ಸಾರಾಂಶ
ಗುತ್ತಿಗೆದಾರರು ನೀಡಿದ ದೂರಿನ ಅನ್ವಯ ಕಾರ್ಯಾಚರಣೆಗೆ ಇಳಿದ ಲೋಕಾಯುಕ್ತ ಪೊಲೀಸರು, ಜ್ಯೂನಿಯರ್ ಎಂಜಿನಿಯರ್ ನಾಗರಾಜು 30 ಸಾವಿರ ರು. ಹಾಗೂ ಮುಖ್ಯಾಧಿಕಾರಿ 15 ಸಾವಿರ ರು. ಲಂಚದ ಹಣ ಸ್ವೀಕರಿಸುತ್ತಿದ್ದಾಗ ಬಂಧಿಸಿದ್ದಾರೆ.
ಜ್ಯೂನಿಯರ್ ಎಂಜಿನಿಯರ್ ನಾಗರಾಜು, ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಬಂಧಿತರು.ಕ್ಲಾಸ್-1 ಗುತ್ತಿಗೆದಾರರೊಬ್ಬರು 2022-23ನೇ ಸಾಲಿನ 5ನೇ ಹಣಕಾಸು ಯೋಜನೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಎಸ್ ಕೋಡಿ ಸರ್ಕಾರಿ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿಯ ಗುತ್ತಿಗೆ ಕೆಲಸವನ್ನು ನಿರ್ವಹಿಸಿದ್ದರು. ಕಾಮಗಾರಿ ಬಿಲ್ ಮೊತ್ತ 9,77,154 ರು. ಮಂಜೂರಾತಿಗಾಗಿ ಪ.ಪಂ. ಜ್ಯೂನಿಯರ್ ಎಂಜಿನಿಯರ್ ನಾಗರಾಜು ಬಳಿ ವಿಚಾರಿಸಿದಾಗ, ಬಿಲ್ ಪಾಸ್ ಮಾಡಲು ತನಗೆ 37 ಸಾವಿರ ರು. ಮತ್ತು ಪ.ಪಂ. ಮುಖ್ಯಾಧಿಕಾರಿಗೆ 15 ಸಾವಿರ ರು. ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದ. ಅಲ್ಲದೆ, ಜ್ಯೂನಿಯರ್ ಎಂಜಿನಿಯರ್ ನಾಗರಾಜು ಮುಂಚಿತವಾಗಿಯೇ 7 ಸಾವಿರ ರು. ಹಣವನ್ನು ಗುತ್ತಿಗೆದಾರರಿಂದ ಗೂಗಲ್ ಪೇ ಮಾಡಿಸಿಕೊಂಡಿದ್ದ.
ಗುತ್ತಿಗೆದಾರರು ನೀಡಿದ ದೂರಿನ ಅನ್ವಯ ಕಾರ್ಯಾಚರಣೆಗೆ ಇಳಿದ ಲೋಕಾಯುಕ್ತ ಪೊಲೀಸರು, ಜ್ಯೂನಿಯರ್ ಎಂಜಿನಿಯರ್ ನಾಗರಾಜು 30 ಸಾವಿರ ರು. ಹಾಗೂ ಮುಖ್ಯಾಧಿಕಾರಿ 15 ಸಾವಿರ ರು. ಲಂಚದ ಹಣ ಸ್ವೀಕರಿಸುತ್ತಿದ್ದಾಗ ಬಂಧಿಸಿದ್ದಾರೆ.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎ. ನಟರಾಜ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಡಾ. ಗಾನ, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ, ಸುರೇಶ್ ಕುಮಾರ್, ಚಂದ್ರಶೇಖರ್ ಕೆ.ಎನ್., ಚಂದ್ರಶೇಖರ್ ಸಿ.ಎಲ್. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.