ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ

| Published : Dec 10 2024, 12:34 AM IST

ಸಾರಾಂಶ

ಯಲ್ಲಾಪುರ ತಾಲೂಕಿನಿಂದ ಪಟ್ಟಣದ ವೈಟಿಎಸ್‌ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೇಜಲ್ ಸತೀಶ ನಾಯ್ಕ, ಕರ್ನಾಟಕ ರಾಜ್ಯ ಸೀನಿಯರ್ ಮಹಿಳಾ ಡರ್ಬಿ ತಂಡವನ್ನು ಪ್ರತಿನಿಧಿಸಿ ರಜತ ಪದಕ ಪಡೆಯುವ ಮೂಲಕ ತಾಲೂಕಿನ ಗೌರವ ಹೆಚ್ಚಿಸಿದ್ದಾರೆ.

ಯಲ್ಲಾಪುರ: ಬೆಂಗಳೂರಿನಲ್ಲಿ ಡಿ. 5ರಿಂದ ಪ್ರಾರಂಭವಾದ 62ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಮೂವರು ಕ್ರೀಡಾಪಟುಗಳು ಸೀನಿಯರ್ ಡರ್ಬಿ ವಿಭಾಗದಲ್ಲಿ ರಜತ ಪದಕ ಪಡೆದಿದ್ದಾರೆ.

ವಿಶೇಷವಾಗಿ ಯಲ್ಲಾಪುರ ತಾಲೂಕಿನಿಂದ ಪ್ರತಿನಿಧಿಸಿದ ಪಟ್ಟಣದ ವೈಟಿಎಸ್‌ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೇಜಲ್ ಸತೀಶ ನಾಯ್ಕ, ಕರ್ನಾಟಕ ರಾಜ್ಯ ಸೀನಿಯರ್ ಮಹಿಳಾ ಡರ್ಬಿ ತಂಡವನ್ನು ಪ್ರತಿನಿಧಿಸಿ ರಜತ ಪದಕ ಪಡೆಯುವ ಮೂಲಕ ತಾಲೂಕಿನ ಗೌರವ ಹೆಚ್ಚಿಸಿದ್ದಾರೆ.

ಸೇಜಲ್ ಸತೀಶ್ ನಾಯ್ಕ ಪಪಂ ಸದಸ್ಯ ಸತೀಶ್ ನಾಯ್ಕ ಪುತ್ರಿಯಾಗಿದ್ದು, ಆಗಸ್ಟ್‌ನಲ್ಲಿ ತಮಿಳನಾಡಿನ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಇಂಡಿಯಾ ಸ್ಕೇಟ್ 2024 ಚಾಂಪಿಯನಶಿಪ್‌ನಲ್ಲಿ ರಜತ ಪದಕ ಬೇಟೆಯಾಡಿದ್ದರು. ಇವರೊಂದಿಗೆ ಶಿರಸಿಯ ಎಂಇಎಸ್ ಕಾಲೇಜಿನ ಅನಘಾ ರಮೇಶ ಹೆಗಡೆ, ದಾಂಡೇಲಿಯ ಸಾನಿಕಾ ಉಮೇಶ ತೊರತ್ ತಂಡದಲ್ಲಿದ್ದು ಪದಕಕ್ಕೆ ಭಾಜನರಾಗಿದ್ದಾರೆ.

ಕರ್ನಾಟಕ, ತಮಿಳನಾಡು, ಉತ್ತರಪ್ರದೇಶ, ಒಡಿಶಾ, ತಮಿಳನಾಡು, ಪಂಜಾಬ್, ಮಹಾರಾಷ್ಟ ಇನ್ನಿತರ ರಾಜ್ಯದ ತಂಡಗಳು ಪಂದ್ಯಾವಳಿಯಲ್ಲಿ ಬಾಗವಹಿಸಿದ್ದರು.

