ಸಾರಾಂಶ
ದೇವದುರ್ಗ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕರ್ನಾಟಕ ರೈತ ಸಂಘದ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಿ ಸ್ಥಾನಿಕ ಅಧಿಕಾರಿ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು.
ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ, ರೈತ ಸಂಘದಿಂದ ಪ್ರತಿಭಟನೆಕನ್ನಡಪ್ರಭ ವಾರ್ತೆ ರಾಯಚೂರು/ದೇವದುರ್ಗ
ಸೇವಾ ಅವಧಿ ಅಪೂರ್ಣಗೊಂಡಿದ್ದರೂ ಸೇಡಿನ ಹಾಗೂ ಕುತಂತ್ರಿಗಳ ರಾಜಕಾರಣದ ಪ್ರಭಾವದಿಂದ ಜಿಲ್ಲೆಯ ಉಪವಿಭಾಗದ ಸಹಾಯಕ ಆಯುಕ್ತೆ ಮಹಬೂಬಿ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವುದನ್ನು ಖಂಡಿಸಿ, ಕೂಡಲೇ ವರ್ಗಾವಣೆ ಆದೇಶ ರದ್ದುಪಡಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ(ಆರ್‌ವೈಎಫ್ಐ) ಜಿಲ್ಲಾ ಸಮಿತಿಯಿಂದ ಅದೇ ರೀತಿ ದೇವದುರ್ಗ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕರ್ನಾಟಕ ರೈತ ಸಂಘದ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಿ ಆಯಾ ಇಲಾಖೆ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಸಲ್ಲಿಸಿದರು.
ಕಳೆದ 9 ತಿಂಗಳ ಹಿಂದೆ ರಾಯಚೂರಿಗೆ ವರ್ಗಾವಣೆಯಾಗಿ ಬಂದ ಕೆಎಎಸ್ ಅಧಿಕಾರಿ ಮಹಿಬೂಬಿ ಅವರನ್ನು ಹಠಾತ್ತನೆ ವರ್ಗಾವಣೆ ಮಾಡಿದ ಕ್ರಮವನ್ನು ಖಂಡಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.ಜಾತಿ ಪ್ರೇರಿತ ರಾಜಕಾರಣ ಹಾಗೂ ಜನಪ್ರತಿನಿಧಿಗಳ ವಯಕ್ತಿಕ ಪ್ರತಿಷ್ಟೆಯಿಂದ ಎಸಿ ಮಹಬೂಬಿಯವರ ವರ್ಗಾವಣೆಯಾಗಿದ್ದು, ಕೂಡಲೇ ಅದೇಶ ರದ್ದುಪಡಿಸಿ ಮರು ನಿಯುಕ್ತಿ ಮಾಡಬೇಕು.ಇಲ್ಲದಿದ್ದಲ್ಲಿ ಇತರೆ ಸಂಘಟನೆಗಳೊಂದಿಗೆ ಸೇರಿ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ರಾಯಚೂರಿನ ಪ್ರತಿಭಟನೆಯಲ್ಲಿ ಆರ್‌ವೈಎಫ್ ಜಿಲ್ಲಾ ಸಮಿತಿ ಮುಖಂಡರಾದ ಅಜೀಜ್ ಜಾಗೀರ್ದಾರ್ ನಿರಂಜನ್ ಕುಮಾರ್ ಸೈಯದ್ ಅಬ್ಬಾಸ್ ಅಲಿ, ಯಲ್ಲಪ್ಪ ಹನೀಫ್ ಅಬಕಾರಿ ಇದ್ದರು.ದೇವದುರ್ಗದಲ್ಲಿ ನಡೆದ ಹೋರಾಟದಲ್ಲಿ ಸಮಿತಿ ಅಧ್ಯಕ್ಷ ಕೆ.ಗಿರಿಲಿಂಗಯ್ಯ ಸ್ವಾಮಿ,ಪದಾಧಿಕಾರಿಗಳಾದ ದುರಗಣ್ಣ ಇರಬಗೇರಾ, ಯಂಕಪ್ಪ ವೆಂಗಳಾಪೂರ, ಹನುಮಂತ್ರಾಯ ಕರಿಗುಡ್ಡ, ಮೌನೇಶ ದೇವದುರ್ಗ, ರಮೇಶ ಹಾಗೂ ಇತರರು ಇದ್ದರು.