾಲಲ್ಲಿ ಪ್ರಚಾರ ಕೈಗೊಂಡ, ಅಷ್ಟೊಂದು ಶ್ರೀಮಂತಿಕೆ ಇದ್ದರೂ ಸಾಮಾನ್ಯ ಕಾರ್ಯಕರ್ತರು, ಬಡವರು, ಕಿರಿಯರೆನ್ನದೇ ಎಲ್ಲರೊಂದಿಗೆ ಸರಳವಾಗಿ ಬೆರೆಯುವ ಗುಣ ಮೈಗೂಡಿಸಿಕೊಂಡವರು ಸಮರ್ಥ ಶಾಮನೂರು. ಅವರು ಇಲ್ಲಿನ ಬಾಪೂಜಿ ಸಮುದಾಯ ಭವನದ ಅಡುಗೆ ಹಾಲ್‌ನಲ್ಲಿ ಹಲವಾರು ಪಂಕ್ತಿಯಲ್ಲಿ ಸಾವಿರಾರು ಜನರಿಗೆ ಊಟಕ್ಕೆ ವ್ಯವಸ್ಥೆ ಮಾಡಿದ್ದ ಸ್ಥಳದಲ್ಲಿ ತಂದೆ ಮಲ್ಲಿಕಾರ್ಜುನ ಅವರಂತೆ ಅಂಗಿ ತೋಳನ್ನು ಮಡಚಿ ಮೇಲೆರಿಸಿಕೊಂಡು, ಎಲ್ಲರೊಳಗೊಬ್ಬನಾಗಿ ಬಂದವರಿಗೆ ಊಟ ಬಡಿಸಿ, ಸಂಭ್ರಮಿಸಿದ್ದು ಗಮನ ಸೆಳೆಯಿತು.

ಅಜ್ಜ, ತಂದೆ, ತಾಯಿ ವೇದಿಕೆ ಕಾರ್ಯಕ್ರಮದಲ್ಲಿದ್ದರು. ಕುಟುಂಬ ಸದಸ್ಯರು ವೇದಿಕೆ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಅದೇ ಸಮುದಾಯ ಭವನದ ಊಟದ ಹಾಲ್‌ನಲ್ಲಿ ಸಮರ್ಥ ಊಟ ಬಡಿಸುತ್ತಿದ್ದರು.

- - - -22ಕೆಡಿವಿಜಿ12:

ದಾವಣಗೆರೆಯಲ್ಲಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನರ 57ನೇ ಜನ್ಮದಿನ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದ್ದರೆ, ಊಟದ ಸಭಾಂಗಣದಲ್ಲಿ ಹಿರಿಯ ಪುತ್ರ ಸಮರ್ಥ ಎಂ. ಶಾಮನೂರು ಜನರಿಗೆ ಊಟ ಬಡಿಸುವಲ್ಲಿ ಬ್ಯುಸಿಯಾದರು.