ತೆಂಗು, ಅಡಿಕೆ ಮರಕ್ಕೆ ಆಕಸ್ಮಿಕ ಬೆಂಕಿ: 3 ಲಕ್ಷ ರು. ನಷ್ಟ

| Published : Apr 09 2024, 12:51 AM IST

ಸಾರಾಂಶ

ತಾಲೂಕಿನ ಪರಶುರಾಮಪುರ ಹೋಬಳಿ ಸಿದ್ದೇಶ್ವರದುರ್ಗ ಗ್ರಾಮದಲ್ಲಿ ಶಕುಂತಲಮ್ಮ ಎಂಬುವರಿಗೆ ಸೇರಿದ ೨೧ ಎಕರೆ ಪ್ರದೇಶದಲ್ಲಿ ಹಾಕಿದ್ದ ೪೦೦ ಅಡಿಕೆ, ೩೦ ತೆಂಗು ಹಾಗೂ ಇನ್ನಿತರ ಗಿಡಮರಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿವೆ.

ಚಳ್ಳಕೆರೆ: ತಾಲೂಕಿನ ಪರಶುರಾಮಪುರ ಹೋಬಳಿ ಸಿದ್ದೇಶ್ವರದುರ್ಗ ಗ್ರಾಮದಲ್ಲಿ ಶಕುಂತಲಮ್ಮ ಎಂಬುವರಿಗೆ ಸೇರಿದ ೨೧ ಎಕರೆ ಪ್ರದೇಶದಲ್ಲಿ ಹಾಕಿದ್ದ ೪೦೦ ಅಡಿಕೆ, ೩೦ ತೆಂಗು ಹಾಗೂ ಇನ್ನಿತರ ಗಿಡಮರಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು, ಸುಮಾರು ಮೂರು ಲಕ್ಷ ರು. ನಷ್ಟ ಅಂದಾಜಿಸಲಾಗಿದೆ. ಸೋಮವಾರ ಮಧ್ಯಾಹ್ನ ಸುಮಾರು ೨ರ ಸಮಯದಲ್ಲಿ ಈ ಅವಘಡ ನಡೆದಿದ್ದು, ಬೆಂಕಿ ಬಿದ್ದ ಕೂಡಲೇ ಸುತ್ತಮುತ್ತಲ ರೈತರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಸಾಕಷ್ಟು ಶ್ರಮಿಸಿದರೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಪಡೆಯವರು ಆಗಮಿಸಿ ಬೆಂಕಿಯನ್ನು ನಂದಿಸಿದರು. ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.