ಸಾರಾಂಶ
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 3ನೇ ಘಟಿಕೋತ್ಸವ ಸಮಾರಂಭ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಈ ಸ್ಪರ್ಧಾತ್ಮಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರದಲ್ಲೂ ವಿಫುಲ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪ ಡಿಸಿಕೊಂಡು ಸಾಧನೆ ಮಾಡಿ ಸಮಾಜಕ್ಕೆ, ದೇಶಕ್ಕೆ, ತಂದೆ ತಾಯಿಗಳಿಗೆ, ಸಂಸ್ಥೆಗೆ ಒಳ್ಳೆಯ ಹೆಸರನ್ನು ತನ್ನಿ ಎಂದು ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಎಸ್. ಸಚ್ಚಿದಾನಂದ ಹೇಳಿದರು.ನಗರದ ಯಡಪುರದ ಬಳಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) 3ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಎಂಬಿಬಿಎಸ್ ಅಂದಾಕ್ಷಣ ಕೇವಲ ವೈದ್ಯರಾಗುವುದಕ್ಕೆ ಸೀಮಿತವಾಗಿಲ್ಲ. ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲೂ ಅಪಾರ ಅವಕಾಶಗಳಿವೆ, ವೈದ್ಯರಾಗಬಹುದು, ಕ್ಲಿನಿಕ್ ತೆರೆಯಬಹುದು, ಪ್ರೊಫೆಸರ್ ಆಗಬಹುದು, ಐಎಂಐನಲ್ಲಿ ಕೆಲಸ ಮಾಡಬಹದು, ಸಂಶೋಧನೆ ಮಾಡಬಹದು, ನಿಮ್ಮ ಇಷ್ಟ ವಿಭಾಗದಲ್ಲಿ ತಜ್ಞರಾಗಬಹದು, ವಿದೇಶಗಳಲ್ಲಿ ಅಪಾರ ಬೇಡಿಕೆ ಇದ್ದು ಅಲ್ಲಿಗೂ ಹೋಗಬಹದು, ವೈದ್ಥಕೀಯ ವರದಿಗಾರರಾಗಿಯು ಕರ್ತವ್ಯ ನಿರ್ವಹಿಸಿಸುವುದು ಸೇರಿದಂತೆ ಸುಮಾರು ೨೦ ಅವಕಾಶಗಳಿವೆ ಎಂದರು. ಪದವಿ ಸ್ವೀಕಾರ ಇದು ನಿಮ್ಮ ಜೀವನದ ಪ್ರಮುಖ ಘಟ್ಟ. ಇಂತಹ ಸಂದರ್ಭ ನಿಮ್ಮ ಜೀವನದಲ್ಲಿ ಒಂದು ಬಾರಿ ಬರುವುದು, ಇಲ್ಲಿಂದ ನಿಮ್ಮ ಜೀವನ ವಿವಿಧ ಘಟ್ಟಗಳು ಬದಲಾಗುತ್ತವೆ. ಜನರ ಸೇವೆ ಮಾಡುವ ಅವಕಾಶ ನಿಮಗೆ ಸಿಕ್ಕಿದೆ. ಹಣವೇ ಮುಖ್ಯವಲ್ಲ ದೇಶದ, ಸಮಾಜದ ಆರೋಗ್ಯ ಕಾಪಾಡಿ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆಯಿರಿ ಎಂದರು.ಉದಯೋನ್ಮುಖ ವೈದ್ಯರಾಗಿ ಹೊರಹೊಮ್ಮಿರುವ ನೀವು ರೋಗಿಗಳನ್ನು ಪ್ರೀತಿಯಿಂದ ಕಾಣಿರಿ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಚಿಂತಿಸಿ, ನಿರ್ಧಾರ ತೆಗೆದುಕೊಳ್ಳಿ, ನೀವು ಮುಂದುವರಿದಂತೆ ನಿಮ್ಮ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ನಿಮ್ಮ ತಂದೆ ತಾಯಿಗಳು, ಪ್ರಾಥಮಿಕ ಹಂತದ ಶಿಕ್ಷಕರು, ಪೋಷಕರು, ಸಂಸ್ಥೆಯನ್ನು ಮರೆಯಬೇಡಿ, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿ ಎಂದರು.ಚಾಮರಾಜನಗರ ಮೆಡಿಕಲ್ ಕಾಲೇಜು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ, ಹಿಂದೆ ಮೆಡಿಕಲ್ ಮಾಡಬೇಕೆಂದರೆ ಅಷ್ಟು ಸುಲಭವಾಗಿರಲಿಲ್ಲ, ಇಂದು ಸರ್ಕಾರ ನೀಟ್ ಮೂಲಕ ಆಯ್ಕೆಯಾದ ಪ್ರತಿಭಾವಂತರಿಗೆ ಕಾಲೇಜುಗಳಲ್ಲಿ ಎಲ್ಲಾ ಸೌಕರ್ಯಗಳನ್ನು ನೀಡಿದೆ ಎಂದರು. ಜನರ ಆರೋಗ್ಯ ಅತಿ ಮುಖ್ಯ, ವೈದ್ಯ ವೃತ್ತಿಯು ಅಷ್ಟೇ ಮುಖ್ಯ, ಜನರು ವೈದ್ಯರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅದನ್ನು ಹುಸಿಗೊಳಿಸಬೇಡಿ ಎಂದರು.