ಹೆಣ್ಣಾಗಲಿ, ಗಂಡಾಗಲಿ ಮಗುವನ್ನು ಸ್ವೀಕರಿಸಿ: ಎಸ್ .ಡಿ.ಬೆನ್ನೂರ್

| Published : May 15 2024, 01:34 AM IST

ಹೆಣ್ಣಾಗಲಿ, ಗಂಡಾಗಲಿ ಮಗುವನ್ನು ಸ್ವೀಕರಿಸಿ: ಎಸ್ .ಡಿ.ಬೆನ್ನೂರ್
Share this Article
  • FB
  • TW
  • Linkdin
  • Email

ಸಾರಾಂಶ

ಭ್ರೂಣ ಲಿಂಗ ಪತ್ತೆ ಕಾನೂನಿಗೆ ವಿರುದ್ಧ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ. ಹೆಣ್ಣು ಭಗವಂತನ ಸೃಷ್ಟಿಯ ಹೂ ಅದನ್ನು ಮೊಗ್ಗಲ್ಲೆ ಚಿವುಟದಿರಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ, ಎಲ್ಲಾ ರಂಗದಲ್ಲಿ ಮುಂದೆ ಇದ್ದು ಹೆಣ್ಣು ಭ್ರೂಣ ಹತ್ಯೆ ಮಹಾಪಾಪ. ಭ್ರೂಣ ಹತ್ಯೆಯಿಂದ ಸ್ತ್ರೀ ಪುರುಷರ ಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತದೆ, ಇದು ಸಮಾಜಕ್ಕೆ ಮಾರಕ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಗಂಡು-ಹೆಣ್ಣು ಎಂಬ ಬೇಧ ಮಾಡದೇ ಮಗು ಯಾವುದಾದರೂ ಸ್ವೀಕರಿಸುವದನ್ನು ಪ್ರತಿ ದಂಪತಿ ಮೈಗೂಡಿಸಿಕೊಳ್ಳಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಹೇಳಿದರು.

ತಾಲೂಕಿನ ಆಲಗೂಡು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಟಿ.ಎಂ ಹೊಸೂರು ಆರೋಗ್ಯ ಮತ್ತು ಕ್ಷೇಮ ಕೇಂದ್ರದಿಂದ ಆಯೋಜಿಸಿದ್ದ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ತಡೆಗಟ್ಟುವ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭ್ರೂಣ ಲಿಂಗ ಪತ್ತೆ ಕಾನೂನಿಗೆ ವಿರುದ್ಧ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ. ಹೆಣ್ಣು ಭಗವಂತನ ಸೃಷ್ಟಿಯ ಹೂ ಅದನ್ನು ಮೊಗ್ಗಲ್ಲೆ ಚಿವುಟದಿರಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ, ಎಲ್ಲಾ ರಂಗದಲ್ಲಿ ಮುಂದೆ ಇದ್ದು ಹೆಣ್ಣು ಭ್ರೂಣ ಹತ್ಯೆ ಮಹಾಪಾಪ. ಭ್ರೂಣ ಹತ್ಯೆಯಿಂದ ಸ್ತ್ರೀ ಪುರುಷರ ಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತದೆ, ಇದು ಸಮಾಜಕ್ಕೆ ಮಾರಕ ಎಂದು ಕಳವಳ ವ್ಯಕ್ತಪಡಿಸಿದರು.

ಬಾಲ್ಯ ವಿವಾಹ ಪದ್ಧತಿ ಸಹ ಸಮಾಜಕ್ಕೆ ಪಿಡುಗಾಗಿದೆ. ವಿದ್ಯಾವಂತರಾಗಿ ವೈಜ್ಞಾನಿಕವಾಗಿ ಮುನ್ನುಗ್ಗಿದರು ಸಹ ಇನ್ನು ಬಾಲ್ಯ ವಿವಾಹಗಳು ಹಾಗೂ ಭ್ರೂಣ ಹತ್ಯೆಗಳು ಆಗುತ್ತಿವೆ. ಇದನ್ನು ಸಂಪೂರ್ಣ ತೊಡೆದು ಹಾಕುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಬಾಲ್ಯ ವಿವಾಹದಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ಅಕಾಲಿಕ ತಾಯಿ ಮರಣ ಸಂಭವಿಸಬಹುದು. ಆದ್ದರಿಂದ ಹೆಣ್ಣು ಮಕ್ಕಳಿಗೆ ಮೊದಲು ಶಿಕ್ಷಣ ಕೊಡಿಸಿ ನಂತರ ಮದುವೆ ವಿಚಾರ ಮಾಡಿ ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಬೇಡಿ ಎಂದು ತಾಯಂದಿರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಗೀತಾ, ಸಮುದಾಯ ಆರೋಗ್ಯ ಆಧಿಕಾರಿ ಮಲ್ಲಮ್ಮ, ಅಶಾ ಕಾರ್ಯಕರ್ತೆಯರಾದ ಶಶಿಕಲಾ, ಸುಧಾಮಣಿ ಸೇರಿದಂತೆ ಮಕ್ಕಳ ತಾಯಂದಿರು, ಇತರರು ಇದ್ದರು.