ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಜುಡೋ ಪಂದ್ಯಾವಳಿಯಲ್ಲಿ ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಪದಕಗಳನ್ನು ವಿತರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆಯಲ್ಲಿ ರಾಜ್ಯಮಟ್ಟದ ಜುಡೋ ಪಂದ್ಯಾವಳಿ ಆಯೋಜಿಸಿರುವುದು ಸಂತಸ ತಂದಿದೆ. ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿಯೂ ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು. ತಮ್ಮ ಗುರಿ ಮುಟ್ಟಲು ಸತತ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಜುಡೋ ಪಂದ್ಯಾವಳಿಯಲ್ಲಿ ವಿಜೇತ ಕ್ರೀಡಾಪಟುಗಳಿಗೆ ಪದಕ ವಿತರಣೆ ಮಾಡಿ ಮಾತನಾಡಿದ ಅವರು, ಕ್ರೀಡೆಗಳು ಮಕ್ಕಳಲ್ಲಿ ಶಿಸ್ತು, ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ಹೋರಾಟದ ಮನೋಭಾವ ಬೆಳೆಸುತ್ತದೆ. ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಸಾಮರ್ಥ್ಯ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಕ್ರೀಡಾಕೂಟಗಳು ಯುವ ಕ್ರೀಡಾಪಟುಗಳಿಗೆ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗುತ್ತದೆ ಎಂದು ಹೇಳಿದರು.

ಪಂದ್ಯಾವಳಿಯಲ್ಲಿ ಸಾಧನೆ ಮಾಡಿದ ಬಾಲಕ ಹಾಗೂ ಬಾಲಕಿಯರಿಗೆ ಪದಕಗಳನ್ನು ವಿತರಿಸುವ ಮೂಲಕ ಸಚಿವರು ಕ್ರೀಡಾಪಟುಗಳನ್ನು ಅಭಿನಂಧಿಸಿದರು. ಬಾಗಲಕೋಟೆ ಪಟ್ಟಣ ಅಬಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಸಿ. ಸೀತಾರಾಮು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿ ಇತರರು ಉಪಸ್ಥಿತರಿದ್ದರು.

14 ವರ್ಷದೊಳಗಿನ ಜುಡೋ ಪಂದ್ಯಾವಳಿ ವಿಜೇತರು:

ಬಾಲಕರ ವಿಭಾಗ: 25 ಕೆಜಿ ಜುಡೋ ಪಂದ್ಯಾವಳಿಯಲ್ಲಿ ಸಾಹಿಲ್ ನಾಯ್ಕ ಬೆಳಗಾವಿ (ಪ್ರಥಮ), ಮನೋಜ ಬಾಗಲಕೋಟೆ (ದ್ವಿತೀಯ), ಸಮರ್ಥ ಚಿಕ್ಕೋಡಿ ಮತ್ತು ಸಾಯಿದೀಪ ಬೆಂಗಳೂರು ಗ್ರಾಮೀಣ (ತೃತೀಯ), 30 ಕೆಜಿಯಲ್ಲಿ ಪಾರ್ಥ ಎಸ್. ಬೆಳಗಾವಿ (ಪ್ರಥಮ), ಚಿರಂಥ ಚಿಕ್ಕಮಗಳೂರು (ದ್ವಿತೀಯ), ವಿನೋದ ಬೆಂಗಳೂರು ದಕ್ಷಿಣ ಮತ್ತು ಗಣೇಶ ಚಿಕ್ಕೋಡಿ (ತೃತೀಯ), 35 ಕೆಜಿಯಲ್ಲಿ ವಿಜಯಕುಮಾರ ಬೆಳಗಾವಿ (ಪ್ರಥಮ), ಆದರ್ಶ ಎ. ಚಿಕ್ಕೋಡಿ (ದ್ವಿತೀಯ), ರಮೇಶ ಬಾಗಲಕೋಟೆ ಮತ್ತು ರೋಥಿ ಮಾಯಿಕ್ ಬೆಂಗಳೂರು ಉತ್ತರ (ತೃತೀಯ), 40 ಕೆಜಿಯಲ್ಲಿ ಶ್ರುಜನಕುಮಾರ ಬೆಂಗಳೂರ (ಪ್ರಥಮ), ಅಭಿಷೇಕ ಬಿ. ಬೆಳಗಾವಿ (ದ್ವಿತೀಯ), ಜೀವನ ಡಾವಣಗೇರೆ ಮತ್ತು ಸಂಗಮೇಶ ಚಿಕ್ಕಮಗಳೂರು (ತೃತೀಯ), 45 ಕೆಜಿಯಲ್ಲಿ ವಾಬ್ರೀತ್ ಕೆ.ಆರ್ ಶಿವಮೊಗ್ಗ (ಪ್ರಥಮ), ವಿಜಯ ಬಾಗಲಕೋಟೆ (ದ್ವೀತೀಯ), ಡಿ. ಭೀಮರಾಜ ಚಿಕ್ಕಮಗಳೂರು ಮತ್ತು ಋುತಿಕ್ ಬೆಳಗಾವಿ (ತೃತೀಯ), 50 ಕೆಜಿಯಲ್ಲಿ ಮನಿಕಂಠ ಬೆಂಗಳೂರು ಉತ್ತರ (ಪ್ರಥಮ), ಮೊಹಮ್ಮದ ಬೆಂಗಳೂರು ದಕ್ಷಿಣ (ದ್ವಿತೀಯ), ಲಕ್ಷ್ಮಣ ಚಿಕ್ಕೋಡಿ ಮತ್ತು ತರುಣ ಶಿವಮೊಗ್ಗ (ತೃತೀಯ).

