ಸಾರಾಂಶ
ಕಾನೂನು ಸೇವೆಗಳ ಪ್ರಾಧಿಕಾರದಿಂದ ಲೋಕ ಅದಾಲತ್‌ಕನ್ನಡಪ್ರಭ ವಾರ್ತೆ ಹೊಳೇನರಸೀಪುರ
ವಾಹನ ಅಪಘಾತಗಳಲ್ಲಿ ಸಾವು ಸಂಭವಿಸಿದ ಸಂದರ್ಭದಲ್ಲಿ ಪ್ರಕರಣಗಳು ಬೇಗ ಇತ್ಯರ್ಥಗೊಂಡು ವಿಮಾ ಕಂಪೆನಿ ಕೂಡ ಆದಷ್ಟು ಬೇಗ ಪರಿಹಾರ ದೊರೆಯುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅಮರ್ ವಿ.ಎಲ್. ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಅನ್ವಯ ಶನಿವಾರ ಜರುಗಿದ ಲೋಕ ಅದಾಲತ್ ನಂತರ ಮಾಹಿತಿ ನೀಡಿದರು. ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳು ಇತ್ಯರ್ಥ ಪಡಿಸುವಲ್ಲಿ ವಕೀಲರ ಸಹಕಾರ ಪ್ರಮುಖವಾಗಿದ್ದು, ಅವರ ಸಹಕಾರವನ್ನು ಅಭಿನಂದಿಸುತ್ತೇವೆ ಎಂದರು.
ಜಿ.ಸೋಮನಹಳ್ಳಿ ಗ್ರಾಮದ ಮಂಜೇಗೌಡ ಹಾಗೂ ಭಾಗ್ಯಮ್ಮ ಮಾತನಾಡಿ, ‘ದ್ವಿಚಕ್ರ ವಾಹನದ ಅಪಘಾತದಲ್ಲಿ ತಮ್ಮ ಮಗ ಚಂದ್ರೇಗೌಡ ಮೃತಪಟ್ಟಿದ್ದು, ಘಟನೆ ಸಂಬಂಧ ನ್ಯಾಯಾಲಯದಲ್ಲಿ ಉಲಿವಾಲ ಸತೀಶ್ ನಮ್ಮ ವಕಾಲತ್ತು ವಹಿಸಿದ್ದರು. ಇದರ ಸಂಬಂಧ ನ್ಯಾಯಾಧೀಶರು, ವಕೀಲರು ವಿಮಾ ಕಂಪನಿಯ ವಕೀಲ ಚಿದಾನಂದ ಯು.ಎಂ. ಅವರ ಜತೆಗೆ ಮಾತನಾಡಿ ಪರಿಹಾರ ಹಣ ಕೊಡಿಸಿದ್ದಾರೆ. ನ್ಯಾಯಾಧೀಶರು ಹಾಗೂ ವಕೀಲರೆಲ್ಲರಿಗೂ ನಮಸ್ಕರಿಸುತ್ತೇವೆ’ ಎಂದು ಹೇಳಿದರು.ಹಿರಿಯ ಸವಿಲ್ ನ್ಯಾಯಾಧೀಶ ವಿ.ಎಲ್. ಅಮರ್, ಸಿವಿಲ್ ನ್ಯಾಯಾಧೀಶ ಪ್ರವೀಣ್ ಆರ್‌ಜೆಎಸ್ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಿದ್ದರಾಮ ಅವರ ಉಪಸ್ಥಿತಿಯಲ್ಲಿ ಜರುಗಿದ ಲೋಕ ಅದಾಲತ್‌ನಲ್ಲಿ ತೆಗೆದುಕೊಂಡ ೧೨೪೯ ಪ್ರಕರಣಗಳಲ್ಲಿ ೯೮೯ ವಿಲೇವಾರಿ ಮಾಡಲಾಗಿದೆ. ಜತೆಗೆ ೨೮,೫೮,೯೪೫ ರು. ಪರಿಹಾರ ನೀಡಿದ ಮೊತ್ತವಾಗಿದೆ.
