ಸಾರಾಂಶ
- ಜಗಳೂರು ತಾಲೂಕುಮಟ್ಟದ ಪ.ಪೂ. ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ - - -
ಕನ್ನಡಪ್ರಭ ವಾರ್ತೆ ಜಗಳೂರುಕ್ರೀಡೆಯಲ್ಲಿ ಒಬ್ಬರು ಗೆಲ್ಲಬೇಕು, ಮತ್ತೊಬ್ಬರು ಸೋಲಬೇಕು. ಗೆಲುವಿನಿಂದ ಪ್ರಶಸ್ತಿ ಪುರಸ್ಕಾರ ಪಡೆದವರು ಮಹಾನ್ ಸಾಧನೆ ಎಂದು ಭಾವಿಸದೇ, ಎರಡನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ ಕಾಲೇಜಿಗೆ ಹೆಸರು ತರುವ ವಿದ್ಯಾರ್ಥಿಗಳಾಗಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ರಾಜರಾಜೇಶ್ವರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಶಾಲಾ ಶಿಕ್ಷಣ ಪದವಿ ಪೂರ್ವ ಇಲಾಖೆ ದಾವಣಗೆರೆ ಹಾಗೂ ಶ್ರೀ ರಾಜೇಶ್ವರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಗಳೂರು ತಾಲೂಕುಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ತಾಲೂಕುಮಟ್ಟದಲ್ಲಿ ಗೆಲುವು ಪಡೆದು ಜಿಲ್ಲಾಮಟ್ಟಕ್ಕೆ ಹೋಗುವ ಎಲ್ಲ ಕ್ರೀಡಾಪಟುಗಳಿಗೂ ನನ್ನ ವೈಯಕ್ತಿಕವಾಗಿ ಸಮವಸ್ತ್ರ ಕೊಡಿಸಲಾಗುವುದು. ಜಿಲ್ಲಾಮಟ್ಟದಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳಿಗೂ ವಿಶೇಷವಾದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶಿಕ್ಷಕರ ದಿನಾಚರಣೆಗೆ ಉಪನ್ಯಾಸಕರು ಕಡ್ಡಾಯ:ಸೆ.೫ರಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಶಿಕ್ಷಕರ ದಿನಾಚರಣೆಯನ್ನಾಗಿ ರಾಷ್ಟ್ರ ಮತ್ತು ರಾಜ್ಯಮಟದಲ್ಲೂ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಹಾಗಾಗಿ ಈ ಬಾರಿ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಕಡ್ಡಾಯವಾಗಿ ಭಾಗವಹಿಸಬೇಕು. ಅಂದು ನಡೆಯವ ಮೆರವಣಿಗೆ ಮತ್ತು ವಾಲ್ಮೀಕಿ ಸಮುದಾಯ ಭವನದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.
ವಿವಿಧ ಕಾಲೇಜುಗಳಿಂದ ಆಗಮಿಸಿದ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು. ವೈಯಕ್ತಿಕವಾಗಿ ₹೨೫ ಸಾವಿರ ವೇದಿಕೆಯಲ್ಲಿಯೇ ವಿತರಿಸಿದರು.ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್, ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಳನಿವೇಲು, ರಾಜರಾಜೇಶ್ವರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಬಸವರಾಜ್, ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ನಾಲಂದ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಬಿ.ಎನ್.ಎಂ. ಸ್ವಾಮಿ, ಜಗದೀಶ್, ಸ್ಟಿಫನ್ ಡಿಸೋಜಾ, ಎಚ್.ಪ್ರಕಾಶ್, ಶಿವಕುಮಾರ್ ನಾಯ್ಕ, ಕೆ.ಆರ್ ಮದ್ದಪ್ಪ, ಬಿ.ಎಸ್ ರಾಜು. ಭೀಮಾಭೋವಿ, ಖಾಸೀಂ ಸಾಬ್, ಉಪನ್ಯಾಸಕ ಟಿ. ನಾಗೇಂದ್ರಪ್ಪ, ಬಿ.ಶರಣಪ್ಪ, ಪಿ.ಎಸ್ ಸೂರಣ್ಣ, ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರಿದ್ದರು.
- - --03ಜೆ.ಜಿ.ಎಲ್.1.ಜೆಪಿಜಿ:
ಶಾಸಕ ಬಿ.ದೇವೇಂದ್ರಪ್ಪ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.