ಸಾರಾಂಶ
ಚನ್ನಪಟ್ಟಣ: ಮಕ್ಕಳ ಆಟಿಕೆ ತಯಾರಿಕಾ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರು. ಮೌಲ್ಯದ ಆಟಿಕೆಗಳು ಹಾಗೂ ಕಚ್ಚಾ ಸಾಮಗ್ರಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ಕುಡಿನೀರು ಕಟ್ಟೆಯ ಬಳಿ ನಡೆದಿದೆ.
ಚನ್ನಪಟ್ಟಣ: ಮಕ್ಕಳ ಆಟಿಕೆ ತಯಾರಿಕಾ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರು. ಮೌಲ್ಯದ ಆಟಿಕೆಗಳು ಹಾಗೂ ಕಚ್ಚಾ ಸಾಮಗ್ರಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ಕುಡಿನೀರು ಕಟ್ಟೆಯ ಬಳಿ ನಡೆದಿದೆ.
ಚನ್ನಪಟ್ಟಣದ ನಾಗೇಂದ್ರಗೆ ಸೇರಿದ ಇನ್ ಎಲ್ಲೋ ಎಂಬ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ. ಭಾನುವಾರ ಮಧ್ಯಾನ್ಹ 1 ಗಂಟೆಯಲ್ಲಿ ಕುಡಿನೀರು ಕಟ್ಟೆ ಬಳಿ ಇರುವ ಇನ್ ಎಲ್ಲೋ ಕಾರ್ಖಾನೆಯಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ಕಾರ್ಖಾನೆಯ ಬಾಗಿಲು ಒಡೆದು ಒಳಗೆ ಸಿಲುಕಿದ್ದ ಓರ್ವ ಕಾರ್ಮಿಕನನ್ನು ರಕ್ಷಿಸಿದ್ದಾರೆ. ಇದೇ ವೇಳೆ ಕಾರ್ಖಾನೆ ಒಳಗಿದ್ದ ನಾಲ್ಕು ಸಿಲಿಂಡರ್‌ಗಳನ್ನು ಹೊರಗೆ ತಂದಿದ್ದಾರೆ. ಇದರಿಂದ ಹೆಚ್ಚಿನ ಅವಘಡ ತಪ್ಪಿದೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜೆಸಿಬಿ ಸಹಕಾರದಿಂದ ಕಾರ್ಖಾನೆಯ ಹಿಂಬದಿ ಗೋಡೆ ಒಡೆದು ಬೆಂಕಿ ನಂದಿಸಿದ್ದಾರೆ. ಭಾನುವಾರವಾದ ಕಾರಣ ಕಾರ್ಖಾನೆಗೆ ರಜೆ ಇದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ.