ಸಾರಾಂಶ
ಮಕ್ಕಳಲ್ಲಿ ಓದಿನ ಆಕರ್ಷಣೆ ಇರಬೇಕು. ಇದರಿಂದ ಶುದ್ಧ ಬರಹ ಹಾಗೂ ಕ್ರಿಯಾಶೀಲತೆ ವೃದ್ಧಿಯಾಗುತ್ತದೆ. ಕಲಿಕಾಸಕ್ತಿ ರೂಢಿಸಿಕೊಂಡಲ್ಲಿ ಸಾಧನೆಯ ಮಾರ್ಗ ಸುಲಭವಾಗುತ್ತದೆ ಎಂದು ಬನಹಟ್ಟಿಯ ಗಣ್ಯ ವರ್ತಕ ಶಂಕರ ಜುಂಜಪ್ಪನವರ ಹೇಳಿದರು.
ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ
ಮಕ್ಕಳಲ್ಲಿ ಓದಿನ ಆಕರ್ಷಣೆ ಇರಬೇಕು. ಇದರಿಂದ ಶುದ್ಧ ಬರಹ ಹಾಗೂ ಕ್ರಿಯಾಶೀಲತೆ ವೃದ್ಧಿಯಾಗುತ್ತದೆ. ಕಲಿಕಾಸಕ್ತಿ ರೂಢಿಸಿಕೊಂಡಲ್ಲಿ ಸಾಧನೆಯ ಮಾರ್ಗ ಸುಲಭವಾಗುತ್ತದೆ ಎಂದು ಬನಹಟ್ಟಿಯ ಗಣ್ಯ ವರ್ತಕ ಶಂಕರ ಜುಂಜಪ್ಪನವರ ಹೇಳಿದರು.ಬನಹಟ್ಟಿ ಸುವರ್ಣ ಪೆಟ್ಸ್ ನ ಸುರೇಖಾ ಆನಂದ ಪಟ್ಟಣ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ಬಡ ಮಕ್ಕಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿ ಮಾತನಾಡಿದ ಅವರು, ಬಡತನ ಕಲಿಕೆಗೆ ಅಡ್ಡಿಯಾಗದು, ಪ್ರತಿಭೆಗಳು ಗುಡಿಸಲಲ್ಲಿ ಜನ್ಮ ತಳೆದು ಅರಮನೆಯನ್ನೇ ಬೆಳಗಬಲ್ಲವು ಎಂಬ ಮಾತಿಗೆ ಹಲವಾರು ಸಾಧಕರು ನಿದರ್ಶನವಾಗಿದ್ದಾರೆ. ಆತ್ಮವಿಶ್ವಾಸ, ಛಲ ಮತ್ತು ಅವಿರತ ಯತ್ನ ಎಂತಹುದೇ ಸಾಧನೆಗೆ ಮೆಟ್ಟಿಲಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಗ್ಲೋಬಲ್ ಏಜ್ಯುಕೇಶನ್ ಸಂಸ್ಥಾಪಕ ಶಿವಾನಂದ ಬೆಳ್ಳವರಿ ಮಾತನಾಡಿ, ಅಸಾಧ್ಯ ಎಂಬ ಪದವೇ ವಿಶ್ವದಲ್ಲಿಲ್ಲ. ಶಿಕ್ಷಕರ ಸರಿಯಾದ ಮಾರ್ಗದರ್ಶನದಲ್ಲಿ ಏಕಾಗ್ರತೆ, ಸುರಕ್ಷಿತ ಆಹಾರ ಕ್ರಮ ಹಾಗೂ ಅವಿರತ ಅಧ್ಯಯನಶೀಲತೆ ಮೈಗೂಡಿಸಿಕೊಂಡಲ್ಲಿ ಮಕ್ಕಳು ಎಂಥದೇ ಕಠಿಣ ಪರಿಸ್ಥಿತಿಯನ್ನು ಮೆಟ್ಟಿ ನಿಂತು ಸಾಧನೆಯ ಪರಾಕಾಷ್ಠೆ ಮೆರೆಯಲು ಸಾಧ್ಯವೆಂದರು.ಪ್ರತಿಭಾವಂತ ವಿದ್ಯಾರ್ಥಿಗಳಾದ ಬಸವರಾಜ ಸಿಂಹಾಸನ, ಅನನ್ಯ ನಂದ್ಯಾಳರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜನತಾ ಶಿಕ್ಷಣ ಸಂಘದ ಕಾರ್ಯಾಧ್ಯಕ್ಷ ಬಸವಂತಪ್ಪ ಜಾಡಗೌಡ, ಪಂಡಿತ ಪಟ್ಟಣ, ಶ್ರೀಪಾದ ಬಾಣಕಾರ, ಮಲ್ಲಣ್ಣ ಕಕಮರಿ, ಗೀತಾ ಸಜ್ಜನ, ನೀಲಾ ಕಂಕಣಮೇಲಿ ವೇದಿಕೆಯಲ್ಲಿದ್ದರು.
ಶ್ರೀಶೈಲ ಬೀಳಗಿ, ಈರಪ್ಪ ಹಿಪ್ಪರಗಿ, ಪ್ರಕಾಶ ಹೋಳಗಿ, ಗುರು ಬಂದಿ, ಜಗದೀಶ ಸಕೋಜಿ, ಸಂಜಯ ಪಟ್ಟಣ, ಶಿವಲಿಂಗ ಇಟ್ನಾಳ, ವಿಶ್ವನಾಥ ಬಂದಿ, ಸುವರ್ಣ ಪಟ್ಟಣ, ರಾಜೇಶ್ವರಿ ಪಟ್ಟಣ, ಸುರೇಖಾ ಪಟ್ಟಣ ಸೇರಿದಂತೆ ಇತರರಿದ್ದರು. ಬಸವರಾಜ ಪಟ್ಟಣ ಸ್ವಾಗತಿಸಿದರು. ಶಿವಕುಮಾರ ಜುಂಜಪ್ಪನವರ ನಿರೂಪಿಸಿ, ವಂದಿಸಿದರು.