ಸಾರಾಂಶ
ರಾಮನಗರ: ಕ್ರೀಡೆ ಮಕ್ಕಳಲ್ಲಿ ಧೈರ್ಯ ಮತ್ತು ಸಾಹಸ ವೃದ್ಧಿಸುವುದರ ಜೊತೆಗೆ ಮಾನಸಿಕ, ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಞಣ ವಿಭಾಗದ ಡಾ.ಸಿ.ಟಿ.ದೇವರಾಜು ಹೇಳಿದರು.
ರಾಮನಗರ: ಕ್ರೀಡೆ ಮಕ್ಕಳಲ್ಲಿ ಧೈರ್ಯ ಮತ್ತು ಸಾಹಸ ವೃದ್ಧಿಸುವುದರ ಜೊತೆಗೆ ಮಾನಸಿಕ, ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಞಣ ವಿಭಾಗದ ಡಾ.ಸಿ.ಟಿ.ದೇವರಾಜು ಹೇಳಿದರು.
ನಗರದ ಬೇತೇಲ್ ಆಂಗ್ಲಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ-2024 ಉದ್ಘಾಟಿಸಿ ಮಾತನಾಡಿದ ಅವರು, ಗೆಲುವಿಗೆ ಶಿಸ್ತು, ಸಂಯಮ, ಉತ್ತಮ ತರಬೇತಿ ಅಗತ್ಯ ಎಂದರು.ಪ್ರಾಂಶುಪಾಲರಾದ ರೀಟಾ ಮನೋಹರ್ ಮಾತನಾಡಿ, ಸೋಲೆ ಗೆಲುವಿನ ಸೋಪಾನ. ಕ್ರೀಡೆಯಲ್ಲೂ ಹಲವಾರು ಅವಕಾಶಗಳಿವೆ. ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಮುಂದಿನ ಸ್ಪರ್ಧೆಗಳಿಗೆ ಸಜ್ಜಾಗಬೇಕು. ನಿರಂತರ ಅಭ್ಯಾಸದಲ್ಲಿ ತೊಡಗಿದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಶಾಲೆಯಲ್ಲಿ ಮಹಿಳಾ ಮತ್ತು ಪುರುಷ ವಿಭಾಗದಲ್ಲಿ ರನ್ನಿಂಗ್ ರೇಸ್, ಕ್ರಿಕೆಟ್, ರಿಲೇ, ಬ್ಯಾಸ್ಕೆಟ್ ಬಾಲ್, ಥ್ರೋಬಾಲ್, ವಾಲಿಬಾಲ್, ರಿಂಗ್ ರೇಸ್ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. ಈ ವೇಳೆ ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಅರ್ಮನ್ ಅಯುಬ್, ಬೆತಲ್ ಶಾಲೆಯ ಚೇರ್‌ಮನ್ ಮನೋಹರ್ ಮತ್ತಿತರರು ಭಾಗವಹಿಸಿದ್ದರು.