ಸ್ಥಳ ಪರಿಶೀಲನೆ ವೇಳೆ ಚಿರತೆಯ 10 ಉಗುರುಗಳನ್ನು ಕಿತ್ತು ಮನೆಯಲ್ಲಿ ಸಂಗ್ರಹಿಸಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಬನವಾಸಿ ವಲಯ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿರಸಿ: ಚಿರತೆ ಉಗುರುಗಳನ್ನು ಸಂಗ್ರಹಿಸಿಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಕಲ್ಲಿ ಗ್ರಾಮದ ನಿವಾಸಿ ಲಕ್ಷ್ಮಣ ಶೇಷಪ್ಪ ನಾಯ್ಕ(36) ಬಂಧಿತ ಆರೋಪಿ. ಈತ ತಮ್ಮ ಮನೆಯಲ್ಲಿ ಅನಧಿಕೃತವಾಗಿ ಚಿರತೆಯ ಉಗುರುಗಳನ್ನು ಸಂಗ್ರಹಿಸಿಟ್ಟ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬನವಾಸಿ ವಲಯ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಸ್ಥಳ ಪರಿಶೀಲನೆ ವೇಳೆ ಚಿರತೆಯ 10 ಉಗುರುಗಳನ್ನು ಕಿತ್ತು ಮನೆಯಲ್ಲಿ ಸಂಗ್ರಹಿಸಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಬನವಾಸಿ ವಲಯ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾರ್ಯಾಚರಣೆಯನ್ನು ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. ಮತ್ತು ಎಸಿಎಫ್ ಅಮಿತ ಚವ್ಹಾಣ ಇವರ ಮಾರ್ಗದರ್ಶನದಲ್ಲಿ ಬನವಾಸಿ ವಲಯ ಅರಣ್ಯಾಧಿಕಾರಿ ಕಾರ್ತೀಕ ಕಂಬಳಿ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಪ್ರೇಮಕುಮಾರ, ಸಂತೋಷ ಕಕ್ಕಳಮೇಲಿ, ರವಿ ಜಾಡರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಪ್ರತಾಪಸಿಂಗ್ ರಜಪೂತ ಇಂಟಕ್ ಅಧ್ಯಕ್ಷ ಆಯ್ಕೆ

ದಾಂಡೇಲಿ: ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಇಂಟಕ್ ವಿಭಾಗದ ಅಧ್ಯಕ್ಷರಾಗಿ ನಗರದ ಪ್ರತಾಪಸಿಂಗ್ ರಜಪೂತ ಅವರು ಆಯ್ಕೆಗೊಂಡಿದ್ದಾರೆ.ಉ.ಕ. ಜಿಲ್ಲಾಧ್ಯಕ್ಷ ಜಿ.ಟಿ. ನಾಯ್ಕ ಸೂಚನೆ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಅವರು ಅನುಮೋದನೆಯಂತೆ ಈ ಆಯ್ಕೆ ನಡೆದಿದ್ದು, ತಕ್ಷಣದಿಂದ ಅಧಿಕಾರವನ್ನು ವಹಿಸಿಕೊಂಡು ದಾಂಡೇಲಿ ತಾಲೂಕು ಇಂಟಕ್ ವಿಭಾಗದ ಪರವಾಗಿ ಸಂಘವನ್ನು ರಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಿಕೊಂಡು ಪಕ್ಷದ ಮುಖಂಡರ ಮಾರ್ಗರ್ದನ ಮತ್ತು ಸ್ಥಳೀಯ ನಾಯಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.