ಸಂಸದರ ಜನಸ್ಪಂದನ ಸಭೆಗೆ ಅಧಿಕಾರಿಗಳ ಗೈರು

| Published : Jan 16 2025, 12:50 AM IST

ಸಾರಾಂಶ

ತಾಲೂಕಿನ ಸಂತೆಮಾವತ್ತೂರು ಗ್ರಾಮದಲ್ಲಿ ಸಂಸದ ಡಾ. ಸಿಎನ್ ಮಂಜುನಾಥ್ ನಡೆಸಿದ ಜನಸ್ಪಂದನಾ ಸಭೆಗೆ ತಹಸೀಲ್ದಾರ್ ಸೇರಿದಂತೆ ಹಲವಾರು ಇಲಾಖೆ ಅಧಿಕಾರಿಗಳು ಗೈರಾಗಿದ್ದರು.

ಕನ್ನಡಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಗ್ರಾಮದಲ್ಲಿ ಸಂಸದ ಡಾ. ಸಿಎನ್ ಮಂಜುನಾಥ್ ನಡೆಸಿದ ಜನಸ್ಪಂದನಾ ಸಭೆಗೆ ತಹಸೀಲ್ದಾರ್ ಸೇರಿದಂತೆ ಹಲವಾರು ಇಲಾಖೆ ಅಧಿಕಾರಿಗಳು ಗೈರಾಗಿದ್ದರು.ಸಭೆಗೆ ಸಂತೆಮಾವತ್ತೂರು ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವತ್ಸಲ ಬಿಳಿ ದೇವಾಲಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಶಿವಣ್ಣ ಹಾಗೂ ಹೇರೂರು ಗ್ರಾಮ ಪಂಚಾಯಿತಿ ಪಿಡಿಒ ಪ್ರೇಮ ಹೊರತುಪಡಿಸಿ ಕಂದಾಯ, ಪೊಲೀಸ್, ತಾಲೂಕು ಪಂಚಾಯಿತಿ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಕೃಷಿ ಅರಣ್ಯ ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು.

ಅಧಿಕಾರಿಗಳು ಸಂಸದರ ಸಭೆಗೆ ಗೈರಾಗುವಂತೆ ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದಕ್ಕಾಗಿ ಅವರು ಬಂದಿಲ್ಲ ಕಳೆದ ಬಾರಿ ಕುಮಾರಸ್ವಾಮಿ ಜನತಾ ಸ್ಪಂದನ ಕಾರ್ಯಕ್ರಮ ನಡೆಸಿದ್ದಾಗ ಕೂಡ ಇದೇ ರೀತಿ ಮಾಡಿದ್ದರು ಎನ್ನಲಾಗಿದೆ. ಮಾಜಿ ಸಚಿವ ಡಿ ನಾಗರಾಜ ಮಾತನಾಡಿ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಬಳಸಿಕೊಂಡು ತಾವು ಗುದ್ದಲಿ ಪೂಜೆ ಮಾಡುವುದರಲ್ಲಿ ಶಾಸಕರು ಬ್ಯುಸಿಯಾಗಿದ್ದಾರೆ. ಸಂಸದರು ಬಂದಾಗ ಅವರಿಗೆ ಸ್ಪಂದಿಸಿ ಕಾರ್ಯಕ್ರಮವನ್ನು ಮಾಡಬೇಕು. ರಾಜಕಾರಣ ಎಲ್ಲಾ ಸಂದರ್ಭದಲ್ಲಿ ಒಳಿತು ಅಲ್ಲ ಅಭಿವೃದ್ಧಿ ಕೆಲಸದಲ್ಲಿ ಜೊತೆಯಾಗಬೇಕೆಂದರು. ಸಂಸದರಿಗೆ ಅಧಿಕಾರಿಗಳು ನೀಡಿರುವ ಗೌರವಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪರಿಹಾರ ಮತ್ತು ಉತ್ತರ ನೀಡಬೇಕಾಗುತ್ತದೆ ಎಂದರು.