ಸಾರಾಂಶ
ಕೇಂದ್ರ ಸರ್ಕಾರ ಘೋಷಿಸಿದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಸಾಮಾಜಿಕ ಭದ್ರತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಅದರಂತೆ ಜೀವನ್ ಜ್ಯೋತಿ ಹಾಗೂ ಅಟಲ್ ಪಿಂಚಣಿ ಯೋಜನೆಗಳೂ ಜೀವನಕ್ಕೆ ಆಸರೆಯಾಗಿವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕೇಂದ್ರ ಸರ್ಕಾರ ಘೋಷಿಸಿದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಸಾಮಾಜಿಕ ಭದ್ರತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಅದರಂತೆ ಜೀವನ್ ಜ್ಯೋತಿ ಹಾಗೂ ಅಟಲ್ ಪಿಂಚಣಿ ಯೋಜನೆಗಳೂ ಜೀವನಕ್ಕೆ ಆಸರೆಯಾಗಿವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.ಅಪಘಾತದಲ್ಲಿ ಮರಣ ಹೊಂದಿದ ಕುಟುಂಬಕ್ಕೆ ತಾಲೂಕಿನ ಜಗದಾಳ ಗ್ರಾಮದ ಪಿಕೆಪಿಎಸ್ ಸೊಸೈಟಿಯಲ್ಲಿ ₹೨ ಲಕ್ಷಗಳ ಸಹಾಯ ಚೆಕ್ ವಿತರಿಸಿ ಮಾತನಾಡಿದ ಅವರು, ಸಹಕಾರಿ ಸಂಘಗಳಲ್ಲಿ ಶೇರುದಾರರರಾಗಿರುವ ಸದಸ್ಯರು ಅಪಘಾತದ ಸಾವು ಮತ್ತು ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ₹೨ ಲಕ್ಷ ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ₹೧ ಲಕ್ಷಗಳ ಪರಿಹಾರವಿದೆ ಎಂದರು.
ಒಂದು ಅಥವಾ ಬೇರೆ ಬ್ಯಾಂಕ್‌ಗಳಲ್ಲಿ ಬಹು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ನಂತರ ನೀವು ಒಂದು ಬ್ಯಾಂಕ್ ಖಾತೆಯ ಮೂಲಕ ಮಾತ್ರ ಯೋಜನೆಗೆ ಸೇರಲು ಅರ್ಹರಾಗಿದ್ದು, ವರ್ಷಕ್ಕೆ ₹೧೨ ಕಂತು ಇದಾಗಿದ್ದು, ನಿರ್ಲಕ್ಷ್ಯ ವಹಿಸದೆ ಈ ಯೋಜನೆಯನ್ನು ಎಲ್ಲರೂ ಪ್ರಯೋಜನ ಪಡೆಯಬೇಕೆಂದರು.ಈ ವೇಳೆ ಸೊಸೈಟಿ ಅಧ್ಯಕ್ಷ ಸುಭಾಸ ಉಳ್ಳಾಗಡ್ಡಿ, ಬಿ.ಆರ್.ದಡ್ಡಿಮನಿ, ಬಿ.ಎಂ.ಹೊಸೂರ, ಬಿ.ಎಂ. ನೀಲಕಂಠ, ಎಸ್.ಎಂ.ಬಿರಾದಾರ ಪಾಟೀಲ, ಜಿ.ಜಿ.ಉಳ್ಳಾಗಡ್ಡಿ, ಆಯ್.ಡಿ.ಮರೆಗುದ್ದಿ, ಕಾಶವ್ವ ಬಂಗಿ, ವೆಂಕವ್ವ ಚಿಂಚಲಿ, ಪರಶುರಾಮ ಬಸವ್ವಗೋಳ, ಭೀಮಪ್ಪ ವಾಲಿಕಾರ, ಶಿವಾಜಿ ಸೊರಗಾಂವಿ ಸೇರಿದಂತೆ ಅನೇಕರಿದ್ದರು.