ಬಾಲಕಿಯರ ವಿಭಾಗ :

23 ಕೆಜಿಯಲ್ಲಿ ಭಾಗ್ಯಶ್ರೀ ಬೆಂಗಳೂರು ಉತ್ತರ (ಪ್ರಥಮ), ಲಿಕಿತಾ ಶಿವಮೊಗ್ಗ (ದ್ವಿತೀಯ), ಬಿಬಿ ಆಯಿರಾ ಧಾರವಾಡ ಮತ್ತು ಶಾರಧಾ ಬಾಗಲಕೋಟೆ (ತೃತೀಯ), 27 ಕೆಜಿಯಲ್ಲಿ ಶ್ರೇಯಾ ಬೆಳಗಾವಿ (ಪ್ರಥಮ), ಕೀರ್ತನಾ ಮಂಡ್ಯ (ದ್ವಿತೀಯ), ಸಾನಿಕಾ ದೊಡಮನಿ ಬಾಗಲಕೋಟೆ (ತೃತೀಯ), 32 ಕೆಜಿಯಲ್ಲಿ ಗಾಯಿತ್ರಿ ಬೆಳಗಾವಿ (ಪ್ರಥಮ), ಭವಾನಿ ಚಿಕ್ಕಮಂಗಳೂರು (ದ್ವೀತೀಯ), ಭಾಗ್ಯಲಕ್ಷ್ಮೀ ಶಿವಮೊಗ್ಗ ಮತ್ತು ಶ್ರಾವಣಿ ಚಿಕ್ಕೋಡಿ (ತೃತೀಯ), 36 ಕೆಜಿಯಲ್ಲಿ ಕಾವೇರಿ ಬೆಳಗಾವಿ (ಪ್ರಥಮ), ಸ್ವರೂಪ ಚಿಕ್ಕೋಡಿ (ದ್ವಿತೀಯ) ಆರತಿ ಮಂಡ್ಯ ಮತ್ತು ಅನುಷು ಬೆಂಗಳೂರು ದಕ್ಷಿಣ (ತೃತೀಯ), 40 ಕೆಜಿಯಲ್ಲಿ ಅಮೃತ ಚಿಕ್ಕಮಂಗಳೂರು (ಪ್ರಥಮ), ಶ್ವರಣಿ ಬೆಳಗಾವಿ (ದ್ವಿತೀಯ), ಸೃಷ್ಟಿ ಚಿಕ್ಕೋಡಿ ಮತ್ತು ತೇಜು ಶಿವಮೊಗ್ಗ (ತೃತೀಯ), 44 ಕೆಜಿಯಲ್ಲಿ ವೈಷ್ಣವಿ ಚಿಕ್ಕಮಂಗಳೂರು (ಪ್ರಥಮ), ಸಾಕ್ಷಿ ಚಿಕ್ಕೋಡಿ (ದ್ವಿತೀಯ), ಅಂಚಲ ಬೆಂಗಳೂರು ದಕ್ಷಿಣ ಮತ್ತು ರಾಧಾ ಚವ್ಹಾಣ ಬೆಂಗಳೂರು ಉತ್ತರ (ತೃತೀಯ),