ಸಾರಾಂಶ
ಶಿಗ್ಗಾಂವಿ: ಬ್ಯಾಂಕಿನ ಸೇವೆ ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿದ್ದು, ಇಂದಿನ ಯುಗದಲ್ಲಿ ತಿಳಿಯದ್ದನ್ನು ತಿಳಿದುಕೊಳ್ಳುವ ಮೂಲಕ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಸೇವೆಗಳನ್ನು ಗುರುತಿಸಿ ಅವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಳ್ಳುವುದು ಮತ್ತು ಅವುಗಳನ್ನು ನಿತ್ಯದ ಬದುಕಿನಲ್ಲಿ ಬಳಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕಾರಿ ವಿನೋದಕುಮಾರ ಹೇಳಿದರು.ತಾಲೂಕಿನ ಹುಲಗೂರ ಗ್ರಾಮದಲ್ಲಿ ನಡೆದ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಮತ್ತು ತರಬೇತಿ ಕಾರ್ಯಾಗಾರದಲ್ಲಿ ಗ್ರಾಹಕರಿಗೆ ಹೆಚ್ಚಿನ ತಿಳಿವಳಿಕೆಯ ಅವಶ್ಯಕತೆಯಿಂದ ಬ್ಯಾಂಕಿನ ವ್ಯವಹಾರಕ್ಕೆ ಮುಂದಾಗಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಲಗೂರ ಗ್ರಾ.ಪಂ. ಅಧ್ಯಕ್ಷ ಜಾವಿದ್ ಅಹ್ಮದ್ ಸವಣೂರ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಬ್ಯಾಂಕಿಂಗ್ ವ್ಯವಹಾರ ಜ್ಞಾನ ಕಡಿಮೆಯಿದ್ದು, ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಹೆಚ್ಚಿನ ಜ್ಞಾನ ನೀಡಲು ಮುಂದಾಗಬೇಕು. ಅದರಿಂದ ಜನರ ವ್ಯವಹಾರಗಳು ಸುಗಮಗೊಳ್ಳಲು ಸಾಧ್ಯವಿದೆ. ವಿವಿಧ ಗ್ರಾಮಗಳಲ್ಲಿ ಕಾರ್ಯಾಗಾರ ಆಯೋಜಿಸುವ ಜತೆಗೆ ತರಬೇತಿ ನೀಡುವುದು ಅಗತ್ಯವಾಗಿದೆ. ಇದರಿಂದ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಲು ಸಾಧ್ಯವಿದೆ ಎಂದು ಹೇಳಿದರು.ಲೀಡ್ ಬ್ಯಾಂಕಿನ ಅಧಿಕಾರಿ ಅನಿತಾ ಮಾತನಾಡಿ, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬ್ಯಾಂಕ್ ಆಧಾರಿತ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಹೀಗಾಗಿ ಗ್ರಾಹಕರಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಕುರಿತು ಸಾಮಾನ್ಯ ಜ್ಞಾನ ಮುಖ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಬಸವರಾಜ, ರುದ್ರಪ್ಪ , ಫಯಾಜಅಹ್ಮದ್, ಬ್ಯಾಂಕ್ ವ್ಯವಸ್ಥಾಪಕ ಪ್ರದೀಪ್, ಗೋಪಿನಾಥ ಸೇರಿದಂತೆ ಸಂಜೀವಿನಿ ಒಕ್ಕೂಟದ ಅಧಿಕಾರೊ, ಜ್ಯೋತಿ, ಆರ್ಥಿಕ ಸಾಕ್ಷತೆ ಸಲಹೆಗಾರ ರಾಜು ಕೆಂಬಾವಿ, ಬಸವರಾಜ ಜಲ್ಲಾಪುರ, ಆರ್‌ಬಿಐ ಅಧಿಕಾರಿ ಪ್ರಸನ್, ಶ್ರೀಕುಮಾರ ಸೇರಿದಂತೆ ವಿವಿಧ ಬ್ಯಾಂಕುಗಳ ಅಧಿಕಾರಿಗಳು, ಗ್ರಾಪಂ ಸದಸ್ಯರು ಇದ್ದರು.
;Resize=(128,128))
;Resize=(128,128))
;Resize=(128,128))