ಸಮುದಾಯದ ಹಿತ ನಾಡಿನ ಹಿತಾಸಕ್ತಿಗೆ ಪೂರಕವಾಗಿರಲಿ

| Published : Aug 14 2024, 12:54 AM IST

ಸಮುದಾಯದ ಹಿತ ನಾಡಿನ ಹಿತಾಸಕ್ತಿಗೆ ಪೂರಕವಾಗಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ವೀರಶೈವ ಸಮುದಾಯವು ಶತಮಾನದ ಇತಿಹಾಸವನ್ನು ಹೊಂದಿದ್ದು, ಅದು ಯಾವಾಗಲೂ ಈ ನಾಡಿನ ಅಭ್ಯುದಯಕ್ಕೆ ಶ್ರಮಿಸುತ್ತಲೇ ಬಂದಿದೆ

ಕನ್ನಡಪ್ರಭ ವಾರ್ತೆ ಹುಣಸೂರು

ಸಮುದಾಯದ ಹಿತವು ಎಂದೂ ಈ ದೇಶದ ಜಾತ್ಯತೀತ ಮೌಲ್ಯಗಳಿಗೆ ವಿರುದ್ಧವಾಗಿರದೆ ನಾಡಿನ ಹಿತಾಸಕ್ತಿಗೆ ಪೂರಕವಾಗಿರಬೇಕು ಎಂದು ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಗುರುಬೂದಿ ಮಂಗಳಮಂಟಪ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಹುಣಸೂರು ಘಟಕದ ನೂತನ ಪದಾಧಿಕಾರಿಗಳ ಕರ್ತವ್ಯ ಸ್ವೀಕಾರ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವೀರಶೈವ ಸಮುದಾಯವು ಶತಮಾನದ ಇತಿಹಾಸವನ್ನು ಹೊಂದಿದ್ದು, ಅದು ಯಾವಾಗಲೂ ಈ ನಾಡಿನ ಅಭ್ಯುದಯಕ್ಕೆ ಶ್ರಮಿಸುತ್ತಲೇ ಬಂದಿದೆ. 12ನೇ ಶತಮಾನದಲ್ಲೇ ಜಾತ್ಯತೀತತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಬಸವಣ್ಣನವರ ಅನುಭವ ಮಂಟಪದ ಮೂಲಕ ತೋರಿಸಿಕೊಟ್ಟಿದ್ದಾರೆ. ಸಮಾಜದ ಕಲ್ಯಾಣದಿಂದ ಸರ್ವರ ಕಲ್ಯಾಣವಾಗಬೇಕು. ದೇಶದ ಏಕತೆ, ಭದ್ರತೆ ಮತ್ತು ಸಾಮಾಜಿಕ ಸದೃಢತೆಗೆ ವೀರಶೈವ-ಲಿಂಗಾಯಿತ ಸಮಾಜದ ಕೊಡುಗೆಯನ್ನು ನಾವೆಲ್ಲರೂ ಅರಿತು ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಸಾನಿಧ್ಯವಹಿಸಿದ್ದ ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಮಾತನಾಡಿ, ಭಾರತೀಯ ಸಮಾಜ ನಿಂತ ನೀರಲ್ಲ. ಬದಲಾವಣೆ ಜಗದ ನಿಯಮ ಮುಂತಾದ ಜಂಗಮ ಸಂಸ್ಕೃತಿಯನ್ನು ಒಳಗೊಂಡು ಪಕ್ವವಾಗುತ್ತಲೇ ಇದೆ. ವೀರಶೈವ ಲಿಂಗಾಯಿತ ಸಮಾಜ ಅದರೊಳಗೊಡಿ ತನ್ನದೇ ಆದ ಮಹತ್ತರ ಮತ್ತು ಐತಿಹಾಸಿಕ ಕೊಡುಗೆಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ನೆಲೆಯಾಗಿ ನಿಂತಿದೆ ಎಂದರು.

ಮೈಸೂರು ಜಿಲ್ಲಾ ವೀರಶೈವ ಮಹಾಸಭೆಯ ನೂತನ ಅಧ್ಯಕ್ಷ ಹಿನಕಲ್ ಬಸವರಾಜು ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದ ಮುನ್ನಡೆಗಾಗಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಸಮುದಾಯದ ಹಿತ ದ್ವೇಷವನ್ನು ಬಿತ್ತಬಾರದು ಎಂದರು.

ತಾಲೂಕು ಘಟಕದ ನೂತನ ಅಧ್ಯಕ್ಷ ಎಚ್.ಎಸ್. ಸೋಮಶೇಖರ್ ಮಾತನಾಡಿ, ತಾಲೂಕಿನಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿಯುವುದಾಗಿ ಭರವಸೆ ನೀಡಿದರು.

ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮೋದೂರು ಮಹೇಶಾರಾಧ್ಯ, ಮಹಾಸಭಾದ ಮಾಜಿ ಅಧ್ಯಕ್ಷ ಜಾಬಗೆರೆ ರಮೇಶ್‌ ಕುಮಾರ್, ಡಾ. ವೃಷಬೇಂದ್ರಸ್ವಾಮಿ, ಕೆ.ಆರ್. ನಗರ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಪಿ. ರಮೇಶಕುಮಾರ್, ರೇಣುಕಪ್ರಸಾದ್, ಶಿವಕುಮಾರ್, ವೀರಶೈವ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಹರೀಶ್, ನಿರ್ದೇಶರಾದ ಭಾಗ್ಯಕುಮಾರ್, ಕೂಸಪ್ಪ, ಕರ್ಣಕುಪ್ಪೆ ಬಸವರಾಜ್, ವಜ್ರಮ್ಮ, ಮಂಜುಳ ಯಮಗುಂಖ್ಪ, ಹೆಗ್ಗಂದೂರು ಶಿವಕುಮಾರ್, ಬಿ. ರವಿ, ಬಿ.ಎನ್. ನಾಗರಾಜಪ್ಪ, ವೀರಭದ್ರಪ್ಪ ಇದ್ದರು. ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.

ಅಧಿಕಾರ ಸ್ವೀಕರಿಸಿದ ಪದಾಧಿಕಾರಿಗಳು

ಎಚ್.ಎಸ್. ಸೋಮಶೇಖರ್ (ಅಧ್ಯಕ್ಷ), ನಿರ್ದೇಶಕರಾಗಿ ಜೆ.ಎಸ್. ರಮೇಶ್‌ ಕುಮಾರ್, ಭಾಗ್ಯಕುಮಾರ್, ದೇವರಾಜು, ಜಯಣ್ಣ, ಎಂ.ಆರ್. ಜಗದೀಶ್, ಸೋಮಣ್ಣ, ಕೆ.ಸಿ. ಮಹದೇವಪ್ಪ, ಎಚ್.ಬಿ. ಶೇಖರಾಜು, ಪರಮೇಶ್‌ ಬಿಳಿಕೆರೆ, ಚಂದ್ರಶೇಖರ್, ಬಿ.ಕೆ. ಲೋಕೇಶ್, ಪುಟ್ಟಲಿಂಗಪ್ಪ, ಪರಮೇಶ್, ಬಸಮ್ಮಣಿ, ಸುಮಿತ್ರಾ, ವಿನೋದ, ಭಾಗ್ಯ, ವಿ. ರಾಣಿ, ಗೌರಮ್ಮ ಮತ್ತು ಎಸ್.ಆರ್. ಮಂಜುಳಾ.