ಬೇಲೂರು ಪುರಸಭೆ ಮಳಿಗೆಗಳ ಹರಾಜು ರದ್ದುಗೊಳಿಸಿ

| Published : Jan 14 2025, 01:03 AM IST

ಸಾರಾಂಶ

ಒಳ್ಳೆಯ ಕೆಲಸಗಳಲ್ಲಿ ಹೆಸರು ಮಾಡುತ್ತಿರುವ ಪುರಸಭೆ ಅಧ್ಯಕ್ಷರು ಟೆಂಡರ್ ಪ್ರಕ್ರಿಯೆಯಲ್ಲಿ ಮಳಿಗೆಗಳ ಬಾಡಿಗೆಯನ್ನು ಕಡಿಮೆ ಮಾಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಈ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ವಿ ಎಸ್ ಭೋಜೇಗೌಡ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಎಲ್ಲಿಂದಲೋ ಬಂದು ಮುಖ್ಯ ರಸ್ತೆಯಲ್ಲಿರುವ ಪುರಸಭೆ ಮಳಿಗೆಗಳ ಮೇಲೆ ಎರಡು ದಶಕಗಳಿಂದ ತನ್ನ ಹಿಡಿತ ಸಾಧಿಸುವಲ್ಲಿ ವ್ಯಾಪಾರಸ್ಥರು ಯಶಸ್ವಿಯಾಗಿದ್ದು, ಪುರಸಭೆಯವರು ಇವರ ಕೈಗೊಂಬೆಯಾಗಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಒಳ್ಳೆಯ ಕೆಲಸಗಳಲ್ಲಿ ಹೆಸರು ಮಾಡುತ್ತಿರುವ ಪುರಸಭೆ ಅಧ್ಯಕ್ಷರು ಟೆಂಡರ್ ಪ್ರಕ್ರಿಯೆಯಲ್ಲಿ ಮಳಿಗೆಗಳ ಬಾಡಿಗೆಯನ್ನು ಕಡಿಮೆ ಮಾಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಈ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ವಿ ಎಸ್ ಭೋಜೇಗೌಡ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಈ ಬಾರಿಯ ಹರಾಜನಲ್ಲಿ ಕೇವಲ ನಾಲ್ಕು ಮತ್ತು ಐದು ಸಾವಿರಕ್ಕೆ ಬಾಡಿಗೆ ನಿಗದಿ ಮಾಡಿರುವುದು ಪುರಸಭೆ ಯವರ ಜಾಣತನಕ್ಕೆ ಸಾಕ್ಷಿಯಾಗಿದೆ. ಖಾಸಗಿ ಕಟ್ಟಡದಲ್ಲಿರುವ ಬಾಡಿಗೆದಾರರು ತಿಂಗಳಿಗೆ 25 ರಿಂದ 30 ಸಾವಿರ ಬಾಡಿಗೆ ಕೊಡುತ್ತಿದ್ದಾರೆ. ಆದರೆ ಪುರಸಭೆ ವಾಣಿಜ್ಯ ಮಳಿಗೆಯಲ್ಲಿರುವವರು ಕಳೆದ 15 ವರ್ಷಗಳಿಂದಲೂ ಕೇವಲ ನಾಲ್ಕು ಸಾವಿರ ಬಾಡಿಗೆ ಕೊಡುತ್ತಾ ಪುರಸಭೆಯ ಆದಾಯಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಹಲವಾರು ವರ್ಷಗಳಿಂದ ಜಾಂಡ ಹೂಡಿರುವ ಬಾಡಿಗೆದಾರರಿಗೆ ಕನಿಷ್ಟ 20ರಿಂದ 25 ಸಾವಿರ ನಿಗದಿ ಮಾಡಬೇಕು. ಎಲ್ಲಿಂದಲೋ ಬಂದು ಮುಖ್ಯ ರಸ್ತೆಯಲ್ಲಿರುವ ಪುರಸಭೆ ಮಳಿಗೆಗಳ ಮೇಲೆ ಎರಡು ದಶಕಗಳಿಂದ ತನ್ನ ಹಿಡಿತ ಸಾಧಿಸುವಲ್ಲಿ ವ್ಯಾಪಾರಸ್ಥರು ಯಶಸ್ವಿಯಾಗಿದ್ದು, ಪುರಸಭೆಯವರು ಇವರ ಕೈಗೊಂಬೆಯಾಗಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆರೋಪಿಸಿದರು.

ಪಟ್ಟಣದ ಅಭಿವೃದ್ಧಿಗಾಗಿ ಖಾಲಿ ನಿವೇಶನಗಳಿಗೆ ಮನಸ್ಸು ಇಚ್ಛೆ ಸಾವಿರಾರು ರುಪಾಯಿಗಳ ಕಂದಾಯ ನಿಗದಿಪಡಿಸಿರುವ ಪುರಸಭೆ ಲಕ್ಷಾಂತರ ಆದಾಯ ಬರುವ ಮಳಿಗೆಗಳನ್ನು ಮೂರು, ನಾಲ್ಕು ಸಾವಿರ ರು.ಗಳಿಗೆ ಟೆಂಡರ್ ನೀಡಿದ್ದಾರೆ. ಬಿಸಿಲು ಮಳೆ ಎನ್ನದೆ ರಸ್ತೆಯಲ್ಲಿ ಕುಳಿತು ಹೂವು, ಹಣ್ಣು, ತರಕಾರಿ ಮಾರುವವರ ಹತ್ತಿರ ದಿನಕ್ಕೆ ಐವತ್ತರಿಂದ ನೂರು ವಸಲಿ ಮಾಡುವ ಪುರಸಭೆ ಮಳಿಗೆಯಲ್ಲಿ ಆರಾಮಾಗಿ ವ್ಯಾಪಾರ ಮಾಡುವವರಿಗೆ ತಿಂಗಳಿಗೆ 4000 ಬಾಡಿಗೆ ನಿಗದಿ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆಯ ಮುಂದೆ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.