ಈ ಮೂವರು ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ತರಬೇತಿಯನ್ನು ಪಡೆಯುತ್ತಿದ್ದು, ಸತತ ನಾಲ್ಕನೆ ಬಾರಿ ಕರ್ನಾಟಕ ತಂಡಕ್ಕಾಗಿ ಆಡುತ್ತಿದ್ದಾರೆ ಎಂದು ತರಬೇತುದಾರ ದಿಲೀಪ್ ಹಣಬರ್ ಹಾಗೂ ಸಹಾಯಕ ತರಬೇತುದಾರರಾದ ಮಂಜಪ್ಪ ನಾಯ್ಕ ತಿಳಿಸಿದ್ದಾರೆ.

ಸೇಜಲ್ ಸತೀಶ್ ನಾಯ್ಕ ಸಾಧನೆಗೆ ಶಾಸಕ ಶಿವರಾಮ ಹೆಬ್ಬಾರ್, ವಿಜಯ ಮಿರಾಶಿ, ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಶಾನಭಾಗ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ, ದೈಹಿಕ ಶಿಕ್ಷಕರಾದ ಗಂಗಾ ನಾಯ್ಕ, ಜಿ.ಎನ್. ತಾಂಡುರಾಯನ್ ಪ್ರಶಂಸಿಸಿದ್ದಾರೆ.ಪಾಕಿಂಗ್ ಸ್ಥಳದಲ್ಲಿದ್ದ ಗೂಡಂಗಡಿಗಳ ತೆರವು

ಶಿರಸಿ: ನಗರ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಮೀಸಲಿಟ್ಟ ಜಾಗದಲ್ಲಿ ಗೂಡಂಗಡಿ ಹಾಕಿ ವ್ಯಾಪಾರ ನಡೆಸುತ್ತಿರುವವರ ಮೇಲೆ ನಗರಸಭೆಯ ಅಧಿಕಾರಿಗಳು ಕಾರ್ಯಾರಣೆ ನಡೆಸಿ, ಎಚ್ಚರಿಕೆ ನೀಡಿದ್ದಾರೆ.ನಗರದ ಕೋಟೆಕೆರೆ, ದೇವಿಕೆರೆ, ಶಿವಾಜಿ ಚೌಕ್, ಯಲ್ಲಾಪುರ ರಸ್ತೆ ಸೇರಿದಂತೆ ಮತ್ತಿತರರ ಕಡೆ ಗೂಡಂಗಡಿಕಾರರು ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ವ್ಯಾಪಾರ ನಡೆಸುತ್ತಿರುವುದರಿಂದ ತೀವ್ರ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರಿಂದ ದೂರು ಬಂದಿತ್ತು. ಗೂಡಂಗಡಿಕಾರರಿಗೆ ನಗರಸಭೆಯಿಂದ ಮೂರು ಬಾರಿ ನೋಟಿಸ್ ಜಾರಿ ಮಾಡಿ, ಎಚ್ಚರಿಕೆಯನ್ನು ನೀಡಲಾಗಿತ್ತು.

ಆದರೂ ಅಂಗಡಿ ಹಾಕುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಸಭೆಯಲ್ಲಿ ಅಧ್ಯಕ್ಷರು, ಚೇರ್‌ಮನ್ ಹಾಗೂ ಸರ್ವ ಸದಸ್ಯರ ಗಮನಕ್ಕೆ ತಂದಿದ್ದರು. ಆಡಳಿತ ಮಂಡಳಿ ಸೂಚನೆಯಂತೆ ವಾಹನ ನಿಲುಗಡೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವ ಸ್ಥಳದಲ್ಲಿ ತರಕಾರಿ, ಹೂವು ಅಂಗಡಿಗಳನ್ನು ತೆರವುಗೊಳಿಸಿ, ಇನ್ನು ಮುಂದೆ ಈ ಸ್ಥಳಗಳಲ್ಲಿ ಅಂಗಡಿ ಹಾಕದಂತೆ ಕಂದಾಯ ನಿರೀಕ್ಷಕ ಆರ್.ಎಂ. ವೆರ್ಣೇಕರ ನೇತೃತ್ವದಲ್ಲಿ ಅಧಿಕಾರಿಗಳು ಖಡಕ್ ಆದೇಶ ನೀಡಿದರು.