ಸ್ಪರ್ಧೆಯಲ್ಲಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿ

| Published : Apr 09 2025, 12:46 AM IST

ಸಾರಾಂಶ

ಜಗತ್ತಿನ ಪ್ರತಿಯೊಂದು ರಂಗದಲ್ಲೂ ಇಂದು ಸ್ಪರ್ಧಾತ್ಮಕತೆ ಇದ್ದು, ಸ್ಪರ್ಧೆಯಲ್ಲಿ ಸೋಲು, ಗೆಲುವುಗಳನ್ನು ಮುಖ್ಯವಾಗಿರಿಸದೇ ಪ್ರತಿಯೊಂದನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕ ಮಹಾಂತೇಶ ಎಸ್.ಕೌಜಲಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಜಗತ್ತಿನ ಪ್ರತಿಯೊಂದು ರಂಗದಲ್ಲೂ ಇಂದು ಸ್ಪರ್ಧಾತ್ಮಕತೆ ಇದ್ದು, ಸ್ಪರ್ಧೆಯಲ್ಲಿ ಸೋಲು, ಗೆಲುವುಗಳನ್ನು ಮುಖ್ಯವಾಗಿರಿಸದೇ ಪ್ರತಿಯೊಂದನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕ ಮಹಾಂತೇಶ ಎಸ್.ಕೌಜಲಗಿ ಹೇಳಿದರು.

ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಸೋತವರು ಕುಗ್ಗದೇ ಸೋಲನ್ನು ತಮ್ಮ ಗೆಲುವಿನ ಮೆಟ್ಟಿಲಾಗಿಸಿಕೊಂಡು ಮುಂದಿನ ಭವಿಷ್ಯ ಗಟ್ಟಿಕೊಳಿಸಿಕೊಳ್ಳಬೇಕು ಎಂದರು.ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿರೂಪಾಕ್ಷ ಮಾಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಓದಿನತ್ತ ಮಾತ್ರ ಗಮನಹರಿಸದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಂಪೂರ್ಣ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಬಂದಿರುವ ಅವಕಾಶಗಳನ್ನು ಸದುಪಯೋಗಪಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಜಾನಪದ ನೃತ್ಯದಲ್ಲಿ ಧಾರವಾಡದ ಕಿಟೆಲ್ ಮಹಾವಿದ್ಯಾಲಯ ಪ್ರಥಮ ಸ್ಥಾನ, ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ಎಸ್.ಕೆ.ಕಲಾ ಮತ್ತು ಎಚ್ಚೆಸ್ಕೆ ವಿಜ್ಞಾನ ಸಂಸ್ಥೆ ದ್ವಿತೀಯ ಸ್ಥಾನ ಹಾಗೂ ಸವದತ್ತಿಯ ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಸಿನಿಮಾ ಹಾಡಿನ ನೃತ್ಯದಲ್ಲಿ ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ಜೆ.ಜಿ.ವಾಣಿಜ್ಯ ಕಾಲೇಜು ಪ್ರಥಮ ಸ್ಥಾನ, ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ವಾಣಿಜ್ಯ ಕಾಲೇಜು ದ್ವಿತೀಯ ಸ್ಥಾನ, ಸವದತ್ತಿಯ ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಎಸ್ ಬೆಳ್ಳುಬ್ಬಿ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದೆ.ದೇಶಭಕ್ತಿ ಗೀತೆ ಗಾಯನದಲ್ಲಿ ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ವಾಣಿಜ್ಯ ಕಾಲೇಜು ಪ್ರಥಮ ಸ್ಥಾನ, ಬೈಲಹೊಂಗಲದ ಕೆ.ಆರ್.ಸಿ.ಇ ಸಂಸ್ಥೆಯ ಎ.ಬಿ.ಪಾಟೀಲ ಬಿ.ಇಡಿ ಕಾಲೇಜು ದ್ವಿತೀಯ ಸ್ಥಾನ, ಸವದತ್ತಿಯ ಕೆ.ಎಂ.ಮಾಮನಿ ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದೆ.ಜಾನಪದ ಗೀತೆ ಗಾಯನದಲ್ಲಿ : ರಾಮದುರ್ಗದ ಸಿ.ಎಸ್.ಬೆಂಬಳಗಿ ಕಾಲೇಜು ಪ್ರಥಮ ಸ್ಥಾನ, ಬೈಲಹೊಂಗಲದ ಕೆ.ಆರ್.ಸಿ.ಇ ಸಂಸ್ಥೆಯ ಎ.ಬಿ.ಪಾಟೀಲ ಬಿ.ಇಡಿ ಕಾಲೇಜು ದ್ವಿತೀಯ, ಬಾದಾಮಿಯ ಎಸ್.ಎಸ್.ಬಿ.ಎಂ ಪದವಿ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದೆ.

ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ೨೬ ತಂಡಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಬಿ.ವಿ.ಮಲಗೌಡರ, ಉಮೇಶ ಬಾಳಿ, ಪ್ರಾಚಾರ್ಯ ಡಾ.ಎನ್.ಆರ್.ಸವತೀಕರ, ಪ್ರೊ.ಕೆ.ರಾಮರೆಡ್ಡಿ, ರಾಜಶೇಖರ ನಿಡವಣಿ, ಎ.ಎ.ಹಳ್ಳೂರ, ಡಾ.ಎ.ಎಫ್.ಬದಾಮಿ, ಡಾ.ಎನ್.ಎ.ಕೌಜಗೇರಿ, ಪ್ರೊ.ಎಂ.ಸಿ.ಹಾದಿಮನಿ, ಪ್ರೊ.ವಚನ ಬಸಿಡೋಣಿ, ಪ್ರೊ.ಸುನಂದಾ ಹಟ್ಟಿ, ಬಿ.ಎಸ್.ಪುಟ್ಟಿ, ಎಂ.ಎಂ.ಎಲಿಗಾರ, ನಾಗರಾಜ ಸೋಗಿ, ಬಸವರಾಜ ಮಟ್ಟಿ, ಶಿವಾನಂದ ಅಂಬಿಗೇರ, ಶಶಿಧರ ಹಿಟ್ನಳ್ಳಿ, ಮಂಜುನಾಥ ಉಳ್ಳಿಗೇರಿ, ಸಂತೋಷ ಕಾಳೆ, ಇಂದು ಮೀಶಿ, ಅಶೋಕ ವಿಘ್ನೇಶಿ, ಬಸಪ್ಪ ಮಡಿವಾಳರ ಉಪಸ್ಥಿತರಿದ್ದರು.