ಸಾರಾಂಶ
ಆಲೆಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ 15 ಲಕ್ಷ ರು.ಗಳಿಗೂ ಹೆಚ್ಚು ಸಾಮಗ್ರಿಗಳು ಸುಟ್ಟು ಕರಕಲಾಗಿರುವ ಘಟನೆ ಸೋಮವಾರಪೇಟೆ ಬಳಿ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ.
ಚಾಮರಾಜನಗರ: ಆಲೆಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ 15 ಲಕ್ಷ ರು.ಗಳಿಗೂ ಹೆಚ್ಚು ಸಾಮಗ್ರಿಗಳು ಸುಟ್ಟು ಕರಕಲಾಗಿರುವ ಘಟನೆ ಸೋಮವಾರಪೇಟೆ ಬಳಿ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ.
ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಕೊಡುಗೆ ಜಮೀನು ಇದನ್ನು ವಿ. ಧರ್ಮೇಂದ್ರ ಎಂಬುವವರು ಆಲೆ ಮನೆ ನಡೆಸುತ್ತಿದ್ದರು, ಮಂಗಳವಾರ ಬೆಲ್ಲ ತಯಾರಿಸುವ ವೇಳೆ ಆಕಸ್ಮಿಕ ಬೆಂಕಿಯಿಂದ ಆಲೆಮನೆ ಒಳಗಡೆ ಇದ್ದ 10,000 ಬೆಲ್ಲ, ಎರಡು ಮೋಟಾರ್, ಎರಡು ಗಾಣ, ಹಾಗೂ 6 ಲಕ್ಷ ರು ಮೌಲ್ಯದ ಸಂಪೂರ್ಣ ಸೆಡ್ಡು ಸೇರಿದಂತೆ ಒಟ್ಟು 15 ಲಕ್ಷ ರು.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಆಲೆಮನೆ ಮಾಲೀಕ ಈ ಧರ್ಮೇಂದ್ರ ತಿಳಿಸಿದ್ದಾರೆ.ಕೂಡಲೇ ಅಗ್ನಿಶಾಮಕ ಠಾಣಾಧಿಕಾರಿ ಮಂಜಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಆಲೆಮನೆಯಿಂದ ಜೀವನ ನಡೆಸುತ್ತಿದ್ದ ತಮಗೆ ಬೆಂಕಿ ಅವಘಡದಿಂದ ಲಕ್ಷಾಂತರ ರು ನಷ್ಟ ಉಂಟಾಗಿದ್ದು, ಮುಂದೆ ಜೀವನ ನಿರ್ವಹಿಸುವುದು ಹೇಗೆ ಎಂಬುದು ಚಿಂತೆಯಾಗಿದೆ, ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಕಲ್ಪಿಸಿ ಕೊಡಬೇಕೆಂದು ಧರ್ಮೇಂದ್ರ ಮನವಿ ಮಾಡಿದ್ದಾರೆ