ಸಾರಾಂಶ
ಪಕ್ಷ ಕಟ್ಟುವ ಮತ್ತು ಕಾರ್ಯಕರ್ತರನ್ನು ಸಂಘಟಿಸಿ, ರಾಜಕೀಯ ಭವಿಷ್ಯ ನೀಡುವ ನಾಯಕರು ಬೆಳೆಯಬೇಕು, ಬಿಜೆಪಿ ಹೈಕಮಾಂಡ್ ತೀರ್ಮಾನವನ್ನು ತಿರಸ್ಕರಿಸುವ ಗುಣ ಸರಿಯಲ್ಲ. ಪಕ್ಷದಲ್ಲಿ ಒಡಕು ತರುವ ನಾಯಕರ ಮನಸ್ಸು ಬದಲಿಸುವ ಅಗತ್ಯವಿದೆ
ಕನ್ನಡಪ್ರಭ ವಾರ್ತೆ ಮಂಡ್ಯ
ಯತ್ನಾಳ್ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವರು ನಾವಲ್ಲ. ಆದರೂ ಬಿಜೆಪಿ ಹೈಕಮಾಂಡ್ ನಿರ್ಧರಿಸಿ, ರಾಜ್ಯಾಧ್ಯಕ್ಷರನ್ನಾಗಿ ಯಾರನ್ನು ಮಾಡಿದ್ದಾರೋ ಅವರನ್ನು ಒಪ್ಪಿಕೊಂಡು ಹೋಗುವ ಗುಣವನ್ನು ಪ್ರತಿಯೊಬ್ಬ ಬಿಜೆಪಿ ನಾಯಕರು, ಕಾರ್ಯಕರ್ತರು ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ್ ಹುಟ್ಟುಹಬ್ಬ ಪ್ರಯುಕ್ತ ವಯೋವೃದ್ಧರಿಗೆ ಪೌಷ್ಟಿಕಾಹಾರ ಮತ್ತು ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಕ್ಷ ಕಟ್ಟುವ ಮತ್ತು ಕಾರ್ಯಕರ್ತರನ್ನು ಸಂಘಟಿಸಿ, ರಾಜಕೀಯ ಭವಿಷ್ಯ ನೀಡುವ ನಾಯಕರು ಬೆಳೆಯಬೇಕು, ಬಿಜೆಪಿ ಹೈಕಮಾಂಡ್ ತೀರ್ಮಾನವನ್ನು ತಿರಸ್ಕರಿಸುವ ಗುಣ ಸರಿಯಲ್ಲ. ಪಕ್ಷದಲ್ಲಿ ಒಡಕು ತರುವ ನಾಯಕರ ಮನಸ್ಸು ಬದಲಿಸುವ ಅಗತ್ಯವಿದೆ ಎಂದರು.ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ್ ಅವರು ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ಜನ್ಮದಿನ ಪ್ರಯುಕ್ತ ಕೆಂಪೇಗೌಡ ಒಕ್ಕಲಿಗರ ವೇದಿಕೆಯಡಿ ಅದ್ಧೂರಿ ಕಾರ್ಯಕ್ರಮ ಮಾಡಿದ್ದರು, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಮಾಜಿಮುಖ್ಯಮಂತ್ರಿ ಯಡಿಯೂರಪ್ಪ, ಸಂತೋಷ್ ಜಿ ಅವರನ್ನು ಒಂದೇ ವೇದಿಕೆ ಕರತಂದು ಸಂಘಟಿಸಿ, ಕಾರ್ಯಕರ್ತರಿಗೆ ಹೊಸಶಕ್ತಿ ತಂದರು ಎಂದು ಸ್ಮರಿಸಿದರು.
ಯತ್ನಾಳ್‌ರವರು ಅಶ್ವಥ್ ನಾರಾಯಣ್ ರವರ ರೀತಿಯಲ್ಲಿ ಸಂಘಟನೆ ಮಾಡುವ ಗುಣವನ್ನು ತೋರಬೇಕೇ ಹೊರತು ರಾಜ್ಯಾಧ್ಯಕ್ಷರ ವಿರುದ್ಧ ನಿರಂತರ ದೂರುವುದು ಸರಿಯಲ್ಲ ಎಂದು ಸೂಕ್ಷ್ಮವಾಗಿ ನುಡಿದರು.ಇಂತಹ ಸಂಘಟನೆಯಿಂದ ಪಕ್ಷ ಗಟ್ಟಿಯಾಗಿ ಬೆಳೆಯುತ್ತವೆ, ಕಾರ್ಯಕರ್ತರಿಗೆ ಹೊಸ ಉಮ್ಮಸ್ಸು, ಹುರುಪು ಬರುತ್ತದೆ. ಹೊಸ ಹೊಸ ಆಲೋಚನೆಗಳು ಪಕ್ಷ ಬೆಳೆವಣಿಗೆಗೆ ಪ್ರೇರಣಿಯಾಗುತ್ತದೆ. ಯಾವುದೇ ಹಂತದಲ್ಲೂ ಹಿನ್ನಡೆ ಅನುಭವಿಸುವುದು ಕುಡಿಮೆಯಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಚಾಮರಾಜ್, ವಿವೇಕ್, ಮದ್ದೂರು ಸತೀಶ್, ವಕೀಲ ಸುರೇಶ್, ನಿತ್ಯಾನಂದ, ವಿದ್ಯನಾಗೇಂದ್ರ, ಸಿದ್ದರಾಜು, ಪ್ರಸನ್ನ, ಚಂದ್ರ ಸೇರಿ ಮತ್ತಿತರರಿದ್ದರು.