ತೀರ್ಥಹಳ್ಳಿ : ಯುಪಿಡಿ ಕಾಯಿನ್ ಕ್ರಿಪ್ಟೋ ಕರೆನ್ಸಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹಲವು ಪಟ್ಟು ಲಾಭ ದೊರೆಯುತ್ತದೆ ಎಂದು ಆಮೀಷವೊಡ್ಡಿ, ನಂಬಿಸಿ ಹಲವರಿಂದ ಕೋಟ್ಯಾಂತರ ರೂ. ಸಂಗ್ರಹಿಸಿ ವಂಚನೆ ಮಾಡಿದ ಆರೋಪದ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಾಧ್ಯಾಪಕ ಸೇರಿದಂತೆ ಅವರ ಕುಟುಂಬದ ವಿರುದ್ಧ ದೂರು ದಾಖಲಾಗಿದೆ.

ತೀರ್ಥಹಳ್ಳಿಯ ಸಹಾದ್ರಿ ಪಾಲಿಟೆಕ್ನಿಕ್‌ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರ್, ಅವರ ಪತ್ನಿ ಕುಸುಮ, ಪುತ್ರ ಜೀವನ್ ಹಾಗೂ ಪುತ್ರಿ ಸಮೃದ್ಧಿ ಹಾಗೂ ಶ್ವೇತಾ ಎಂಬುವರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಸರ್ಕಾರಿ ನೌಕರರು, ಶಿಕ್ಷಕರು, ರೈತರು, ಅಡಿಕೆ ಬೆಳೆಗಾರರು, ಕೃಷಿ ಕಾರ್ಮಿಕರು, ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುವವರಿಂದ ಹಣ ವಸೂಲಿ ಮಾಡಿರುವ ಆರೋಪದ ಜೊತೆಗೆ ಪಟ್ಟಣದ ಎಷ್ಟೋ ಸಣ್ಣ ವ್ಯಾಪಾರಿಗಳು ಸೇರಿದಂತೆ ವಿವಿಧ ವರ್ಗದ ಜನರಿಗೆ ಮೋಸ ಮಾಡಲಾಗಿದೆ ಎಂದು ದೂರು ನೀಡಲಾಗಿದೆ..

ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಕೆಲವೇ ತಿಂಗಳಲ್ಲಿ ಹಲವು ಪಟ್ಟು ಲಾಭವಾಗುತ್ತದೆ ಎಂದು ಹೇಳಿ ತಮ್ಮ ಮನೆಗೆ ಕೆರೆಯಿಸಿಕೊಂಡು ಯೂ ಬಿಟ್, ಬಿಟ್ ಕಾಯಿನ್ ಎಂಬ ಕಂಪನಿ ಇದ್ದು ಅದರಲ್ಲಿ ಹಣ ತೊಡಗಿಸಿದಲ್ಲಿ ನಿಮ್ಮ ಹಣ ಗ್ಯಾರಂಟಿ

ರಿಟರ್ನ್ ಇದ್ದು ಮತ್ತು ಹೆಚ್ಚಿನ ಲಾಭ ಸಿಗುತ್ತದೆ ಎಂದೆಲ್ಲಾ ತಿಳಿಸಿದ್ದು ನಾನು ಈ ಬಗ್ಗೆ ಕಂಪನಿಯ ವಿವರ ಕೇಳಿದಾಗ ಅವರ ಮೊಬೈಲ್ನಲ್ಲಿ ತಮಗೆ ಕಂಪನಿಯಿಂದ ಬಂದಂತಹ ಲಾಭದ ಹಣವನ್ನು ತೋರಿಸಿ ನಂಬಿಸಿದ್ದು ಹೀಗೆ ಕಂಪನಿಯ ಯಾವುದೇ ವಿವರ ನೀಡದೇ 11,00,000 ರೂಗಳನ್ನು ಕಂಪನಿಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ಹಣವನ್ನು ಪಡೆದು ಯಾವುದೇ ಲಾಭದ ಹಣವಾಗಲೀ ನನ್ನ ಹೂಡಿಕೆಯ ಹಣವಾಗಲೀ ನೀಡಿರುವುದಿಲ್ಲ.

ಉಳಿದಂತೆ ಬೆಟ್ಟಮಕ್ಕಿ ನಿವಾಸಿ ಒಬ್ಬರಿಂದ 8,00,000 ರು. ಹುಂಚದಕಟ್ಟೆ ವಾಸಿಯೊಬ್ಬರಿಂದ


ರವರಿಂದ 5,00,000 ರು. , ಹುಂಚದಕಟ್ಟೆ ನಿವಾಸಿ ಮತ್ತೊಬ್ಬರಿಂದ 5,00,000 ರು., ನೊಣಬೂರು ಚಂದವಳ್ಳಿ

ನಿವಾಸಿಯೊಬ್ಬರಿಂದ 18,00,000 ರು., ಬೆಟ್ಟಮಕ್ಕಿ ನಿವಾಸಿಯೊಬ್ಬರಿಂದ 3,00,000 ರು. ಹೀಗೇ ಒಟ್ಟು ನಮ್ಮೆಲ್ಲರಿಂದ 48,00,000 ರು.ಗಳನ್ನು ಪಡೆದಿದ್ದಾರೆ. ಹೀಗೆ ಸುಳ್ಳು ಕಂಪನಿಯ ಕಥೆ ಹೇಳಿ ಹಾಗೂ ಇತರರಿಂದ ಹಣ ವಸೂಲಿ ಮಾಡಿ ವಂಚನೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕುಮಾರ್ ಮನೆಯಲ್ಲಿ ಆತನ ಹೆಂಡತಿ ಕುಸುಮಾ ಮಗ ಜೀವನ್, ಮಗಳು ಸಮೃದ್ಧಿ ಹಾಗೂ ಇವರ ಸಂಬಂಧಿ ಎಂದು ಹೇಳಿಕೊಂಡಿರುವ ಶ್ವೇತ ಎಲ್ಲರೂ ಸೇರಿ ಹಣ ತೆಗೆದುಕೊಂಡಿರುತ್ತಾರೆ. ಕೊಟ್ಟ ಹಣ ಕೇಳಲು ಹೋದರೆ ಇನ್ನು ಈ ಕಡೆ ಬರಬೇಡ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಕುಮಾರ್ ಸೇರಿ ಉಳಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಲಾಗಿದೆ.

ದೂರು ದಾಖಲಾದ ಬಳಿಕ ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು ಪ್ರಕರಣದ ಸಂಬಂಧ ತೀರ್ಥಹಳ್ಳಿ ಪೊಲೀಸರಿಂದ ತನಿಖೆ ಆರಂಭಗೊಂಡಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.