ಕಾಮಗಾರಿಗಳಿಗೆ ಹಣ ಪಡೆದ ಆರೋಪ: ಇಂದು ಶಾಸಕ ಹರೀಶ್‌ ಪೂಂಜ ಪ್ರಮಾಣ

| Published : Aug 14 2024, 12:48 AM IST

ಕಾಮಗಾರಿಗಳಿಗೆ ಹಣ ಪಡೆದ ಆರೋಪ: ಇಂದು ಶಾಸಕ ಹರೀಶ್‌ ಪೂಂಜ ಪ್ರಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ಮತ್ತು ನನ್ನ ಕುಟುಂಬದವರ ಇಡಿ, ಐಟಿ, ಲೋಕಾಯುಕ್ತ ತನಿಖೆಯಾಗಲಿ ಅದಕ್ಕೆ ಸಿದ್ಧ ಹಾಗೆಯೇ ರಕ್ಷಿತ್ ಶಿವರಾಮ್ ಹಾಗು ಕುಟುಂಬದವರ ಮೇಲೂ ಈ ತನಿಖೆಗಳು ಆಗಬೇಕು ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಇಲ್ಲಿನ ಪ್ರವಾಸಿ ಮಂದಿರದ ಕಾಮಗಾರಿಯಲ್ಲಿ, ರೆಖ್ಯ ದೇವಸ್ಥಾನದ ತಡೆಗೋಡೆ ನಿರ್ಮಾಣದಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಹಣವನ್ನು ಪಡೆದಿಲ್ಲ ಹಾಗೂ ಬಿಮಲ್ ಸಂಸ್ಥೆಯಲ್ಲಿ ತನ್ನ ಪಾತ್ರ ಇಲ್ಲ ಎಂಬ ವಿಚಾರಗಳ ಬಗ್ಗೆ ಆ.14ರಂದು ಬುಧವಾರ ಬೆಳಗ್ಗೆ 9 ಗಂಟೆಗೆ ಬೆಳ್ತಂಗಡಿಯ ಮಾರಿಗುಡಿಯಲ್ಲಿ ಪ್ರಮಾಣ ಮಾಡುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಮಂಗಳವಾರ ಉಜಿರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್‌ನವರು ತನ್ನ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ತಾಲೂಕಿನ ಅಭಿವೃದ್ಧಿಯ ನಿಟ್ಟಿನಲ್ಲಿ ಮಾಡಲಾದ ಕೆಲಸಗಳ ಕುರಿತು ಅವರು ಮಾಡಿರುವುದು ಹುರುಳಿಲ್ಲದ ಆಪಾದನೆಗಳು, ಬೆಳ್ತಂಗಡಿ ಬಸ್ ನಿಲ್ದಾಣ ಕಾಮಗಾರಿಗೆ ಬಿಜೆಪಿ ಸರ್ಕಾರ ಇರುವಾಗಲೇ ಅನುದಾನ ಬಿಡುಗಡೆಗೊಳಿಸುವ ಕುರಿತು ತೀರ್ಮಾನವಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಮೊದಲು ತಮ್ಮ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ನನ್ನ ಮತ್ತು ನನ್ನ ಕುಟುಂಬದವರ ಇಡಿ, ಐಟಿ, ಲೋಕಾಯುಕ್ತ ತನಿಖೆಯಾಗಲಿ ಅದಕ್ಕೆ ಸಿದ್ಧ ಹಾಗೆಯೇ ರಕ್ಷಿತ್ ಶಿವರಾಮ್ ಹಾಗು ಕುಟುಂಬದವರ ಮೇಲೂ ಈ ತನಿಖೆಗಳು ಆಗಬೇಕು. ಚುನಾವಣೆಗೋಸ್ಕರ ಬೆಳ್ತಂಗಡಿಯಲ್ಲಿ ಆರಂಭವಾದ ಬೆಸ್ಟ್ ಫೌಂಡೇಶನ್ ಈಗ ಮೂಲೆಗುಂಪಾಗಿದೆ ತಾಲೂಕಿನಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲೂ ಕಾಂಗ್ರೆಸ್ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿದರು.ಬಿಜೆಪಿ ಮಂಡಲ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸರಾವ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪಾರೆಂಕಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಯನಂದ ಗೌಡ ಇದ್ದರು.