ಸದಸ್ಯತ್ವ ಅಭಿಯಾನ ಚುರುಕುಗೊಳಿಸಿ

| Published : Sep 19 2024, 01:58 AM IST

ಸಾರಾಂಶ

ಭಾರತೀಯ ಜನತಾ ಪಕ್ಷ ದೇಶದ ಬಹುದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ಕೆಲಸ ಮಾಡುವ ಅಪರೂಪದ ಪಕ್ಷ ಇದಾಗಿದೆ. ದೇಶಾದ್ಯಂತ ಸದಸ್ಯತಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಭಾರತೀಯ ಜನತಾ ಪಕ್ಷ ದೇಶದ ಬಹುದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ಕೆಲಸ ಮಾಡುವ ಅಪರೂಪದ ಪಕ್ಷ ಇದಾಗಿದೆ. ದೇಶಾದ್ಯಂತ ಸದಸ್ಯತಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಪಟ್ಟಣದ ಕಾಡರಕೊಪ್ಪ ರಸ್ತೆಯ ಶಂಭುಲಿಂಗಾನಂದ ಮಠದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮತ್ತು ವಿವಿಧ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳ ಪ್ರಮುಖರು ಇನ್ನಷ್ಟು ಚುರುಕಾಗಬೇಕು. ಬೂತ್ ಅಧ್ಯಕ್ಷರು ಹಾಗೂ ತಂಡದವರ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ತಮ್ಮ ತಂಡದೊಂದಿಗೆ ಗ್ರಾಮದ ಮನೆ-ಮನೆಗೆ ಭೇಟಿ ನೀಡಿ ಸದಸ್ಯರ ನೋಂದಣಿ ಮಾಡಬೇಕು. ಮೊದಲಿಗೆ ತಾವು ಸ್ವತಃ ಸದಸ್ಯತ್ವ ಪಡೆಯಬೇಕು. ನಂತರ ತಮ್ಮ ಮನೆಯ ಸದಸ್ಯರು ಮತ್ತು ಗ್ರಾಮಸ್ಥರು ಹೆಸರನ್ನು ನೋಂದಾಯಿಸಬೇಕು ಎಂದು ಸೂಚಿಸಿದರು.

ಬಿಜೆಪಿ ಯುವ ಮುಖಂಡ ಅರುಣ ಕಾರಜೋಳ ಮಾತನಾಡಿ, ಪಕ್ಷದ ಸದಸ್ಯತ್ವ ಪಡೆದವರಿಗೆ ಪಕ್ಷವೂ ಸೂಕ್ತ ಸ್ಥಾನಮಾನಗಳು ಮತ್ತು ಪ್ರಾತಿನಿಧ್ಯ ಕಲ್ಪಿಸುತ್ತದೆ ಹೆಚ್ಚು ಸದಸ್ಯರನ್ನು ನೋಂದಾಯಿಸಿದ ಕಾರ್ಯಕರ್ತರಿಗೆ ಪಕ್ಷವು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ಕಾರ್ಯಕರ್ತರು ಹೆಚ್ಚೆಚ್ಚು ಸದಸ್ಯರನ್ನು ಸೇರ್ಪಡೆ ಮಾಡಬೇಕು. ಪ್ರತಿ ಬೂತ್‌ನಿಂದ ಗರಿಷ್ಠ ಮಟ್ಟದಲ್ಲಿ ಸದಸ್ಯರನ್ನು ನೋಂದಾವಣೆಯಾಗಬೇಕು. ಪ್ರತಿ ಗ್ರಾಮ, ತಾಂಡಾ, ವಾಡಿ ಹೀಗೆ ಕ್ಷೇತ್ರದ ಯಾವೊಂದು ಪ್ರದೇಶವು ಸದಸ್ಯತ್ವ ಅಭಿಯಾನದಿಂದ ಹೊರಗೆ ಉಳಿಯಬಾರದೆಂದು ಹೇಳಿದರು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ ಮಾತನಾಡಿ, ಹಿಂದೆಲ್ಲಾ ಸದಸ್ಯತ್ವ ಅಭಿಯಾನಗಳು ಆಫ್ ಲೈನ್‌ ಮುಖಾಂತರ ನಡೆಸಲಾಗುತ್ತಿತ್ತು. ಕಾಲಕ್ಕೆ ತಕ್ಕಂತೆ ಬಿಜೆಪಿ ಪಕ್ಷವು ಆಧುನಿಕತೆಗೆ ಮಾರ್ಪಾಡು ಹೊಂದಿದ್ದು, ಆನ್‌ಲೈನ್ ಮುಖಾಂತರ ಪಕ್ಷದ ಸದಸ್ಯತ್ವ ನೋಂದಣೆಗೆ ಮುಂದಾಗಿದೆ ಎಂದರು.ಈ ವೇಳೆ ಬಿಜೆಪಿ ಪಕ್ಷದ ವಿವಿಧ ಪದಾಧಿಕಾರಿಗಳನ್ನು ಸಂಸದ ಪಿ.ಸಿ.ಗದ್ದಿಗೌಡರ, ಅರುಣ ಕಾರಜೋಳ, ಸಂಗನಗೌಡ ಕಾತರಕಿ, ನಾಗಪ್ಪ ಅಂಬಿ, ಲೋಕಣ್ಣ ಕತ್ತಿ ಸನ್ಮಾನಿಸಿದರು.

