ಸಿಹಿ, ಕಹಿ ಘಟನೆಗಳೆಲ್ಲ ಸಮಾನವಾಗಿ ಸ್ವೀಕರಿಸಿ

| Published : Apr 01 2025, 12:46 AM IST

ಸಾರಾಂಶ

ಜೀವನದಲ್ಲಿ ಭಗವಂತ ಎಲ್ಲರ ಪರೀಕ್ಷೆ ಮಾಡುತ್ತಾನೆ. ಸುಖ ಮತ್ತು ಕಹಿ ಘಟನೆಗಳು ಬರುತ್ತಲೇ ಇರುತ್ತವೆ. ಸುಖ ಬಂದಾಗ ಹಿಗ್ಗದೇ, ಕಷ್ಟ ಬಂದಾಗ ಕುಗ್ಗದೇ ಬದುಕಬೇಕು. ಇವೆರಡನ್ನೂ ಸಮಾನತೆಯಿಂದ ನೋಡಬೇಕು ಎಂದು ಗೋವಿನಕೋವಿ ಶ್ರೀ ಹಾಲಸ್ವಾಮಿ ಬೃಹನ್ಮಠದ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ನುಡಿದಿದ್ದಾರೆ.

- ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದಲ್ಲಿ ಸದ್ಗುರು ಶಿವಯೋಗಿ ಶ್ರೀ- - - ಕನ್ನಡಪ್ರಭ ವಾರ್ತೆ ನ್ಯಾಮತಿ

ಜೀವನದಲ್ಲಿ ಭಗವಂತ ಎಲ್ಲರ ಪರೀಕ್ಷೆ ಮಾಡುತ್ತಾನೆ. ಸುಖ ಮತ್ತು ಕಹಿ ಘಟನೆಗಳು ಬರುತ್ತಲೇ ಇರುತ್ತವೆ. ಸುಖ ಬಂದಾಗ ಹಿಗ್ಗದೇ, ಕಷ್ಟ ಬಂದಾಗ ಕುಗ್ಗದೇ ಬದುಕಬೇಕು. ಇವೆರಡನ್ನೂ ಸಮಾನತೆಯಿಂದ ನೋಡಬೇಕು ಎಂದು ಗೋವಿನಕೋವಿ ಶ್ರೀ ಹಾಲಸ್ವಾಮಿ ಬೃಹನ್ಮಠದ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ನುಡಿದರು.

ತಾಲೂಕಿನ ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದಲ್ಲಿ ಶನಿವಾರ ಯುಗಾದಿ ಅಮಾವಾಸ್ಯೆಯಂದು ಹಮ್ಮಿಕೊಂಡಿದ್ದ ಧರ್ಮಸಭೆ, ನ್ಯಾಮತಿ- ಹೊನ್ನಾಳಿ ಪತ್ರಕರ್ತರಿಗೆ, ನ್ಯಾಮತಿ ಕೃಷಿ ಮಾರುಕಟ್ಟೆ ಮಂಡಿ ವರ್ತಕರಿಗೆ ಹಾಗೂ ವಿದ್ಯುತ್‌ ಇಲಾಖಾ ಲೈನ್‌ಮ್ಯಾನ್‌ಗಳಿಗೆ ಗುರುರಕ್ಷೆ ನೀಡಿ, ಸನ್ಮಾನಿಸಿ ಅವರು ಮಾತನಾಡಿದರು.

ದಿನಪತ್ರಿಕೆಗಳು ಮತ್ತು ಸೇವಾ ಸಮಿತಿ ವತಿಯಿಂದ ಹಾಲಸ್ವಾಮಿ ಬೃಹನ್ಮಠವು ಕರ್ನಾಟಕದಾದ್ಯಂತ ಬೆಳಕಿಗೆ ಬಂದಿದೆ. ಪತ್ರಕರ್ತರು ಶ್ರೀ ಮಠದ ಬಗ್ಗೆ ಪತ್ರಿಕೆಗಳಲ್ಲಿ ಬರೆದು ಬೆಳಕಿಗೆ ತಂದಿದ್ದಾರೆ. ಅದೇ ರೀತಿ ಸೇವಾ ಸಮಿತಿ ಮತ್ತು ಗ್ರಾಮಸ್ಥರು, ಭಕ್ತರ ಸಹಕಾರದಿಂದ ಸಣ್ಣದಾಗಿ ಇದ್ದ ಮಠವು ದೊಡ್ಡದಾಗಿ ಬೆಳೆದಿದೆ. ಇಲ್ಲಿ ಸನ್ಮಾನಿತ ಪತ್ರಕರ್ತರು ಅರ್ಥಗರ್ಭಿತವಾಗಿ ಮಾತನಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಎಚ್‌.ಎಂ.ಶಾಸ್ತ್ರಿ ಹೊಳೆಮಠ, ಗಿರೀಶ್‌ ನಾಡಿಗ್‌, ಮೃತ್ಯುಂಜಯ ಪಾಟೀಲ್‌, ಯೋಗೇಶ್‌ ಕೋರಿ, ಹಾಲಾರಾಧ್ಯ ಮಾತನಾಡಿದರು.

ಶ್ರೀ ಬಸವರಾಜ ಸಂಗಡಿಗರಿಂದ ವೇದಘೋಷ, ಪ್ರೇಮಕುಮಾರ್‌ ಪ್ರಾರ್ಥನೆ, ರೇಣುಕಾಸ್ವಾಮಿ ನಿರೂಪಿಸಿದರು. ಶ್ರೀ ಹಾಲಸ್ವಾಮಿ ಬೃಹನ್ಮಠದ ಸೇವಾ ಸಮಿತಿ ಸದಸ್ಯರು, ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು. ಅನಂತರ ಅನ್ನಸಂತರ್ಪಣೆ ನಡೆಯಿತು.

- - - (-ಫೋಟೋ):