ಶ್ರದ್ಧೆ, ಆಸಕ್ತಿ ಇದ್ದರೆ ಸಾಧನೆ ಸಾಧ್ಯ: ಪ್ರೊ.ಎನ್.ಕೆ. ಲೋಕನಾಥ್

| Published : Dec 08 2024, 01:18 AM IST

ಸಾರಾಂಶ

ಮನುಷ್ಯ ಭೂಮಿಯ ಮೇಲೆ ಉಗಮವಾದ ದಿನದಿಂದಲೂ ತನ್ನ ಭಾವನೆಯನ್ನು ಮತ್ತೊಬ್ಬರೊಡನೆ ತನ್ನದೇ ಆದ ಸಂಗೀತ ಮತ್ತು ನೃತ್ಯಗಳ ಮೂಲಕ ಹಂಚಿಕೊಂಡಿದ್ದಾನೆ. ಜತೆಗೆ ಬದುಕು ಕಟ್ಟಿಕೊಂಡು ಬಂದಿರುವುದನ್ನು ನೋಡಿದ್ದೆವೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳೂ ಸಾಂಸ್ಕೃತಿಕ ಪ್ರತಿಭೆ ಬೆಳಸಿಕೊಳ್ಳುವುದರಿಂದ ಅನೇಕ ಆವಕಾಶ ಲಭಿಸುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿ ಅನೇಕ ಕಲಾವಿದರು ಅನೇಕ ಸಾಧನೆಗಳನ್ನು ಮಾಡಿದ್ದಾರೆ, ಶ್ರದ್ಧೆ ಅಸ್ತಕಿಯಿಂದ ಶ್ರಮ ಪಟ್ಟರೆ ಎಲ್ಲಾವೂ ಸಾಧ್ಯವಾಗುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.

ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯವು 2024-25ನೇ ಶೈಕ್ಷಣಿಕ ಸಾಲಿನ ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನುಷ್ಯ ಭೂಮಿಯ ಮೇಲೆ ಉಗಮವಾದ ದಿನದಿಂದಲೂ ತನ್ನ ಭಾವನೆಯನ್ನು ಮತ್ತೊಬ್ಬರೊಡನೆ ತನ್ನದೇ ಆದ ಸಂಗೀತ ಮತ್ತು ನೃತ್ಯಗಳ ಮೂಲಕ ಹಂಚಿಕೊಂಡಿದ್ದಾನೆ. ಜತೆಗೆ ಬದುಕು ಕಟ್ಟಿಕೊಂಡು ಬಂದಿರುವುದನ್ನು ನೋಡಿದ್ದೆವೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳೂ ಸಾಂಸ್ಕೃತಿಕ ಪ್ರತಿಭೆ ಬೆಳಸಿಕೊಳ್ಳುವುದರಿಂದ ಅನೇಕ ಆವಕಾಶ ಲಭಿಸುತ್ತದೆ ಎಂದರು.

ವಿಶ್ವವಿದ್ಯಾನಿಲಯವು ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಆವಕಾಶ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಿಗುವುದರಿಂದ ಪ್ರತಿಭೆ ಅನಾವರಣಗೂಳಿಸಬಹುದು ಎಂದರು.

ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ ಮಾತನಾಡಿ, ಗ್ರಾಮೀಣ ಪ್ರತಿಭೆಗಳು ಹೆಚ್ಚಿನ ಸಂಖ್ಯೆಯಲ್ಲಿ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಸಾಂಸ್ಕೃತಿಕ ವೇದಿಕೆಗೆ ಹೆಚ್ಚಿನ ಆವಕಾಶ ಸಿಗುತ್ತದೆ. ಮೈಸೂರು ವಿವಿಯಲ್ಲಿ ಕಲಿತವರು ಉನ್ನತ ಮಟ್ಟದ ಹುದ್ದೆ ವಿಶ್ವ ಹಾಗೂ ರಾಜ್ಯಮಟ್ಟದಲ್ಲಿ ಪ್ರಖ್ಯಾತಿ ಹೊಂದಿದ್ದಾರೆ ಎಂದರು.

ಸಾಹಿತ್ಯ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ವಿದ್ಯಾರ್ಥಿಗಳೂ ಓದುವ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾತ್ರ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಜೀವನದಲ್ಲಿ ವೃತ್ತಿ ಬದುಕಿಗೆ ಸೀಮಿತವಾಗಿದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಹಿತ್ಯ, ಕಲೆಯನ್ನು ಬೆಂಬಲಿಸಬೇಕು ಎಂದರು. ಚಲನಚಿತ್ರ ಮತ್ತು ಕಿರುತರೆ ನಟಿ ಬಿ.ಆರ್. ಸುಷ್ಮಿತಾ ಹಾಗೂ ನಟ ಜಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಹಾಸ್ಯ ಕಾರ್ಯಕ್ರಮ ನೀಡಿ ಪ್ರೇಕ್ಷಕರು ಮತ್ತು ವಿದ್ಯಾರ್ಥಿಗಳನ್ನು ರಂಜಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲದ ನಿರ್ದೇಶಕ ಪ್ರೊ.ಸಿ. ಗುರುಸಿದ್ದಯ್ಯ, ಸಹಾಯಕ ನಿರ್ದೇಶಕ ಸುಷ್ಮಾ ಹಾಗೂ ವಿದ್ಯಾರ್ಥಿಗಳು ಇದ್ದರು.