ಸದಸ್ಯತ್ವ ಅಭಿಯಾನ ವೇಳೆ ನಾಗಪ್ಪ ಅಂಬಿ, ಕೆಎಂಎಫ್ ನಿರ್ದೇಶಕ ವಿವೇಕಾನಂದ ಪಾಟೀಲ, ಶ್ರೀಶೈಲಗೌಡ ಪಾಟೀಲ, ವ್ಹಿ.ಎಂ.ತೆಗ್ಗಿ, ಲೋಕಣ್ಣ ಕತ್ತಿ, ಯಮನಪ್ಪ ಹೊರಟ್ಟಿ, ಪರಮಾನಂದ ಟೊಪಣ್ಣವರ, ಬಿ.ಎಲ್.ಬಬಲಾದಿ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ಮಾಜಿ ಜಿಪಂ ಸದಸ್ಯ ಬಿ.ವ್ಹಿ.ಹಲಕಿ, ವಿರೇಶ ಪಂಚಕಟ್ಟಿಮಠ, ಶಿವಪ್ಪ ಚೌಧರಿ, ವಿನೋದ ಘೋರ್ಪಡೆ, ಅರುಣ ನರಗುಂದ, ಗ್ರಾಪಂ ಮಾಜಿ ಅಧ್ಯಕ್ಷ ಹಣಮಂತಗೌಡ ಪಾಟೀಲ, ವಸಂತಗೌಡ ಪಾಟೀಲ, ಆನಂದ ಹವಳಖೋಡ, ಕೃಷ್ಣಾ ಸಾಳುಂಕಿ, ಅರುಣ ಮುಧೋಳ, ಗೋಪಾಲಗೌಡ ಪಾಟೀಲ, ಸುರೇಶ ಹುಗ್ಗಿ, ಹುಸೇನಪ್ಪ ರುದ್ರಾಕ್ಷಿ, ಕೃಷ್ಣಾ ಹೂಗಾರ, ರವಿ ಚೌಧರಿ, ಶಾಂತಾ ಹಣಗಲಿ, ದೇವಣ್ಣ ದಾಸರಡ್ಡಿ, ಎಸ್.ಎಂ.ಹಗ್ಗದ ಪಟ್ಟಣದ ಹಾಗೂ ವಿವಿಧ ಗ್ರಾಮದ ಬಿಜೆಪಿ ಕಾರ್ಯಕರ್ತರು ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ---

ಕೋಟ್‌

ದೂರವಾಣಿ ೮೮೦೦೦೦೨೦೨೪ ಸಂಖ್ಯೆಗೆ ಮಿಸ್‌ ಕಾಲ್ ಕೊಡುವ ಮೂಲಕ ಸದಸ್ಯತ್ವ ಪಡೆಯಬಹುದು. ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಪಕ್ಷದ ಸದಸ್ಯರಾಗಲು ಅರ್ಹತೆ ಹೊಂದಿದ್ದರಿಂದ ಲಿಂಗ, ಜಾತಿ ಧರ್ಮ ಯಾವುದೇ ಬೇಧವಿಲ್ಲದೇ ಪ್ರತಿಯೊಬ್ಬರನ್ನು ಪಕ್ಷದ ಸದಸ್ಯರನ್ನಾಗಿಲು ಮುಂದಾಗಬೇಕು.

-ಸಂಗನಗೌಡ ಕಾತರಕಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