ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡರೆ ಸಾಧನೆ ಸಾಧ್ಯ: ನಾ.ಸು.ನಾಗೇಶ

| Published : Aug 12 2025, 12:30 AM IST

ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡರೆ ಸಾಧನೆ ಸಾಧ್ಯ: ನಾ.ಸು.ನಾಗೇಶ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಜೀವನ ಬಹಳ ಸುಂದರ, ಸಂಭ್ರಮ ಮತ್ತು ಮಹತ್ವವಾದದ್ದು. ಶಿಕ್ಷಣದ ಜೊತೆಗೆ ಶಿಸ್ತು, ವಿನಯ, ವ್ಯವಧಾನ, ಜಾಗೃತಿ, ಅಧ್ಯಯನ ಮತ್ತು ಸಾಮಾನ್ಯ ಜ್ಞಾನಗುಣ ಅಳವಡಿಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರ ಸಾಧನೆಗಳ ಬಗ್ಗೆ ತಿಳಿದುಕೊಳ್ಳಬೇಕು. ರಸಪ್ರಶ್ನೆಯಂತಹ ಕಾರ್ಯಕ್ರಮ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸುತ್ತವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡು ಸಾಧನೆಯ ಗುರಿ ಮುಟ್ಟಲು ಸಾಧ್ಯ ಎಂದು ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಹಿತಿ ನಾ.ಸು.ನಾಗೇಶ ತಿಳಿಸಿದರು.

ಪಟ್ಟಣದ ಮಾದರಿ ಶಾಲೆಯಲ್ಲಿ ಸ್ಥಳೀಯ ಕನ್ನಡ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟ ರಸಪ್ರಶ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಬಹಳ ಸುಂದರ, ಸಂಭ್ರಮ ಮತ್ತು ಮಹತ್ವವಾದದ್ದು. ಶಿಕ್ಷಣದ ಜೊತೆಗೆ ಶಿಸ್ತು, ವಿನಯ, ವ್ಯವಧಾನ, ಜಾಗೃತಿ, ಅಧ್ಯಯನ ಮತ್ತು ಸಾಮಾನ್ಯ ಜ್ಞಾನಗುಣ ಅಳವಡಿಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರ ಸಾಧನೆಗಳ ಬಗ್ಗೆ ತಿಳಿದುಕೊಳ್ಳಬೇಕು. ರಸಪ್ರಶ್ನೆಯಂತಹ ಕಾರ್ಯಕ್ರಮ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸುತ್ತವೆ ಎಂದರು.

ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ 11 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ವಿದ್ಯಾರ್ಥಿಗಳು ಹಾಗೂ ಶಾಲೆಗಳಿಂದ ಮಕ್ಕಳ ಜೊತೆ ಬಂದಿದ್ದ ಶಿಕ್ಷಕರು ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಶೀರಪಟ್ಟಣದ ವಿಸ್ಡಂ ಪಬ್ಲಿಕ್‌ಶಾಲೆ ವಿದ್ಯಾರ್ಥಿಗಳಾದ ಭುವನ್ ಮತ್ತು ಶ್ರೀಷ ಪ್ರಥಮ ಸ್ಥಾನ ಪಡೆದುಕೊಂಡರೆ, ದೇವಲಾಪುರದ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಾದ ಡಿ.ಎನ್.ಭೂಮಿಕಾ ಮತ್ತು ಟಿ.ಎಸ್. ಸಿಂಚನ ದ್ವಿತೀಯ ಸ್ಥಾನ ಪಡೆದುಕೊಂಡರು. ತಾಲೂಕಿನ ಮಯಿಗೋನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆ ವಿದ್ಯಾರ್ಥಿಗಳಾದ ಸಂಬಂಧನ್‌ಗೌಡ ಮತ್ತು ಎಂ.ಕೆ.ಪ್ರತಿಕ್ಷಾ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತ ವಿದ್ಯಾರ್ಥಿ ತಂಡಗಳಿಗೆ ನಗದು ರೂಪದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.

