ವಿರೋಧದ ನಡುವೆಯೂ ಮಂಡಲ ಅಧ್ಯಕ್ಷರ ಅಧಿಕಾರ ಸ್ವೀಕಾರ

| Published : Feb 08 2024, 01:33 AM IST

ವಿರೋಧದ ನಡುವೆಯೂ ಮಂಡಲ ಅಧ್ಯಕ್ಷರ ಅಧಿಕಾರ ಸ್ವೀಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಗರ ಮಂಡಲದ ನೂತನ ಅಧ್ಯಕ್ಷರಾಗಿ ಎನ್.ವಿ. ಪರಮೇಶ್ವರಯ್ಯ ಮೂಲ ಬಿಜೆಪಿಯವರ ಗೈರು ಮತ್ತು ಅಪಸ್ವರದ ನಡುವೆಯೂ ಅಧಿಕಾರ ಸ್ವೀಕಾರ ಮಾಡಿದರು.

ಎನ್. ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಗರ ಮಂಡಲದ ನೂತನ ಅಧ್ಯಕ್ಷರಾಗಿ ಎನ್.ವಿ. ಪರಮೇಶ್ವರಯ್ಯ ಮೂಲ ಬಿಜೆಪಿಯವರ ಗೈರು ಮತ್ತು ಅಪಸ್ವರದ ನಡುವೆಯೂ ಅಧಿಕಾರ ಸ್ವೀಕಾರ ಮಾಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜು, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುಂದರ್, ಜಿಲ್ಲಾ ಉಪಾಧ್ಯಕ್ಷ ಸಿ.ಎಂ ಪರಮೇಶ್ವರಯ್ಯ, ಜಿಲ್ಲಾ ಕಾರ್ಯದರ್ಶಿ ರೇವಣ್ಣ, ನಗರಮಂಡಲ ಪ್ರಧಾನ ಕಾರ್ಯದರ್ಶಿ ಕವಿತಾ ಇನ್ನಿತರರ ಸಮ್ಮುಖದಲ್ಲಿ ಪರಮೇಶ್ವರಯ್ಯ ಅಧಿಕಾರ ಸ್ವೀಕರಿಸಿದರು. ಪಕ್ಷದ ಕಾರ್ಯಕರ್ತರ ಸಹಕಾರದೊಂದಿಗೆ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ನೂತನ ಅದ್ಯಕ್ಷರು ಹೇಳಿದರು. ಅಲ್ಲದೆ ಪರಮೇಶ್ವರಯ್ಯ ಅವರು ನಿರ್ಗಮಿತ ಅಧ್ಯಕ್ಷ ರಮೇಶ್ ಮುರಾರಿ ಅವರ ಗೈರು ಹಾಜರಿಯಲ್ಲಿಯೇ ಅಧಿಕಾರ ವಹಿಸಿಕೊಂಡರು.

ಪ್ರತ್ಯೇಕ ಸಭೆ: ಪರಮೇಶ್ವರಯ್ಯ ಅಧಿಕಾರಿ ವಹಿಸುಕೊಳ್ಳುತ್ತಿದ್ದಂತೆ ನಿರ್ಗಮಿತ ನಗರಮಂಡಲ ಮಾಜಿ ಅಧ್ಯಕ್ಷ ರಮೇಶ್ ಮುರಾರಿ, ಶಂಕರ್, ಬಸವರಾಜಪ್ಪ, ಗಿರೀಶ್, ರಾಜಶೇಖಕರ್ ಸೇರಿದಂತೆ ಹಲವರು ಪ್ರತ್ಯೇಕ ಸಭೆ ನಡೆಸಿ ನಗರ ಮಂಡಲ ಅಧ್ಯಕ್ಷ ಸ್ಥಾನ ದಿಢೀರ್ ಬದಲಾಯಿಸಿದ ಕ್ರಮ ಹಾಗೂ ಪ್ರಾಥಮಿಕ ಸದಸ್ಯತ್ವ ಇಲ್ಲದ ವಲಸಿಗರಿಗೆ ನೀಡಲಾಗಿದೆ ಎಂದು ಅಪರಸ್ವ ವ್ಯಕ್ತಪಡಿಸಿದರು. ಈ ವೇಳೆ ಹಲವು ಮುಖಂಡರು ಮಾತನಾಡಿ, ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹೊಂದದವರಿಗೆ ಅಧ್ಯಕ್ಷಸ್ಥಾನ ನೀಡಿದ್ದು ಖಂಡನೀಯ, ಪರಮೇಶ್ವರಯ್ಯ ಮಾಜಿ ಶಾಸಕ ಬಾಲರಾಜು ಬೆಂಬಲಿಗರು ಎಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಖಂಡಿಸಿದರಲ್ಲದೆ ನಾವು ಪಕ್ಷ ಬಿಡುವುದಿಲ್ಲ, ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೆವೆ, ಈ ಸಂಬಂಧ ಜಿಲ್ಲಾಧ್ಯಕ್ಷರ ಜೊತೆ ಚರ್ಚಿಸೋಣ ಎಂದು ಸಭೆಯಲ್ಲಿ ತೀರ್ಮಾನಿಸಿದರು. ಈಗ ನಗರ ಮಂಡಲ ಅಧ್ಯಕ್ಷರಾಗಿ ನೇಮಕವಾದ ಪರಮೇಶ್ವರಯ್ಯ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಬೇಸರವಿಲ್ಲ, ಆದರೆ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಹೊಂದಿಲ್ಲ, ಹಾಗಾಗಿ ನಾವು ಸಭೆ ನಡೆಸಿ ಬೇಸರ ವ್ಯಕ್ತಪಡಿಸಿದ್ದೆವೆ. ಈ ಸಂಬಂಧ ವಾಸ್ತವ ಬೆಳವಣಿಗೆಯನ್ನು ಜಿಲ್ಲಾಧ್ಯಕ್ಷರಿಗೆ ವಿವರಣೆ ನೀಡಿದ್ದೆವೆ, ಸಭೆ ನಡೆಸಿದ ನಾವು ಪಕ್ಷದಲ್ಲಿರುತ್ತೆವೆ, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿಲ್ಲ, ನಮ್ಮ ದ್ಯೇಯ ಲೋಕಸಭೆಯಲ್ಲಿ ಯಾರು ಅಭ್ಯರ್ಥಿಯಾದರೂ ಬಿಜೆಪಿ ಬೆಂಬಲಿಸುವುದೇ ಆಗಿದೆ.

ರಮೇಶ್ ಮುರಾರಿ, ನಿರ್ಗಮಿತ ನಗರ ಮಂಡಲ ಅದ್ಯಕ್ಷ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಪ್ರತ್ಯೇಕ ಸಭೆ ನಡೆಸಿದವರನ್ನು ಆಹ್ವಾನ ನೀಡಲಾಗಿತ್ತು, ಆದರೆ ಏಕೆ ಸಭೆಗೆ ಬರಲಿಲ್ಲ ಎಂಬುದು ತಿಳಿದಿಲ್ಲ, ಈ ಸಂಬಂಧ ಎಲ್ಲರನ್ನು ಒಟ್ಟಾಗಿ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಪಕ್ಷದಲ್ಲಿ ಯಾವುದೆ ಭಿನ್ನಮತವಿಲ್ಲ, ಗೊಂದಲಗಳಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಲಾಗುವುದು.

ಚಿಂತು ಪರಮೇಶ್ ಬಾಜಪ ಜಿಲ್ಲಾ ಉಪಾಧ್ಯಕ್ಷ.