ಕ್ರಿಮಿನಲ್ ಸಂಯುಕ್ತ ಅಪರಾಧಗಳಲ್ಲಿ ೧೫ರಲ್ಲಿ ೬ ಇತ್ಯರ್ಥ, ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ ಸೆಕ್ಷನ್ ೧೩೮ ರ ಅಡಿಯ ೫೬ರಲ್ಲಿ ೬ ಇತ್ಯರ್ಥ ಜತೆಗೆ ೧೩,೭೩,೦೦೦ ರು. ಸೆಟೆಲ್‌ಮೆಂಟ್ ಮೊತ್ತ, ಹಣ ವಸೂಲಾತಿ ಸೂಟ್‌ಗಳಲ್ಲಿ ೧೦ರಲ್ಲಿ ೪ ಇತ್ಯರ್ಥ, ೮,೬೪,೭೨೫ ರು. ಸೆಟೆಲ್‌ಮೆಂಟ್ ಮೊತ್ತ, ಮೋಟಾರು ಅಪಘಾತಗಳ ಹಕ್ಕುಗಳ ನ್ಯಾಯ ಮಂಡಳಿಗಳು ಪ್ರಕರಣದ ೨೩ರಲ್ಲಿ ೮ ಇತ್ಯರ್ಥ, ವಿಭಜನೆ ಸೂಟ್ಸ್‌ನ ೨೬ರಲ್ಲಿ ೪ ಇತ್ಯರ್ಥ, ನಿರ್ದಿಷ್ಟ ಕಾರ್ಯಕ್ಷಮತೆ ಸೂಟ್ಸ್‌ನ ೬ರಲ್ಲಿ ೧ ಇತ್ಯರ್ಥ, ಎಲ್‌ಎಸಿ ಎಕ್ಸಿಕ್ಯೂಷನ್ ಪ್ರಕರಣದ ೧೧ರಲ್ಲಿ ೪ ಇತ್ಯರ್ಥ, ಎಂವಿಸಿ ಎಕ್ಸಿಕ್ಯೂಷನ್ ಪ್ರಕರಣದ ೨ರಲ್ಲಿ ೧ ಇತ್ಯರ್ಥ ಜತೆಗೆ ೪೭೦೨೬೧ ರು. ಸೆಟೆಲ್‌ಮೆಂಟ್ ಮೊತ್ತ, ಇತರೆ ಎಕ್ಸಿಕ್ಯೂಷನ್ ಪ್ರಕರಣದ ೧೨೧ರಲ್ಲಿ ೭೬ ಇತ್ಯರ್ಥ, ಇತರೆ ಸಿವಿಲ್ ದಾವೆಗಳ ೩೫ರಲ್ಲಿ ೪ ಇತ್ಯರ್ಥ ಜತೆಗೆ ೫೯,೯೦೯ ರು. ಸೆಟೆಲ್‌ಮೆಂಟ್ ಮೊತ್ತ, ಹೆಂಡತಿ, ಮಕ್ಕಳು ಮತ್ತು ಪೋಷಕರ ನಿರ್ವಹಣೆಗಾಗಿ ಪ್ರಕರಣದ ೧೦ರಲ್ಲಿ ೧ ಇತ್ಯರ್ಥ, ಸಣ್ಣ ಪುಟ್ಟ ಪ್ರಕರಣಗಳ ೯೩೦ರಲ್ಲಿ ೮೭೩ ಇತ್ಯರ್ಥ ಜತೆಗೆ ೮೯೦೫೦ ರು. ಸೆಟೆಲ್‌ಮೆಂಟ್ ಮೊತ್ತ ಹಾಗೂ ಇತರೆ ಕ್ರಿಮಿನಲ್ ಪ್ರಕರಣದ ೩ರಲ್ಲಿ ೧ ಇತ್ಯರ್ಥ ಜತೆಗೆ ೨೦೦೦ ರು. ಸೆಟೆಲ್‌ಮೆಂಟ್ ಮೊತ್ತವಾಗಿರುತ್ತದೆ.ಸರ್ಕಾರಿ ಅಭಿಯೋಜಕರಾದ ಸುನೀಲ್‌ರಾಜ್, ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ವಕೀಲರಾದ ರವೀಶ್ ಆರ್.ಡಿ., ಪುರುಷೋತಮ್ ಬಿ.ಆರ್., ರಾಮಪ್ರಸನ್ನ, ಉದಯರಂಜನ್, ಅರುಣ್ ಕುಮಾರ್, ಶಿವಮೂರ್ತಿ, ಸವಿತಾ, ಸತೀಶ್, ಜಯಪ್ರಕಾಶ್, ಕೆ.ಆರ್. ಸುನಿಲ್ ಕುಮಾರ್, ಶಶಿಕುಮಾರ್ ಎಚ್.ಕೆ., ಸುನೀಲ್ ಎಚ್.ಎನ್., ನವೀನ್, ಶೇಖರಪ್ಪ ಕೆ.ಎಸ್., ಆನಂದೇಶ್ವರ, ಚಂದ್ರಶೇಖರ್ ಕೆ.ಜೆ., ಶಿವಣ್ಣ ಆರ್., ಶಿವಣ್ಣ ಎಚ್., ಸುರೇಶ್ ಐ.ಎಲ್., ಕೆ.ಕೆ.ಶೈಲಜಾ, ಕೃಷ್ಣಮೂರ್ತಿ, ಕೃಷ್ಣೇಗೌಡ, ಸತೀಶ್, ಆಶಾ, ಲಾವಣ್ಯ, ಸವಿತಾ ಇದ್ದರು.ಹೊಳೆನರಸೀಪುರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಎಲ್.ಅಮರ್ ಅವರ ಉಪಸ್ಥಿತಿಯಲ್ಲಿ ಲೋಕ ಅದಾಲತ್ ಜರುಗಿತು.