ಶಿಕ್ಷಕರಾದ ಎನ್.ಸಿ.ಶಿವಕುಮಾರ್, ಉಮಾ, ಮಂಜುನಾಥ್, ಗಂಗಾಧರ್, ಪತ್ರಕರ್ತ ಎಂ.ಕೆ.ಉಮೇಶ್ ಸೇರಿದಂತೆ ಹಲವರು ಇದ್ದರು.

ಇಂದಿನಿಂದ 16ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ನಾಗಮಂಗಲ:

ತಾಲೂಕಿನ ಬೋಗಾದಿ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊಸದಾಗಿ ಲಿಂಕ್‌ಲೈನ್ ಕಾಮಗಾರಿಗಳನ್ನು ಮಾಡಬೇಕಿರುವ ಹಿನ್ನೆಲೆಯಲ್ಲಿ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಕಾಂತಾಪುರ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಹಾಗೂ ಕಲ್ಲೇನಹಳ್ಳಿ, ಸುಖಧರೆ, ಮಾದಹಳ್ಳಿ, ಬಿ.ಶ್ರೀರಾಮನಹಳ್ಳಿ, ಬೋಗಾದಿ, ಬಾಳೇನಹಳ್ಳಿ, ಮುದ್ದನಹಳ್ಳಿ, ಬೊಮ್ಮನಾಯ್ಕನಹಳ್ಳಿ ಹಾಗೂ ಮಲ್ಲನಾಯ್ಕನಹಳ್ಳಿ ಗ್ರಾಮಗಳಲ್ಲಿ ಆ.12ರಿಂದ 16ರವರೆಗೆ ನಾಲ್ಕು ದಿನಗಳ ಕಾಲ ಪ್ರತಿನಿತ್ಯ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಆದ್ದರಿಂದ ಈ ಭಾಗದ ರೈತರು ಮತ್ತು ವಿದ್ಯುತ್ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ನಾಗಮಂಗಲ ಸೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಎಇಇ ಪ್ರಕಟಣೆಯಲ್ಲಿ ಕೋರಿದ್ದಾರೆ.ಇಂದಿನಿಂದ ಐದು ದಿನ ವಿದ್ಯುತ್ ವ್ಯತ್ಯಯ

ಮಂಡ್ಯ:

ತಾಲೂಕಿನ ಗುಡ್ಡೇನಹಳ್ಳಿ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊಸದಾಗಿ ಲಿಂಕ್‌ಲೈನ್ ಕಾಮಗಾರಿಗಳನ್ನು ಮಾಡಬೇಕಿರುವ ಹಿನ್ನೆಲೆಯಲ್ಲಿ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಫ್-8 ಚಿಣ್ಯ, ಎನ್‌ಜೆವೈ ಹಾಗೂ ಎಫ್-7 ಸಾಮಕಹಳ್ಳಿ ಎನ್‌ಜೆವೈ, 11ಕೆವಿ ಮಾರ್ಗಗಳಿಗೆ ಒಳಪಡುವ ಚಿಣ್ಯ, ಬ್ರಹ್ಮದೇವರಹಳ್ಳಿ, ಮಣ್ಣಹಳ್ಳಿ ಹಾಗೂ ಹೊಣಕೆರೆ ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಆ.12ರಿಂದ 16 ರವರೆಗೆ ನಾಲ್ಕು ದಿನಗಳ ಕಾಲ ಪ್ರತಿನಿತ್ಯ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಆದ್ದರಿಂದ ಈ ಭಾಗದ ರೈತರು ಮತ್ತು ವಿದ್ಯುತ್ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ನಾಗಮಂಗಲ ಸೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಎಇಇ ಪ್ರಕಟಣೆಯಲ್ಲಿ ಕೋರಿದ್ದಾರೆ.