ಮಾವನನ್ನು ಕೊಲೆಮಾಡಿದ್ದ ಆರೋಪಿ ಬಂಧನ

| Published : Mar 20 2025, 01:16 AM IST

ಸಾರಾಂಶ

ಕಡೂರುಕೋಟ್ಯಾಂತರ ರು. ಬೆಲೆ ಬಾಳುವ ಆಸ್ತಿ ವಿಚಾರದಲ್ಲಿ ತನ್ನ ತಾಯಿಗೆ ಮಾವ ಬೈದಿದ್ದನ್ನು ಸಹಿಸದೆ ಡ್ರಿಪ್ ಪೈಪ್‌ನಿಂದ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಅಳಿಯನನ್ನುತಾಲೂಕಿನ ಪಂಚನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಕಡೂರು

ಕೋಟ್ಯಾಂತರ ರು. ಬೆಲೆ ಬಾಳುವ ಆಸ್ತಿ ವಿಚಾರದಲ್ಲಿ ತನ್ನ ತಾಯಿಗೆ ಮಾವ ಬೈದಿದ್ದನ್ನು ಸಹಿಸದೆ ಡ್ರಿಪ್ ಪೈಪ್‌ನಿಂದ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಅಳಿಯನನ್ನುತಾಲೂಕಿನ ಪಂಚನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸಂಜಯ್(22) ಬಂಧಿತ ಆರೋಪಿ. ಪಂಚನಹಳ್ಳಿ ಗ್ರಾಮದ ಮೃತ ಸಿದ್ದರಾಮೇಗೌಡ ಮತ್ತು ಸಹೋದರಿ ನಿರ್ಮಲಾ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆದಿದ್ದು. ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನಲೆಯಲ್ಲಿ ಮಾವನನ್ನೇ ಸಾಯಿಸಲು ಸಂಚು ರೂಪಿಸಿಕೊಂಡಿದ್ದ ಸಹೋದರಿ ನಿರ್ಮಲಾ ಮಗ ಸಂಜಯ್ ಮಾ.14 ರಂದು ಪಂಚನಹಳ್ಳಿ ಗ್ರಾಮದ ಬಸ್‍ ನಿಲ್ದಾಣದ ಬಳಿ ಸಿಕ್ಕ ಮಾವ ಸಿದ್ದರಾಮೇಗೌಡನನ್ನು ತನ್ನ ಬೈಕ್‍ನಲ್ಲಿ ಊರೆಲ್ಲಾ ಸುತ್ತಾಡಿಸಿಕೊಂಡು ಬಳಿಕ ತೋಟದಲ್ಲಿ ಮದ್ಯ ಸೇವಿಸಿದ್ದಾನೆ. ನಡುವೆ ಆಸ್ತಿ ವಿಚಾರದಲ್ಲಿ ಕ್ಯಾತೆ ತೆಗೆದು ಸಂಜಯ್ ಹಾಗು ಮಾವನ ನಡುವೆ ಮಾತಿನ ಚಕಮಕಿ ನಡೆದು ತೋಟದಲ್ಲಿ ಇದ್ದ ಡ್ರಿಪ್ ಪೈಪ್‌ ( ಹನಿ ನೀರಾವರಿಗೆ ಬಳಸುವ ಸಣ್ಣ ಪೈಪ್‌)ಯಿಂದ ಹತ್ಯೆ ಮಾಡಿ ಪರಾರಿಯಾಗಿದ್ದನು ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಡೂರು ಸಿಪಿಐ ರಫೀಕ್ ನೇತೃತ್ವದ ತಂಡ ಆರೋಪಿ ಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಪಂಚನಹಳ್ಳಿ ಠಾಣೆ ಪಿಎಸೈ ಶಾಹಿದ್ ಅಪ್ರೀದಿ ಮತ್ತು ಸಿಬ್ಬಂದಿ ಇದ್ದರು.19ಕೆಕೆಡಿಯು3. ಆರೋಪಿ ಸಂಜಯ್..