ವೈದ್ಯರು ದೇವರಿಗೆ ಸಮ: ಗೌರವಾನ್ವಿತ ಅತಿಥಿಯಾಗಿದ್ದ ಭಾರತ ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಶ್ರೀನಿವಾಸ ಪ್ರಸಾದ್ ಮಾತನಾಡಿ, ಜನರು ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಅದಕ್ಕೆ ಗೌರವ ನೀಡಿ ಮುಂದೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಯಶಸ್ಸುಗಳಿಸಿ ಎಂದು ಶುಭ ಹಾರೈಸಿದರು.ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಎಸ್ ಮಾತನಾಡಿ, ನಿಮ್ಮ ವೃತ್ತಿ ಜೀವನದಲ್ಲಿ ನೈತಿಕತೆ, ಮಾನವೀಯ ಗುಣಗಳನ್ನು ಬೆಳೆಸಿಕೊಂಡರೆ ಉತ್ತಮ ವ್ಯಕ್ತಿಗಳಾಗಬಹದು ಎಂದರು. ಸಾಧಕರು ನಿಮಗೆ ಪ್ರೇರಣೆಯಾಗಬೇಕು, ಹಲವು ಮಾದರಿ ವೈದ್ಯಕೀಯ ಕಾಲೇಜುಗಳಿದ್ದು, ಆ ಸಾಲಿನಲ್ಲಿ ಚಾಮರಾಜನಗರ ವೈದ್ಯಕೀಯ ಸೇರಲಿ ನಿಮ್ಮ ವೈದ್ಯಕೀಯ ಜೀವನದ ಪ್ರಮುಖ ಘಟ್ಟಕ್ಕೆ ಕಾಲಿಡುತ್ತಿದ್ದೀರಿ, ಮುಂದಿನ ನಿಮ್ಮ ಜೀವನದಲ್ಲಿ ಯಶಸ್ಸು ಕಂಡು, ಊರಿಗೆ, ತಂದೆ ತಾಯಿಗಳಿಗೆ, ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯ ಹೆಸರನ್ನು ತನ್ನಿ ಎಂದು ಶುಭ ಹಾರೈಸಿದರು.ವಿವಿಧ ರಾಜ್ಯಗಳಿಂದ, ವಿವಿಧ ಸಂಸ್ಕೃತಿಯ ನೀವು ಒಂದಾಗಿ ಕಾಡಂಚಿನಲ್ಲಿರುವ ಈ ಗಡಿ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕಲಿತ್ತಿದ್ದೀರಿ ನಿಮಗಾಗಿ ಎಂಬ ಭಾವನೆಯಿಂದ ಕರ್ತವ್ಯದಲ್ಲಿ ನಿರತರಾಗಿ ಎಂದರು. ಸಿಮ್ಸ್‌ನ ಡೀನ್ ಮತ್ತು ನಿರ್ದೇಶಕ ಡೀನ್ ಡಾ. ಹೆಚ್. ಜಿ. ಮಂಜುನಾಥ್. ಸ್ವಾಗತಿಸಿ ಪ್ರಾಸ್ತಾವಿಸಿದರು. ೨೦೧೮-೧೯ ನೇ ಶೈಕ್ಷಣಿಕ ಸಾಲಿನ ವೈದ್ಯಕೀಯ ಕೋರ್ಸ್ ವಿದ್ಯಾಭ್ಯಾಸದ ಸುಮಾರು ೧೨೮ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಈ ಸಾಲಿನ ಟಾಪರ್‌ಗಳಾಗಿ ಕೆ.ಆರ್. ನಗರದ ಡಾ. ಶಶಾಂಕ್ ಪ್ರಥಮ, ಪಾಂಡವಪುರದ ಅಕ್ಕ ತಂಗಿಯರಾದ ಡಾ.ಸಂದ್ಯಾ, ಡಾ.ಸ್ಪಪ್ನಾ ದ್ವೀತೀಯ ಮತ್ತು ತೃತೀಯ, 4ನೇ ಟಾಪರ್ ಆಗಿ ಉಡುಪಿ ಡಾ. ಸುಷ್ಮಿತಾ ಹೊರಹೊಮ್ಮಿದ್ದಾರೆ. ಪ್ರಾಂಶುಪಾಲ ಡಾ. ಗಿರೀಶ್ ವಿ ಪಾಟೀಲ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಎಂ. ಮಹೇಶ್, ಸಿಮ್ಸ್‌ನ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಪ್ರಾಧ್ಯಾಪಕ ವೃಂದ, ಸಿಮ್ಸ್ ಟೀಚರ್ ಅಸೋಸಿಯೇಶನ್ ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಬೋಧಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.