ಕಾನೂನು ವಿಶ್ವವಿದ್ಯಾಲಯಕ್ಕೆ ಮಾನ್ಯತಾ ಪರಿಷತ್‌ ಭೇಟಿ

| Published : Nov 15 2024, 12:31 AM IST

ಸಾರಾಂಶ

ಕುಲಪತಿಗಳು ವಿಶ್ವವಿದ್ಯಾಲಯದ ಆರಂಭದಿಂದ ಇಲ್ಲಿಯ ವರೆಗೆ ನಡೆಸಿರುವ ಕಾರ್ಯಕ್ರಮ, ಆಡಳಿತ, ಮತ್ತು ದೂರದೃಷ್ಟಿಗಳನ್ನು ವಿಸ್ತಾರವಾಗಿ ತಂಡದ ಮುಂದೆ ತೆರೆದಿಟ್ಟರು.

ಧಾರವಾಡ:

ವಿಶ್ವವಿದ್ಯಾಲಯದ ಅನುದಾನ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ತು ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಕೇರಳಾದ ಕೇಂದ್ರೀಯ ವಿವಿ ಪ್ರೊ. ಕೆ.ಸಿ. ಸನ್ನಿ ಅಧ್ಯಕ್ಷತೆಯಲ್ಲಿ, ಡಾ. ಅಂಬೇಡ್ಕರ್‌ ಕಾನೂನು ವಿವಿ ಪ್ರೊ. ಡಿ. ಗೋಪಾಲ ದಂಡು, ಓರಿಸ್ಸಾ ಸಂಬಾಲಪೂರ ವಿವಿ ಪ್ರೊ. ಸುದಾಂಶು ರಂಜನ್ ಮಹೋಪಾತ್ರ, ಬಿಹಾರದ ಚಾಣಕ್ಯ ಕಾನೂನು ವಿವಿ ಪ್ರೊ. ಅಜಯ ಕುಮಾರ, ಬಿಹಾರ್ ಹಾಗೂ ತಮಿಳುನಾಡು ಕಾನೂನು ವಿವಿ ಪ್ರೊ. ಯೆಬಿನಿಜರ್ ಜೋಸೆಫ್ ಎಂಬ ಐದು ಸದಸ್ಯರನ್ನೊಳಗೊಂಡ ನ್ಯಾಕ್ ಪೀರ್ ತಂಡವು ವಿವಿಗೆ ಮೂರು ದಿನಗಳ ಕಾಲ ಭೇಟಿ ನೀಡಿ ಕಾರ್ಯಚಟುವಟಿಕೆಗಳನ್ನು ಗಮನಿಸಿತು.

ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ. ಸಿ. ಬಸವರಾಜು, ಕುಲಸಚಿವರಾದ ಅನುರಾಧ ವಸ್ತ್ರದ, ಕುಲಸಚಿವರು (ಮೌಲ್ಯಮಾಪನ) ಪ್ರೊ. ರತ್ನಾ ಭರಮಗೌಡರ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳು ಮತ್ತು ಆಡಳಿತ ಕುರಿತು ಸಂವಹನ ನಡೆಸಿದರು.

ಕುಲಪತಿಗಳು ವಿಶ್ವವಿದ್ಯಾಲಯದ ಆರಂಭದಿಂದ ಇಲ್ಲಿಯ ವರೆಗೆ ನಡೆಸಿರುವ ಕಾರ್ಯಕ್ರಮ, ಆಡಳಿತ, ಮತ್ತು ದೂರದೃಷ್ಟಿಗಳನ್ನು ವಿಸ್ತಾರವಾಗಿ ತಂಡದ ಮುಂದೆ ತೆರೆದಿಟ್ಟರು. ನಂತರ ತಂಡವು ವಿಶ್ವವಿದ್ಯಾಲಯದ ಕಾನೂನು ಶಾಲೆ, ಆಡಳಿತ ಕಚೇರಿ, ಹಣಕಾಸು ವಿಭಾಗ, ವಿದ್ಯಾಮಂಡಳ ವಿಭಾಗ, ಕಾಲೇಜು ಅಭಿವೃದ್ಧಿ ಮಂಡಳಿ, ವಿಶ್ವವಿದ್ಯಾಲಯದ ಗ್ರಂಥಾಲಯ, ಪ.ಪಂ ಮತ್ತು ಪ.ಜಾ ಘಟಕ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗ, ಮಾಹಿತಿ ಹಕ್ಕು ವಿಭಾಗ, ಕಾನೂನು ಕೋಶ, ಆಂತರಿಕ ಗುಣಮಟ್ಟ ಭರವಸೆ ಘಟಕ, ಎನ್ನೆಸ್ಸೆಸ್‌, ರೆಡ್‌ಕ್ರಾಸ್, ಕ್ರೀಡಾ ವಿಭಾಗ, ದಾಸ್ತಾನು ವಿಭಾಗ ಹಾಗೂ ಸ್ಥಾನಿಕ ಅಭಿಯಂತರರ ವಿಭಾಗ ಮತ್ತು ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟು ಸಂವಹನ ನಡೆಸಿತು.