ಹಣಕ್ಕಿಂತ ಸಾಧನೆ ಮುಖ್ಯ: ಪ್ರೊ. ಎಂ.ಎಂ. ನರಗುಂದ

| Published : Jan 17 2025, 12:45 AM IST

ಹಣಕ್ಕಿಂತ ಸಾಧನೆ ಮುಖ್ಯ: ಪ್ರೊ. ಎಂ.ಎಂ. ನರಗುಂದ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕಷ್ಟದ ದಿನಗಳನ್ನು ಎದುರಿಸಿ ಹೇಗೆ ಸಾಧಕರಾದರು ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಆಸಕ್ತಿಯಿಂದ ಸತತ ಪ್ರಯತ್ನ ಮಾಡಿದರೆ ಎಂತಹ ಉನ್ನತ ಹುದ್ದೆಗೂ ಹೋಗಬಹುದು.

ಧಾರವಾಡ:

ಇಲ್ಲಿನ ಭಾರತಿ ನಗರದಲ್ಲಿರುವ ಗುರುದೇವ ಪದವಿ ಪೂರ್ವ ಸಮೂಹ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನವನ್ನು ವಿವೇಕ-2025 ಎಂಬ ಶೀರ್ಷಿಕೆ ಅಡಿ ಆಚರಿಸಲಾಯಿತು.

ನಿವೃತ್ತ ಪ್ರಾಚಾರ್ಯ ಪ್ರೊ. ಎಂ.ಎಂ. ನರಗುಂದ ಮಾತನಾಡಿ, ಅಬ್ದುಲ್ ಕಲಾಂ ಕಷ್ಟದ ದಿನಗಳನ್ನು ಎದುರಿಸಿ ಹೇಗೆ ಸಾಧಕರಾದರು ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಆಸಕ್ತಿಯಿಂದ ಸತತ ಪ್ರಯತ್ನ ಮಾಡಿದರೆ ಎಂತಹ ಉನ್ನತ ಹುದ್ದೆಗೂ ಹೋಗಬಹುದು. ಹಣಕ್ಕಿಂತ ಸಾಧನೆ ಮುಖ್ಯ, ಆತ್ಮಸ್ಥೈರ್ಯದಿಂದ ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಅನುಭವಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಕಾಲೇಜಿನ ನಿರ್ದೇಶಕ ಅಖಿಲ್ ಕುಮಾರ್ ಹಲಗತ್ತಿ ಮಾತನಾಡಿ, ವಿದ್ಯಾರ್ಥಿಗಳು ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು, ತಮ್ಮನ್ನು ತಾವು ಓದಿಗಾಗಿ ಸಮರ್ಪಿಸಿಕೊಂಡಾಗ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಪ್ರಾಚಾರ್ಯ ಮದನ್ ಇ.ಜಿ. ವಾರ್ಷಿಕ ವರದಿ ವಾಚಿಸಿದರು. ಪರೀಕ್ಷೆಗೆ ಕಡಿಮೆ ದಿನಗಳು ಇರುವುದರಿಂದ ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಿ ಕನಸನ್ನು ನನಸು ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಉಪಪ್ರಾಚಾರ್ಯ ಮಹಲಿಂಗ ಕಮತಗಿ ಮಾತನಾಡಿ, ತಂದೆ-ತಾಯಿ ಮತ್ತು ಶಿಕ್ಷಕರ ಮಾರ್ಗದರ್ಶನಂತೆ ಓದಿನಲ್ಲಿ ಶ್ರದ್ಧೆ, ಭಕ್ತಿ ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ಕಂಡುಕೊಳ್ಳಲು ಸಲಹೆ ನೀಡಿದರು.

ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಆಡಳಿತಾಧಿಕಾರಿ ಸಾಜಿದ್, ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿ ಇದ್ದರು. ಉಪನ್ಯಾಸಕಿ ಸಹನಾ, ಅದಿತಿ ನಿರೂಪಿಸಿದರು.