ಚಿಕ್ಕಮಗಳೂರುರಾಷ್ಟ್ರೀಯ ಹೆದ್ದಾರಿ ೧೭೩ ಮೂಡಿಗೆರೆಯಿಂದ ಮೂಗ್ತೀಹಳ್ಳಿವರೆಗಿನ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದ ಭೂಸ್ವಾಧೀನ ಹಾಗೂ ಫಲಾನುಭವಿಗಳಿಗೆ ಪರಿಹಾರ ಪಾವತಿ ಕಾರ್ಯ ಪೂರ್ಣಗೊಳಿಸಿ ಕಾಮಗಾರಿ ಚುರುಕು ಗೊಳಿಸುವಂತೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರಾಷ್ಟ್ರೀಯ ಹೆದ್ದಾರಿ ೧೭೩ ಮೂಡಿಗೆರೆಯಿಂದ ಮೂಗ್ತೀಹಳ್ಳಿವರೆಗಿನ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದ ಭೂಸ್ವಾಧೀನ ಹಾಗೂ ಫಲಾನುಭವಿಗಳಿಗೆ ಪರಿಹಾರ ಪಾವತಿ ಕಾರ್ಯ ಪೂರ್ಣಗೊಳಿಸಿ ಕಾಮಗಾರಿ ಚುರುಕು ಗೊಳಿಸುವಂತೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ೧೭೩ ಮೂಡಿಗೆರೆಯಿಂದ ಮೂಗ್ತೀಹಳ್ಳಿ ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಹೆದ್ದಾರಿ ಅಗಲೀಕರಣ ಸಂಬಂಧ ಮರಗಳ ತೆರವು ಕಾರ್ಯ ವೇಗವಾಗಿ ಸಾಗಬೇಕು. ಮರಗಳ ತೆರವು ಕಾರ್ಯದಲ್ಲಿ ಕೇವಲ ಕಡಿತಲೆ ಅಲ್ಲದೇ ಸ್ಥಳಾಂತರಕ್ಕೆ ಸಾಧ್ಯವಿರುವ ಮರಗಳನ್ನು ವ್ಯವಸ್ಥಿತವಾಗಿ ಸ್ಥಳಾಂತರಿಸಲು ಕ್ರಮ ವಹಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದರು ಸೂಚಿಸಿದರು.ಭೂಸ್ವಾಧೀನ ಪಡಿಸಿದ ಎಲ್ಲಾ ಫಲಾನುಭವಿಗಳ ಖಾತೆಗೆ ಪರಿಹಾರ ಪಾವತಿಗೆ ಉಂಟಾದ ತಾಂತ್ರಿಕ ಲೋಪಗಳನ್ನು ಗಮನಿಸಿ ಶೀಘ್ರ ಬಗೆಹರಿಸಿ ಹಣ ಪಾವತಿಸಬೇಕು. ತಕರಾರು ವ್ಯಕ್ತಪಡಿಸುವ ಫಲಾನುಭವಿಗಳನ್ನು ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಭೇಟಿ ಮಾಡಿ ಸಂವಹನ ನಡೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದ ಅವರು, ಯಾವುದೇ ಲೋಪವಿಲ್ಲದೆ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ಸಾಗಬೇಕು ಎಂದರು.
ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ, ಕಾಮಗಾರಿ ಮೊದಲ ಹಂತದ ಪ್ರಕ್ರಿಯೆಗಳಾದ ಭೂಸ್ವ್ವಾಧೀನ, ಪರಿಹಾರ ಪಾವತಿ ಹಾಗೂ ಮರ ಕಡಿತಲೆಗೆ ಇರುವ ದೋಷಾರೋಪ ಗಮನಿಸಿ ಕಾಮಗಾರಿಗೆ ಯಾವುದೇ ಅಡಚಣೆ ಯಾಗದಂತೆ ಕ್ರಮವಹಿಸಿ ವ್ಯವಸ್ಥಿತ ರಸ್ತೆ ನಿರ್ಮಾಣ ಕೈಗೊಳಬೇಕು ಎಂದರು.ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಎಂಜಿನಿಯರ್ ಶಶಿಕುಮಾರ್ ಸಭೆಗೆ ಮಾಹಿತಿ ನೀಡಿ, ರಾಷ್ಟ್ರೀಯ ಹೆದ್ದಾರಿ ೧೭೩ ಮೂಡಿಗೆರೆಯಿಂದ ಮೂಗ್ತೀಹಳ್ಳಿವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣ ಗೊಂಡಿದ್ದು ಒಟ್ಟು ೨೭೧ ಫಲಾನುಭವಿಗಳಿದ್ದಾರೆ. ಇದರಲ್ಲಿ ೨೭ ಸರ್ಕಾರಿ ಸರ್ವೆ ನಂಬರ್‌ಗಳಾಗಿವೆ. ಇವರೆಗೆ ೧೦೭ ಫಲಾನುಭವಿಗಳಿಗೆ ಪರಿಹಾರ ನೀಡಲಾಗಿದೆ. ೫೬ ಫಲಾನುಭವಿಗಳಿಗೆ ಕೋರ್ಟ್‌ನಲ್ಲಿ ಠೇವಣಿ ಮಾಡಲಾಗಿದೆ. ಬಾಕಿ ಇರುವ ಫಲಾನುಭವಿಗಳ ಪರಿಹಾರ ಹಣ ಶೀಘ್ರವಾಗಿ ನೀಡಲು ಕ್ರಮ ವಹಿಸಲಾಗುವುದು. ಕಾಮಗಾರಿ ಸಂಬಂಧ ಸುಮಾರು ೨೩೨೬ ಮರಗಳನ್ನು ತೆರವುಗೊಳಿಸಬೇಕಾಗಿದೆ. ಮರ ಕಡಿತಲೆ ಪ್ರಗತಿಯಲ್ಲಿದೆ, ಸ್ಥಳಾಂತರಕ್ಕೆ ಸಾಧ್ಯವಿರುವ ಮರಗಳ ವ್ಯವಸ್ಥಿತ ಸ್ಥಳಾಂತರಕ್ಕೆ ಕ್ರಮ ವಹಿಸಲಾಗುವುದು ಹಾಗೂ ಕಡಿತಲೆಯಾಗುತ್ತಿರುವ ಮರಗಳಿಗೆ ಪರ್ಯಾಯವಾಗಿ ಒಂದು ಮರಕ್ಕೆ ಹತ್ತು ಸಸಿಗಳಂತೆ ರಸ್ತೆ ಬದಿಯಲ್ಲಿ ಅಥವಾ ಅದೇ ತಾಲೂಕಿನ ಕ್ಷೀಣಿತ ಅರಣ್ಯ ಪ್ರದೇಶದಲ್ಲಿ ಸಸಿ ನೆಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ, ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಾಗರ್, ಜಿಲ್ಲಾ ಅರಣ್ಯಾಧಿಕಾರಿ ಬೋರಯ್ಯ ಉಪಸ್ಥಿತರಿದ್ದರು ,