ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ

| Published : Jul 08 2024, 12:31 AM IST

ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಜಿಲ್ಲೆಯಲ್ಲಿ 12 ರಿಂದ 16 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಕ್ರೀಡೆ ಆಯೋಜಿಸುವ ಮೂಲಕ ಚೆಸ್ ಕ್ರೀಡೆಯನ್ನು ಮತ್ತೆ ಉತ್ತುಂಗಕ್ಕೆ ಕೊಂಡೊಯ್ಯುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ

ಲಕ್ಷ್ಮೇಶ್ವರ: ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ಇಂದಿನ ಸೋಲು ನಾಳಿನ ಗೆಲುವಿಗೆ ಮೆಟ್ಟಿಲಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಗಿರೀಶ ಅಗಡಿ ಹೇಳಿದರು.

ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಭಾನುವಾರ ನಡೆದ ಗದಗ ಜಿಲ್ಲಾ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಚೆಸ್ ಭಾರತೀಯರು ಜಗತ್ತಿಗೆ ನೀಡಿದ ಕೊಡುಗೆಯಾಗಿದೆ, ನಮ್ಮ ಹಿರಿಯರು ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಗಮನ ಹರಿಸುತ್ತಿದ್ದರು. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಸೋಲು ಬಂದಾಗ ಕುಗ್ಗದೆ,ಗೆಲುವಿನ ಸಂಭ್ರಮದಲ್ಲಿ ಮೈಮರೆಯಬಾರದು ಎಂಬುದನ್ನು ಕ್ರೀಡೆಗಳು ನಮಗೆ ಜೀವನದ ಪಾಠ ಕಲಿಸುತ್ತವೆ ಎಂಬುದನ್ನು ಮರೆಬಾರದು ಎಂದು ಹೇಳಿದರು.

ಈ ವೇಳೆ ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ಚೇರಮನ್ ಬಾಬುರಾವ್ ವೆರ್ಣೇಕರ ಮಾತನಾಡಿ, ಗದಗ ಜಿಲ್ಲೆಯಲ್ಲಿ 12 ರಿಂದ 16 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಕ್ರೀಡೆ ಆಯೋಜಿಸುವ ಮೂಲಕ ಚೆಸ್ ಕ್ರೀಡೆಯನ್ನು ಮತ್ತೆ ಉತ್ತುಂಗಕ್ಕೆ ಕೊಂಡೊಯ್ಯುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಚೆಸ್ ಕ್ರೀಡಾ ಸಂಯೋಜಕರಾಗಿದ್ದ ದೈಹಿಕ ಶಿಕ್ಷಕ ಎಂ.ಐ.ಕಣಕೆ ಮಾತನಾಡಿ, ಮಾನಸಿಕವಾಗಿ ನಾವು ಹೇಗೆ ತಯಾರಿ ಮಾಡಿಕೊಳ್ಳಬೇಕು, ಗಟ್ಟಿಗೊಳ್ಳಬೇಕು ಹಾಗೂ ವೈರಿಗಳ ನಡೆಯನ್ನು ಮೊದಲೆ ಕಂಡು ಹಿಡಿದು ಅದಕ್ಕೆ ಪ್ರತಿತಂತ್ರ ಹೆಣೆಯುವ ಚಾಣಾಕ್ಷ ಬುದ್ಧಿ ಚೆಸ್ ಕ್ರೀಡೆಯು ನಮಗೆ ತಿಳಿಸಿಕೊಡುತ್ತದೆ. ಭಾರತೀಯರು ಚೆಸ್ ಕ್ರೀಡೆಯಲ್ಲಿ ಪ್ರಾವೀಣ್ಯ ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಗದಗ ಜಿಲ್ಲಾ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯ ಆರ್ಬಿಟರ್ ಪ್ರಮೋದಕುಮಾರ ಮೋರೆ, ಚಂದ್ರಶೇಖರ ದೊಡ್ಡಮನಿ, ಎಸ್.ಎಂ. ಉಮ್ಮಣ್ಣವರ, ನಿಜಗುಣಿ ಕಂಬಳಿ, ಎನ್.ಜೆ. ಮುಲ್ಲಾ ಆಗಮಿಸಿದ್ದರು. ನಿರ್ಣಾಯಕರಾಗಿ ಎಸ್.ಪಿ. ಕಟ್ಟಣ್ಣವರ, ಯಲ್ಲಮ್ಮ ಇಟಗಿ, ಬಿ.ಟಿ. ಹೆಬ್ಬಾಳ ಕಾರ್ಯ ನಿರ್ವಹಿಸಿದರು. ಭಾನುವಾರ ನಡೆದ ಚೆಸ್ ಪಂದ್ಯಾವಳಿಯಲ್ಲಿ 80 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.

ಪಂದ್ಯಾವಳಿಯನ್ನು ಎಸ್‌ಐ ಮೌಲ್ವಿ ಸೀಟಿ ಊದುವ ಮೂಲಕ ಚಾಲನೆ ನೀಡಿದರು. ಈ ವೇಳೆ ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ಆದೇಶ ಹುಲಗೂರ, ಶ್ರೀಕಾಂತ ಪೂಜಾರ, ಶಿವಯ್ಯ ಕುಲಕರ್ಣಿ, ಆರ್.ಎ. ಮುಲ್ಲಾ, ಎ.ಜೆ.ಬೂದಿಹಾಳ, ಮಂಜುನಾಥ ಅಂಗಡಿ, ಪಿ.ಎಂ.ವಾಲಿ ಸೇರಿದಂತೆ ಅನೇಕರು ಇದ್ದರು.