ಸಾಧಿಸುವ ಛಲವಿದ್ದರೆ ಸಾಧನೆ ಸುಲಭ

| Published : May 15 2025, 01:51 AM IST

ಸಾರಾಂಶ

ಹೊಳೆಹೊನ್ನೂರು: ಮನದಲ್ಲಿ ಸಾಧಿಸುವ ಛಲವಿದ್ದರೆ ಸಾಧನೆ ಸುಲಭವಾಗುತ್ತದೆ ಎಂದು ಶಿವಮೊಗ್ಗ ಬಸವ ಕೆಂದ್ರದ ಡಾ.ಬಸವ ಮರಳಸಿದ್ದ ಸ್ವಾಮೀಜಿ ಹೇಳಿದರು.

ಹೊಳೆಹೊನ್ನೂರು: ಮನದಲ್ಲಿ ಸಾಧಿಸುವ ಛಲವಿದ್ದರೆ ಸಾಧನೆ ಸುಲಭವಾಗುತ್ತದೆ ಎಂದು ಶಿವಮೊಗ್ಗ ಬಸವ ಕೆಂದ್ರದ ಡಾ.ಬಸವ ಮರಳಸಿದ್ದ ಸ್ವಾಮೀಜಿ ಹೇಳಿದರು.

ಸಮೀಪದ ಯಡೇಹಳ್ಳಿಯ ಕರಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಜಯಂತಿ ಆಚರಣೆ ಸಮಿತಿ ಹಾಗೂ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಆಚರಣೆಗಳು ಅದ್ಧೂರಿಗಿಂತ ಅರ್ಥ ಪೂರ್ಣವಾಗಿರಬೇಕು. ಮಕ್ಕಳಿಗೆ ಬಸವಾದಿ ಶಿವ ಶರಣರ ಪರಿಚಯವಾಗಬೇಕು. ಆಚರಣೆಗಳ ಪೂರ್ವ ತಯಾರಿಗಳು ದೊಡ್ಡ ಪರಿಣಾಮ ಬೀರುತ್ತವೆ. ಅರ್ಥಪೂರ್ಣ ಆಚರಣೆಗಳು ಮನಸ್ಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ ಎಂದರು.

ಉಪನ್ಯಾಸಕರಾದ ಕಿರಣ್ ದೇಸಾಯಿ ಮಾತನಾಡಿ, ಆಚರಣೆಗಳಲ್ಲಿ ಉತ್ಸಾಹ ಪ್ರೇರಣಾ ಶಕ್ತಿ ಕಡಿಮೆಯಾಗಬಾರದು. ಸಮಾಜದಲ್ಲಿ ಅರಿವಿನ ಬೆಳಕು ಮೂಡಬೇಕಿದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ಸಮಾಜ ಪಾಲ್ಗೊಂಡಾಗ ಮಾತ್ರ ಆಚರಣೆಗಳು ಅರ್ಥಪೂರ್ಣವಾಗುತ್ತವೆ ಎಂದು ಹೇಳಿದರು.

ಗ್ರಾಮ ಮುಖಂಡ ಕೆ.ಪಿ.ಕಿರಣ್ ಕುಮಾರ್ ಮಾತನಾಡಿ, ಬಸವೇಶ್ವರರು ಒಂದು ಧರ್ಮಕ್ಕೆ ಸಿಮೀತವಲ್ಲ. ಬಸವಾದಿ ಶಿವ ಶರಣರವತತ್ವಗಳನ್ನು ಜೀವನದಲ್ಲಿ ಅಳವಡಿಳಿಸಿಕೊಳ್ಳಬೇಕು. ಕಾಯಕ ತತ್ವ ಗ್ರಾಮೀಣದಲ್ಲಿ ಮರೆಯಾಗುತ್ತಿದೆ. ಸಂಸ್ಕಾರವಿಲ್ಲದ ಶಿಕ್ಷಣ ಪದ್ಧತಿಯಿಂದಾಗಿ ಸಮಾಜಕ್ಕೆ ವಿದ್ಯಾವಂತರೆ ಅಪಾಯಕಾರಿಗಳಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಜಗತ್ತಿನ ಸಾಂಸ್ಕೃತಿಕ ನಾಯಕನಾಗಿ ಬಸವೇಶ್ವರರು ಹೋರಹೊಮ್ಮಿದ್ದಾರೆ. ಸಮಾಜದಲ್ಲಿ ಸಮಾಜಮುಖಿ ಕಾರ್ಯಗಳಿಗೆ ಕೊಡುಗೈ ದಾನಿಗಳು ಕಡಿಮೆಯಾಗುತ್ತಿವೆ. ಪರಿವರ್ತನೆ ಜಗದ ನಿಯಮದಂತೆ ಪ್ರತಿಯೊಬ್ಬರು ಸಮಾಜಮುಖಿಗಳಾಗಬೇಕು. ವಚನಗಳು ದಾರಿ ದೀಪಮಾಡಿಕೊಂಡು ಜೀವನದಲ್ಲಿ ಅನುಸಂದಾನ ಮಾಡಿಕೊಳ್ಳಬೇಕು. ಹಳ್ಳಿಗಳಲ್ಲಿ ಸಮಾರಸ್ಯದ ಜೀನವಕ್ಕೆ ಪೆಟ್ಟು ಬೀಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ನಿವೃತ್ತ ಯೋಧ ನವೀನ್ ನಾಗಪ್ಪ, ಮಾಜಿ ಛೆರ್ಮಾನ್ ನಂದ್ಯಪ್ಪ, ಎಚ್.ಬಸಪ್ಪ, ಎಂ.ಪಾಲಾಕ್ಷಪ್ಪ, ಶಿವಲಿಂಗಪ್ಪ, ಅನ್ನಪೂರ್ಣ, ಎಚ್.ಜಿ ಮಲ್ಲಯ್ಯ, ಮಹಾರುದ್ರ, ಕೆ.ಪಿ.ಕಿರಣ್ ಕುಮಾರ್, ಸಂಜನಾ, ಶಂಕರಮೂರ್ತಿ, ಸಿಂಚನ, ರೋಜಾ ಮನುಪಾಟೀಲ್ ಇತರರಿದ್ದರು.