ಸಾಲ ವಸೂಲಾತಿಯಲ್ಲಿ ಸಾಧನೆ: ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರು, ಸದಸ್ಯರಿಗೆ ಅಭಿನಂದನೆ

| Published : Dec 26 2024, 01:04 AM IST

ಸಾಲ ವಸೂಲಾತಿಯಲ್ಲಿ ಸಾಧನೆ: ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರು, ಸದಸ್ಯರಿಗೆ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಆರ್ಥಿಕ ವರ್ಷದಲ್ಲಿ ಸರ್ಕಾರ ಪ್ರಕಟಿಸಿದ ಬಡ್ಡಿಮನ್ನಾ ಸೌಲಭ್ಯದಿಂದಾಗಿ ಪಿ ಕಾರ್ಡ್ ಬ್ಯಾಂಕ್‌ 6.43 ಲಕ್ಷ ರು. ಸಾಲ ವಸೂಲಾತಿ ಮಾಡುವ ಮೂಲಕ ಶೇಕಡಾ 74.27 ಗುರಿ ಸಾಧನೆ ಮಾಡಿದೆ. ನಮ್ಮ ಆಡಳಿತ ಮಂಡಳಿ ಅವಧಿಯಲ್ಲಿ ಬ್ಯಾಂಕ್‌ ಆರ್ಥಿಕವಾಗಿ ಪ್ರಗತಿ ಸಾಧಿಸಲು ಶಾಸಕ ಕೆ.ಎಂ.ಉದಯ್ ಸಹಕಾರ ಶ್ಲಾಘನೀಯ. ಸಾಲಗಾರರಿಂದ ಬ್ಯಾಂಕ್‌ಗೆ ಬರಬೇಕಿದ್ದ 7.58 ಲಕ್ಷ ಬಡ್ಡಿಯನ್ನು ವೈಯಕ್ತಿಕವಾಗಿ ಪಾವತಿ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪಿ ಕಾರ್ಡ್ ಬ್ಯಾಂಕ್‌ನ ಸಾಲ ವಸೂಲಾತಿಯಲ್ಲಿ ಗಣನೀಯ ಸಾಧನೆ ಮಾಡಿ ಆರ್ಥಿಕ ಅಭಿವೃದ್ಧಿಗೆ ಕಾರಣರಾದ ನಿರ್ಗಮಿತ ಬ್ಯಾಂಕ್‌ನ ಅಧ್ಯಕ್ಷ ಮತ್ತು ಸದಸ್ಯರನ್ನು ಅಭಿನಂದಿಸಲಾಯಿತು.

ಪಟ್ಟಣದ ಬ್ಯಾಂಕ್‌ನ ಕುವೆಂಪು ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ 2020 ರಿಂದ ಐದು ವರ್ಷಗಳ ಕಾಲ ಅತ್ಯುತ್ತಮವಾಗಿ ಆಡಳಿತ ನಡೆಸಿ ಬ್ಯಾಂಕ್‌ನ ಆರ್ಥಿಕ ಪ್ರಗತಿಗೆ ಕಾರಣರಾದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಬ್ಯಾಂಕ್‌ನ ನಿಕಟ ಪೂರ್ವ ಅಧ್ಯಕ್ಷ ಕೆ.ಬಿ.ಸಿದ್ದೇಗೌಡ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ಸರ್ಕಾರ ಪ್ರಕಟಿಸಿದ ಬಡ್ಡಿಮನ್ನಾ ಸೌಲಭ್ಯದಿಂದಾಗಿ ಪಿ ಕಾರ್ಡ್ ಬ್ಯಾಂಕ್‌ 6.43 ಲಕ್ಷ ರು. ಸಾಲ ವಸೂಲಾತಿ ಮಾಡುವ ಮೂಲಕ ಶೇಕಡಾ 74.27 ಗುರಿ ಸಾಧನೆ ಮಾಡಿದೆ ಎಂದರು.

ನಮ್ಮ ಆಡಳಿತ ಮಂಡಳಿ ಅವಧಿಯಲ್ಲಿ ಬ್ಯಾಂಕ್‌ ಆರ್ಥಿಕವಾಗಿ ಪ್ರಗತಿ ಸಾಧಿಸಲು ಶಾಸಕ ಕೆ.ಎಂ.ಉದಯ್ ಸಹಕಾರ ಶ್ಲಾಘನೀಯ. ಸಾಲಗಾರರಿಂದ ಬ್ಯಾಂಕ್‌ಗೆ ಬರಬೇಕಿದ್ದ 7.58 ಲಕ್ಷ ಬಡ್ಡಿಯನ್ನು ವೈಯಕ್ತಿಕವಾಗಿ ಪಾವತಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ 17.34 ಸಹಾಯ ಧನ ಮಂಜೂರು ಮಾಡಿದ್ದರಿಂದ ಬ್ಯಾಂಕ್‌ ಆರ್ಥಿಕವಾಗಿ ಪ್ರಗತಿ ಹೊಂದಲು ಕಾರಣವಾಯಿತು ಎಂದು ಸ್ಮರಿಸಿದರು. ಈ ವೇಳೆ ಬ್ಯಾಂಕ್‌ನ ನಿಕಟ ಪೂರ್ವ ಆಡಳಿತ ಮಂಡಳಿ ಉಪಾಧ್ಯಕ್ಷ ಕೃಷ್ಣಪ್ಪ, ಮಾಜಿ ಉಪಾಧ್ಯಕ್ಷ ಎಂ.ಎಸ್‌.ಸಿದ್ದ ಮರಿ, ಮಾಜಿ ಅಧ್ಯಕ್ಷರಾದ ನ.ಲಿ.ಕೃಷ್ಣ, ಮುತ್ತುರಾಜು, ಸಿ.ಎನ್.ಕೆಂಪೇಗೌಡ, ನಿರ್ದೇಶಕರಾದ ಸಿದ್ದರಾಮ, ಈರೇಗೌಡ, ಎಂ.ಸವಿತಾ ಬೋರೇಗೌಡ, ಕೆ.ಎಂ.ಕೃಷ್ಣೇಗೌಡ, ಬಿ.ಎಸ್.ಮಧು, ಗೌರಮ್ಮ, ಟಿ.ಎಂ.ರಾಜಶೇಖರ, ಮಹದೇವಯ್ಯ, ಸಣ್ಣ ಮರಿ ನಾಯಕ ಅವರುಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕಿ ಎಂ.ಸಿ.ಭಾಗ್ಯ ಹಾಗೂ ಸಿಬ್ಬಂದಿ ಇದ್ದರು.